10:42 PM Saturday18 - April 2026
ಬ್ರೇಕಿಂಗ್ ನ್ಯೂಸ್
ನವ ಮಂಗಳೂರು ಬಂದರಿಗೆ ಐಷಾರಾಮಿ ಕ್ರೂಸ್ ಹಡಗು ಆಗಮನ: ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ ಹಾಸನದಲ್ಲಿ ಮೂರು ದಿನಗಳ ಆಪರೇಷನ್‌ ಯಶಸ್ವಿ: ನರಹಂತಕ ಕಾಡಾನೆ ಸೆರೆ ಬಳ್ಳಾರಿ | ಪ್ಯಾರಚೂಟ್ ತರಬೇತಿ ವೇಳೆ ತಾಂತ್ರಿಕ ದೋಷ: 50 ಅಡಿ ಎತ್ತರದಿಂದ… ತೀರ್ಥಹಳ್ಳಿಯಲ್ಲಿ ಕುಡಿಯುವ ನೀರಿನ ಬಾವಿಗೆ ವಿಷ: ಪ್ರಕರಣ ದಾಖಲು Udupi | ಕಾಪು ಬಳಿ ಭೀಕರ ಲಾರಿ-ಕಾರು ಅಪಘಾತ: ಓರ್ವ ಸಾವು; ಇಬ್ಬರು… ಮಂತ್ರಾಲಯದ ಬಳಿ ಭೀಕರ ಅಪಘಾತ: 8 ಮಂದಿ ಸಾವು, ತರೀಕೆರೆ ತಾಲೂಕಿನ ಇಬ್ಬರು… ಶಾಸಕರು ಸಚಿವ ಸ್ಥಾನ ಕೇಳೋದು ತಪ್ಪಲ್ಲ, ಸಂಪುಟ ಪುನರ್ ರಚನೆ ಆಗಲಿ: ಆರೋಗ್ಯ… ಯೋಗೇಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿಗೆ 17 ಮಂದಿಗೆ ಜೀವಾವಧಿ… ಪುತ್ರನ ಮೇಲಿನ ಹಲ್ಲೆ ಕೇಸ್ ಕೈಬಿಡಿ: ಅನಂತ ಕುಮಾರ್ ಹೆಗಡೆ ಮನವಿಗೆ ಸ್ಪಂದಿಸಿದ… ಕೋಡಪದವಿನಲ್ಲಿ ಚಿನ್ನದ ಸರ ಕದ್ದ ಪ್ರಕರಣಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಫೋಟೋದ ವ್ಯಕ್ತಿಗೂ…

ಇತ್ತೀಚಿನ ಸುದ್ದಿ

ನವ ಮಂಗಳೂರು ಬಂದರಿಗೆ ಐಷಾರಾಮಿ ಕ್ರೂಸ್ ಹಡಗು ಆಗಮನ: ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ

18/04/2026, 22:40

ಮಂಗಳೂರು(reporterkarnataka.com): ನವ ಮಂಗಳೂರು ಬಂದರು ಪ್ರಾಧಿಕಾರ (NMPA) ಶನಿವಾರ ಐಷಾರಾಮಿ ಕ್ರೂಸ್ ಹಡಗು ‘ಸೆವನ್ ಸೀಸ್ ಮರಿನರ್’ ಅನ್ನು ಸ್ವಾಗತಿಸಿದ್ದು, ಇದು ಭಾರತದ ಪಶ್ಚಿಮ ಕರಾವಳಿಯಲ್ಲಿ ಕ್ರೂಸ್ ಪ್ರವಾಸೋದ್ಯಮ ಉತ್ತೇಜಿಸುವಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ.
ಬಹಮಾಸ್ ಧ್ವಜ ಹೊಂದಿರುವ ಈ ಹಡಗು ಕೊಚ್ಚಿಯಿಂದ ಆಗಮಿಸಿ, ಬರ್ಥ್ ನಂ.4ರಲ್ಲಿ ನಿಲುಗಡೆಗೊಂಡಿತು. ಹಡಗಿನಲ್ಲಿ ಒಟ್ಟು 607 ಪ್ರಯಾಣಿಕರು ಮತ್ತು 460 ಸಿಬ್ಬಂದಿ ಇದ್ದರು. ಈ ಹಡಗು ಮರ್ಮುಗೋವ್ ಕಡೆಗೆ ಮುಂದಿನ ಪ್ರಯಾಣ ಮುಂದುವರಿಸಿದೆ.

*ಪ್ರಯಾಣಿಕರಿಗೆ ವಿಶೇಷ ಪ್ರವಾಸ:*
ಹಡಗು ಮತ್ತು ಪ್ರಯಾಣಿಕರ ನಿರ್ವಹಣೆಯ ಸುಗಮವಾಗಿ ನಡೆಸಲು ನವ ಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ), ಕಸ್ಟಮ್ಸ್, ಇಮಿಗ್ರೇಶನ್, ಸಿಐಎಸ್‌ಎಫ್‌ ಹಾಗೂ ಇತರೆ ಸಂಬಂಧಿತ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿತು. ಭೇಟಿ ನೀಡಿದ ಪ್ರವಾಸಿಗರಿಗೆ ಕಾರ್ಕಳ, ಮೂಡಬಿದಿರೆ, ಪಿಲಿಕುಳ ಹಾಗೂ ಮಂಗಳೂರು ನಗರದ ಪಿಲಿಕುಳ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಿಗೆ ವಿಶೇಷ ಪ್ರವಾಸ ವ್ಯವಸ್ಥೆ ಮಾಡಲಾಗಿತ್ತು.
ಈ ಯಶಸ್ವಿ ಕಾರ್ಯಾಚರಣೆ ನವ ಮಂಗಳೂರು ಬಂದರನ್ನು ಅಂತಾರಾಷ್ಟ್ರೀಯ ಕ್ರೂಸ್ ಪ್ರವಾಸೋದ್ಯಮದ ಪ್ರಮುಖ ತಾಣವಾಗಿ ರೂಪಿಸುವಲ್ಲಿ ಮತ್ತಷ್ಟು ಬಲ ತುಂಬಿದ್ದು, ಉತ್ತಮ ಮಟ್ಟದ ಸೇವೆಗಳ ಒದಗಿಸುವಲ್ಲಿ ನವ ಮಂಗಳೂರು ಬಂದರು ಪ್ರಾಧಿಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು