12:16 AM Friday29 - November 2024
ಬ್ರೇಕಿಂಗ್ ನ್ಯೂಸ್
ಮೂಡಿಗೆರೆ: ಬಗ್ಗಸಗೋಡು ಗ್ರಾಮದಲ್ಲಿ ನಾಯಿ ದಾಳಿಯಿಂದ 5ರ ಹರೆಯದ ಬಾಲಕಿಗೆ ಗಾಯ ಹೆಚ್ಚುತ್ತಿರುವ ಗರ್ಭಿಣಿಯರ, ಬಾಣಂತಿಯರ ಸಾವು ಪ್ರಕರಣ: ಬಳ್ಳಾರಿ ವಿಮ್ಸ್‌ ಆಸ್ಪತ್ರೆಗೆ ಸರಕಾರದಿಂದ ಸರ್ಜರಿ!! ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ, ಗರ್ಭಿಣಿಯರ ಸಾವು: ತನಿಖೆಗೆ ಅಗ್ರಹಿಸಿ ಜನವಾದಿ ಮಹಿಳಾ ಸಂಘಟನೆ… ಲಂಡನ್ ವಾಲ್ವ್ಸ್ 2024 ರಲ್ಲಿ ಮಿಂಚಿದ ಭಾರತ: ಹೃದಯ ಕವಾಟ ಆವಿಷ್ಕಾರ ‘ಮೈವಾಲ್… ಹುಣಸಗಿ: ವಿದ್ಯಾರ್ಥಿಗಳಿಂದ ಕೆಎಸ್ಸಾರ್ಟಿಸಿ ಬಸ್ ತಡೆದು ಪ್ರತಿಭಟನೆ; ಸಾರ್ವಜನಿಕರ ಸಾಥ್ ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ

ಇತ್ತೀಚಿನ ಸುದ್ದಿ

ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಪ್ರತಿಭಟನೆ: ಕಾಂಗ್ರೆಸ್ ಕಾರ್ಯಕರ್ತರಿಂದಲೂ ಪ್ರತಿಭಟನೆ; ಪರ- ವಿರೋಧ ಘೋಷಣೆ

10/01/2022, 11:04

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಶ್ರೀನಿವಾಸಪುರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜಮೀನು ವಿವಾದವೊಂದರ ಬಗ್ಗೆ ವಿಚಾರಿಸಲು ಹೋಗಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್‌.ನಾರಾಯಣಸ್ವಾಮಿ ಅವರೊಂದಿಗೆ ಶಾಸಕ ಕೆ.ಆರ್.ರಮೇಶ್‌ ಕುಮಾರ್‌ ಅನುಚಿತವಾಗಿ ಮಾತನಾಡಿದ್ದಾರೆ ಎಂದು ಆಪಾದಿಸಿ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರ ನೇತೃತ್ವದಲ್ಲಿ ಎಂಜಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಲಾಯಿತು .


ಶಾಸಕ ಜಿ.ಕೆ.ವೆಂಕಟಶಿವಾ ರೆಡ್ಡಿ ಪ್ರತಿಭಟನ ನಿರತ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ , ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಅವರು , ಜನಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ ಅವರನ್ನು ಪೊಲೀಸ್ ಠಾಣೆಯಲ್ಲಿ ಅನುಚಿತವಾಗಿ ಮಾತನಾಡಿರುವುದು ಖಂಡನೀಯ . ಸಣ್ಣ ಪುಟ್ಟ ವಿಚಾರಗಳಲ್ಲಿ ಮೂಗು ತೂರಿಸುವ ಬದಲು ಸಮಯವನ್ನು ತಾಲ್ಲೂಕು ಅಭಿವೃದ್ಧಿಗೆ ಬಳಸಲಿ ಎಂದು ಹೇಳಿದರು.

ಬಡವರು , ಪರಿಶಿಷ್ಟ ಜಾತಿಯವರ ಬಗ್ಗೆ ಕಣ್ಣೀರು ಸುರಿಸುವ ರಮೇಶ್ ಕುಮಾರ್ , ಪರಿಶಿಷ್ಟ ಜಾತಿಯವರಿಗೆ ಸಹಾಯ ಮಾಡಲು ಅಡ್ಡ ಬರುತ್ತಾರೆ. ಜಾತಿಗಳನ್ನು ಎತ್ತಿಕಟ್ಟಿ , ಧರ್ಮಗಳ ನಡು ಒಡಕು ತಂದು ರಾಜಕೀಯ ಮಾಡುತ್ತಾರೆ . ಅದು ಹೆಚ್ಚು ಕಾಲ ನಡೆಯುವುದಿಲ್ಲ ಎಂದು ಹೇಳಿದರು . 

