ಇತ್ತೀಚಿನ ಸುದ್ದಿ
ಎಲ್‌ಪಿಜಿ ಗ್ಯಾಸ್ ಬೆಲೆ ಹೆಚ್ಚಳ: ಡಿಸೆಂಬರ್ ಆರಂಭದಲ್ಲೇ ಜನಸಾಮಾನ್ಯರಿಗೆ ಹಣದುಬ್ಬರ ಬಿಸಿ
01/12/2021, 10:34
ಹೊಸದಿಲ್ಲಿ(reporterkarnataka.com): ಇಂದು ಡಿಸೆಂಬರ್ ತಿಂಗಳ ಮೊದಲ ದಿನವಾಗಿದ್ದು, ತಿಂಗಳ ಮೊದಲ ದಿನವೇ ಜನಸಾಮಾನ್ಯರಿಗೆ ಹಣದುಬ್ಬರದ ದೊಡ್ಡ ಹೊಡೆತ ಬಿದ್ದಿದೆ. ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಡಿಸೆಂಬರ್ 1ರಿಂದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿವೆ.
ಚುನಾವಣೆ ದೃಷ್ಟಿಯಿಂದ ಕೇಂದ್ರ ಸರ್ಕಾರ ಸಿಲಿಂಡರ್ ಬೆಲೆ ಕಡಿಮೆಗೊಳಿಸಬಹುದು ಎಂದು ಆಶಾವಾದ ವಿತ್ತು.ಆದರೆ ಹಣದುಬ್ಬರ ಪರಿಣಾಮವಾಗಿ ಸಿಲಿಂಡರ್ ಬೆಲೆ ಎರಿಕೆ ಕಂಡಿದೆ.
ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 103.50 ರೂ.ವರೆಗೆ ಹೆಚ್ಚಿಸಿದೆ. ತೈಲ ಕಂಪನಿಗಳು 14.2 ಕೆಜಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸದಿರುವುದು ದೊಡ್ಡ ಸಮಾಧಾನದ ವಿಷಯವಾಗಿದೆ. ಇದರ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