ಇತ್ತೀಚಿನ ಸುದ್ದಿ
ಮಾಜಿ ಸಚಿವ, ಉದ್ಯಮಿ ಕೃಷ್ಣ ಪಾಲೆಮಾರ್ ಗೆ ‘ಗಡಿನಾಡ ರತ್ನ’ ಪ್ರಶಸ್ತಿ: 20ರಂದು ದುಬೈನಲ್ಲಿ ಪ್ರದಾನ
11/11/2022, 06:35
ಮಂಗಳೂರು(reporterkkarnataka.com): ಖ್ಯಾತ ಉದ್ಯಮಿಗಳಾದ ಕೃಷ್ಣ ಜೆ. ಪಾಲೆಮಾರ್ ಅವರಿಗೆ ದುಬೈನ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಪ್ರತಿಷ್ಠಿತ ‘ಗಡಿನಾಡ ರತ್ನ’ ಪ್ರಶಸ್ತಿ ಘೋಷಿಸಿದೆ.
ನವೆಂಬರ್ 20ರಂದು ದುಬೈನ ಅಲಸಫಾ ಪ್ರದೇಶದಲ್ಲಿರುವ ಜಗದ್ಗುರು ಸುತ್ತೂರು ಸಂಸ್ಥಾನ ಶಾಲಾ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ
ನಡೆಯಲಿದೆ.
ಶಾಸಕರಾದ ರಘುನಾಥ ರಾವ್ ಮಲ್ಕಾಪುರೆ, ಪ್ರಕಾಶ್
ರಾಥೋಡ್, ರಾಜ್ಯ ಗಡಿನಾಡು ಅಭಿವೃದ್ಧಿ ನಿಗಮದ ಅಧ್ಯಕ್ಷ,b ಮಾಜಿ ಐಎಎಸ್ ಅಧಿಕಾರಿ ಸಿ. ಸೋಮಶೇಖರ್, ಮಂಜೇಶ್ವರದ ಶಾಸಕ ಎ.ಕೆ.ಎಂ. ಅಶ್ರಫ್,ಕ್ವಾಲಿಟಿ ಇಂಡಿಯಾ ಫೌಂಡೇಶನ್ ಅಧ್ಯಕ್ಷ ಡಾ. ವೆಂಕಟೇಶ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.