8:36 PM Friday4 - April 2025
ಬ್ರೇಕಿಂಗ್ ನ್ಯೂಸ್
Bangaluru | ಚಿಲಿ ಅಧ್ಯಕ್ಷ ಗ್ಯಾಬ್ರಿಯಲ್ ಬೋರಿಕ್ ಫಾಂಟ್ ಬೆಂಗಳೂರಿಗೆ ಭೇಟಿ: 2… Mangaluru | ಸ್ಪೆಲ್‌ ಬೀ ವಿಜ್‌ ನ್ಯಾಶನಲ್‌ ಸ್ಪೆಲ್‌ ಬೀ: ಮಂಗಳೂರಿನ ಸಿಯೆಲ್‌… Bangaluru | ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ಜಲ ಮಂಡಳಿಯಿಂದ ವಿನೂತನ ಯೋಜನೆ:… Good News | ರೈತರಿಗೆ 7 ವರ್ಷಗಳ ನಂತರ ಮತ್ತೆ ಸೂಕ್ಷ್ಮ ನೀರಾವರಿಗೆ… Chikkamagaluru | ಕಾಫಿನಾಡಿನಲ್ಲಿ ಭಾರೀ ಮಳೆ: ಕೊಟ್ಟಿಗೆಹಾರ, ಬಣಕಲ್, ಬಾಳೂರು, ಚಾರ್ಮಾಡಿಯಲ್ಲಿ ವರ್ಷಧಾರೆ Solar power | ದೇಶದ 2,249 ರೈಲು ನಿಲ್ದಾಣಗಳಲ್ಲಿ 209 ಮೆಗಾವ್ಯಾಟ್‌ ಸೌರ… EX CM | ವಕ್ಸ್ ಆಸ್ತಿ ಕಬಳಿಸಿರುವುದನ್ನು ಮುಚ್ಚಿ ಹಾಕಲು ಕಾಂಗ್ರೆಸ್‌ ತಿದ್ದುಪಡಿ… Chikkamagaluru | ಅನ್ನದಾತ ಆತ್ಮಹತ್ಯೆ: ಕಿರುಕುಳ ನೀಡಿದ ಬ್ಯಾಂಕ್ ಎದುರು ರೈತನ ಪಾರ್ಥಿವ… Mangaluru | ಜಾಮರ್ ಸಮಸ್ಯೆ ಬಗೆಹರಿಸದಿದ್ದರೆ ಜೈಲಿನೊಳಗೆ ನುಗ್ಗಿ ಕಿತ್ತು ಬಿಸಾಕ ಬೇಕಾಗುತ್ತದೆ:… Delhi | ರಾಜ್ಯದ್ದು “ಜನ-ಕರ” ವಸೂಲಿ ಸರಕಾರ: ಕಾಂಗ್ರೆಸ್‌ ವಿರುದ್ಧ ಕೇಂದ್ರ ಸಚಿವ…

ಇತ್ತೀಚಿನ ಸುದ್ದಿ

ಮಲ್ಪೆ ಮೀನು ಲಾರಿ ಡ್ರೈವರ್ ಅಪಹರಣ ಪ್ರಕರಣ ಸುಖಾಂತ್ಯ: ತಿರುವನಂತಪುರದಿಂದ ಚಾಲಕನ ಕರೆದು ತಂದ ಪೊಲೀಸರು

06/10/2021, 19:20

ಮಲ್ಪೆ(reporterkarnataka.com): ಕೆಲವು ದಿನಗಳ ಹಿಂದೆ ಮಲ್ಪೆಯಲ್ಲಿ ನಡೆದ ಮೀನು ಟ್ರಕ್ ಚಾಲಕನ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದೆ. ಪೊಲೀಸರು ಅಪಹರಣಗೊಂಡ ಚಾಲಕನನ್ನು ಪತ್ತೆ ಹಚ್ಚಿ ತಿರುವನಂತಪುರದಿಂದ ವಾಪಸ್ ಕರೆ ತಂದಿದ್ದಾರೆ.