ತಾಲ್ಲೂಕು ಜೆಡಿಎಸ್ ಮುಖಂಡರಾದ ಬಿ.ವೆಂಕಟರೆಡ್ಡಿ , ರಾಜಣ್ಣ , ರವಿ ,ಗಣೇಶ್ , ಬೈರಾರೆಡ್ಡಿ , ಕೆ.ಶಿವಪ್ಪ , ನಂಜುಂಡಪ್ಪ , ರಾಮಚಂದಪ್ಪ , ಮಂಜು ಮತ್ತಿತರರು ಮಾತನಾಡಿ , ಶಾಸಕ ರಮೇಶ್‌ ಕುಮಾರ್‌ ಅವರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು . ಘಟನೆಯನ್ನು ಖಂಡಿಸಿದರು . ಮುಖಂಡರಾದ ಬಿ.ಎ.ಶಿವಾರಡ್ಡಿ , ಎಂ.ವಿ.ಶ್ರೀನಿವಾಸ್ , ಪೂಲ ಶಿವಾರೆಡ್ಡಿ , ತೂಪಲ್ಲಿ ಆರ್‌.ಚೌಡರೆಡ್ಡಿ , ಆನಂದ್ , ಆಪೂರು ರಾಜು , ಕಾರ್ ಬಾಬು , ಶೀನಾಥ್ , ಮಂಜು ಮತ್ತಿತರರು ಇದ್ದರು . ಜೆಡಿಎಸ್ ಮುಖಂಡರು ಭಾಷಣ ಮುಗಿಸಿ , ದೂರು ನೀಡಲು ಪೊಲೀಸ್ ಠಾಣೆ ಕಡೆ ಹೆಜ್ಜೆ ಹಾಕಿದರು . ಅಷ್ಟರಲ್ಲಿ ವಿರುದ್ಧ ದಿಕ್ಕಿನಿಂದ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಎದುರಾಯಿತು . ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹಾಗೂ ಜೆಡಿಎಸ್‌ ವಿರುದ್ಧ ಘೋಷಣೆ ಕೂಗುತ್ತಿದ್ದ ಕಾರ್ಯಕರ್ತರು ರಸ್ತೆಗಿಳಿದರು .

ಕಾಂಗ್ರೆಸ್ ಮುಖಂಡರಾದ ದಿಂಬಾಲ ಅಶೋಕ್ , ಸಂಜಯ್‌ರೆಡ್ಡಿ , ಎಂ.ಶ್ರೀನಿವಾಸನ್ , ಕೆ.ಕೆ.ಮಂಜು , ಅಯ್ಯಪ್ಪ , ದರ್ಶನ್ , ಶಿವರಾಜ್ , ಹರೀಶ್ ಯಾದವ್ , ಮುನಿರಾಜು , ನಾಗರಾಜ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು . 

ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ಎರಡೂ ಗುಂಪುಗಳ ನಡುವೆ ಕೋಟೆಯಂತೆ ನಿಂತು ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆದರು . ಸ್ಥಳಕ್ಕೆ ಧಾವಿಸಿ ಬಂದ ಜಿಲ್ಲಾ ಸಹಾಯಕ ರಕ್ಷಣಾಧಿಕರಿ ರಮೇಶ್ , ಎರಡೂ ಪಕ್ಷಗಳ ಮುಖಂಡರನ್ನು ಭೇಟಿಯಾಗಿ , ಮನವಿ ಪತ್ರ ಸ್ವೀಕರಿಸಿದ ಬಳಿಕ ಎರಡೂ ಕಡೆಯವರು ಪ್ರತಿಭಟನೆ ವಾಪಸ್ ಪಡೆದರು . ಡಿವೈಎಸ್‌ಪಿ ಕೆ.ಸಿ.ಗಿರಿ , ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್‌ಗಳಾದ ಕೆ.ರವಿಕುಮಾರ್‌ , ಎನ್.ಆರ್.ರಾಘವೇಂದ್ರ , ಪ್ರದೀಪ್ ಸಿಂಗ್ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡರು .

ಇತ್ತೀಚಿನ ಸುದ್ದಿ

ಜಾಹೀರಾತು