ಇತ್ತೀಚಿನ ಸುದ್ದಿ
ಮಾಜಿ ಸಂಸದರ ಮೊದಲ ಪುಣ್ಯಸ್ಮರಣೆ: ನಂಜನಗೂಡಿನ ನೂತನ ರೈಲ್ವೆ ಮೇಲ್ಸೇತುವೆಗೆ ದೃವನಾರಾಯಣ್ ಅವರ ಹೆಸರಿಡುವಂತೆ ಅಭಿಮಾನಿಗಳ ಒತ್ತಾಯ
12/03/2024, 23:50

ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಉತ್ತಮ ಸಂಸದೀಯ ಪಟು ಮಾಜಿ ಸಂಸದ ದೃವನಾರಾಯಣ್ ಅವರ ಮೊದಲ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ನಂಜನಗೂಡಿನ ಕಾಂಗ್ರೆಸ್ ಪಕ್ಷದ ವತಿಯಿಂದ ಪಕ್ಷದ ಕಚೇರಿಯಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಸೇರಿದಂತೆ ಪಕ್ಷದ ಮುಖಂಡರು ದೃವನಾರಾಯಣ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ತಮ್ಮ ಭಕ್ತಿ ನಮನ ಸಲ್ಲಿಸಿದರು.
ಬಳಿಕ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಸೇರಿದಂತೆ ಹಲವು ಮುಖಂಡರು ಮಾತನಾಡಿ ದೃವನಾರಾಯಣ್ ಅವರು ಶಾಸಕರಾಗಿ, ಸಂಸದರಾಗಿ ನಂಜನಗೂಡು ಸೇರಿದಂತೆ ಇಡೀ ಚಾಮರಾಜನಗರ ಲೋಕಸಭಾ ಕ್ಷೇತ್ರದಾದ್ಯಂತ ಶಿಕ್ಷಣ, ಆರೋಗ್ಯ, ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಿ ಕಡಿಮೆ ಅವಧಿಯಲ್ಲಿ ದಣಿವರಿಯದ ನಾಯಕರಾಗಿ ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಜನಾನುರಾಗಿಯಾಗಿದ್ದರು ಎಂದು ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಅವರ ಹೆಸರು ಇನ್ನೂ ಚಿರಾಯುವಾಗಿ ಉಳಿಯಬೇಕಾದರೆ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಾದ್ಯಂತ ರಸ್ತೆಗಳು, ವೃತ್ತಗಳು, ಅವರು ನಿರ್ಮಿಸಿದ ರೈಲ್ವೆ ಮೇಲ್ಸೇತುವೆಗಳಿಗೆ ಅವರ ಹೆಸರಿಡುವಂತೆ ಒತ್ತಾಯಿಸಿದರು
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಟ್ಟಿಮಹೇಶ್, ನಗರ ಘಟಕದ ಅಧ್ಯಕ್ಷ ಶಂಕರ್, ಮುಖಂಡರುಗಳಾದ ಮಾರುತಿ, ನಾಗೇಶ್ ರಾಜ್ , ಮಾದಪ್ಪ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ , ಶ್ರೀಧರ್, ಶಶಿರೇಖಾ ಕರಳಪುರನಾಗರಾಜ್, ನಗರಸಭಾ ಸದಸ್ಯರುಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.