ಘಟನೆ ವಿವರ: ಮೀನು ವ್ಯಾಪಾರಿಯೊಬ್ಬರನ್ನು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ ಉಡುಪಿಯ ಮಲ್ಪೆಯಲ್ಲಿ ನಡೆದಿತ್ತು. ಈ ಕುರಿತು ಸಾಧಿಕ್ ಎಂಬವವರು ದೂರು ನೀಡಿದ್ದರು.
ಚಿಕ್ಕಮಗಳೂರಿನ ಕೊಪ್ಪದಿಂದ ತಮ್ಮನಾದ ಸುಲೈಮಾನ್ ಎಂಬವರು ಮೀನು ಲಾರಿಯ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಸೆ.30 ರಂದು ಬೆಳಿಗ್ಗೆ 9. 00 ಗಂಟೆಗೆ ಕೊಪ್ಪದ ಮನೆಯಿಂದ ಮಲ್ಪೆಗೆ ಮೀನು ಲಾರಿಯ ಚಾಲಕ ಕೆಲಸಕ್ಕೆ ಬಂದಿದ್ದ. ಅ.1ರಂದು ಇನ್ನೊಬ್ಬ ತಮ್ಮನಾದ ಶಂಶುದ್ದೀನ್ ಎಂಬಾತ ಸುಲೈ ಮಾನ್ ಗೆ ಕರೆ ಮಾಡಿದಾಗ ಪೋನ್ ಕರೆ ಸ್ವೀಕರಿಸಲಿಲ್ಲ.

ಸೆ.2ರಂದು ಬೆಳಗ್ಗೆ 9.00 ಗಂಟೆಗೆ ಸುಲೈಮಾನ್ ನ ಮೊಬೈಲ್ ನಂಬ್ರದಿಂದ ಶಂಶುದ್ದೀನ್ ಗೆ ಕರೆ ಬಂದಿತ್ತು. ಆ ಕಡೆಯಿಂದ ಸಮೀರ್ ಎಂಬವನು ಮಾತನಾಡಿ ಸುಲೈ ಮಾನ್ ನಮ್ಮ ಜೊತೆಗೆ ಇದ್ದಾನೆ. ಆತನನ್ನು ಬಿಡಬೇಕಾದರೆ ನಮಗೆ 15 ಲಕ್ಷ ಕೊಡಬೇಕು.

ಆತನನ್ನು ಸೆ.1 ರಂದು ಮಲ್ಪೆಯಿಂದ ನಾವು ಅಪಹರಣ ಮಾಡಿದ್ದೇವೆ ಎಂದು ತಿಳಿಸಿದ್ದನು.ನಂತರ ಸುಲೈಮಾನ್ ಸಂಬಂಧಿಕರು ಮಲ್ಪೆಗೆ ಬಂದು ಆತನ ಬಗ್ಗೆ ವಿಚಾರಿಸಿದ್ದರು. ಸುಲೈಮಾನ್ ಮೀನು ಲಾರಿಯ ಚಾಲಕ ಕೆಲಸದ ಜೊತೆಗೆ ಮೀನನ್ನು ಮಲ್ಪೆಯಲ್ಲಿ ತೆಗೆದುಕೊಂಡು ಕೇರಳಕ್ಕೆ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ವಿಷಯ ತಿಳಿದು ಬಂದಿತ್ತು.

ನಂತರ  ಸುಲೈಮಾನ್ ಮೊಬೈಲಿಗೆ ಕರೆ ಮಾಡಿದಾಗ ಕರೆಯನ್ನು ಸಮೀರ್ ಎಂಬವನು ಸ್ವೀಕರಿಸಿ ನಮಗೆ ಸುಲೈಮಾನ್ ಮೀನು ವ್ಯವಹಾರದಲ್ಲಿ  15 ಲಕ್ಷ ಹಣ ಕೊಡಬೇಕು.  ಆ ಕಾರಣದಿಂದ ಅವನನ್ನು ಕೇರಳದ ಹನಸ್ ಮತ್ತು ಅವರ ಸಹೋದರರು  ಅಪಹರಿಸಿದ್ದಾರೆ. ನೀವು ಬಂದು 15 ಲಕ್ಷ ಹಣ ಕೊಟ್ಟು ಕರೆದುಕೊಂಡು ಹೋಗಿ, ಇಲ್ಲದಿದ್ದರೆ ಆತನನ್ನು ಕೊಂದು ಸಮುದ್ರಕ್ಕೆ ಬಿಸಾಡುತ್ತೇವೆ ಎಂದು ಬೆದರಿಕೆ ಹಾಕಿದ್ದನು. ಈ ಕುರಿತು ಸಾದಿಕ್ ಮಲ್ಪೆ ಠಾಣೆಗೆ ದೂರು ನೀಡಿದ್ದರು. 

ಇತ್ತೀಚಿನ ಸುದ್ದಿ

ಜಾಹೀರಾತು