9:04 PM Saturday2 - May 2026
ಬ್ರೇಕಿಂಗ್ ನ್ಯೂಸ್
ಅಂಜನಾದ್ರಿ ದರ್ಶನಕ್ಕೆ ಹೊರಟಿದ್ದ ಭಕ್ತರ ವಾಹನದ ಟಯರ್ ಬ್ಲಾಸ್ಟ್: ಓರ್ವ ಸಾವು, 7… ಶೃಂಗೇರಿ ವಿಧಾನಸಭಾ ಕ್ಷೇತ್ರ: ಮರು ಮತ ಎಣಿಕೆಯಲ್ಲೂ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡಗೆ… ರಾಜ್ಯದಲ್ಲಿರುವ ಹೊರ ರಾಜ್ಯ ನೋಂದಣಿ ವಾಹನಗಳಿಗೆ ಹೊಸ ತೆರಿಗೆ: ಸುಗ್ರೀವಾಜ್ಞೆ ಜಾರಿ ಕೃಷಿ ಅಧಿಕಾರಿಗಳ ದಾಳಿ: ಅಕ್ರಮ ಯೂರಿಯಾ ದಾಸ್ತಾನು ಪತ್ತೆ; 399 ಬ್ಯಾಗ್ ರಸಗೊಬ್ಬರ… ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು 1.20 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ಆಭರಣ,… Mangaluru | ಪರಪ್ಪನ ಅಗ್ರಹಾರ ಜೈಲ್ ನಲ್ಲಿ ಕೈದಿಯಿಂದ ಮೊಬೈಲ್ ನಲ್ಲೇ ಪತ್ನಿಯ… ಮಗಳ ಮದುವೆ ಸಾಲ ತೀರಿಸಲು ಅಳಿಯನ ಮನೆಗೆ ಅತ್ತೆ ಕನ್ನ: 110 ಗ್ರಾಂ… ಹೇಮಾವತಿ ನಾಲೆಗೆ ಉರುಳಿ ಬಿದ್ದ ಕಾರು: ತಾಯಿ- ಮಗು ಸಾವು; ಧರ್ಮಸ್ಥಳದಿಂದ ದೇವನಹಳ್ಳಿಗೆ… ಧಾರವಾಡದಲ್ಲಿ ಟಿಬೇಟಿಯನ್ ಬಿಕ್ಕು ಹತ್ಯೆ: ಬೇರೆ ಕಡೆ ಕೊಲೆ ಮಾಡಿ ಎಸೆದಿರುವ ಶಂಕೆ ಉದ್ಯೋಗ ಖಾತ್ರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿ ಸಾವು: ಬಿಸಿಲಿನ ತಾಪಮಾನಕ್ಕೆ…

ಇತ್ತೀಚಿನ ಸುದ್ದಿ

ಲೋಕಸಭೆಯ ಸಂದೇಶದ ಚುನಾವಣೆ, ಗ್ಯಾರಂಟಿಗೆ ಒಪ್ಪದ ಮತದಾರ: ವಿಜಯೋತ್ಸವದಲ್ಲಿ ಶಾಸಕ ಡಾ.ಭರತ್ ಶೆಟ್ಟಿ ಅಭಿಮತ

03/12/2023, 22:41

ಸುರತ್ಕಲ್(reporterkarnataka.com):ದೇಶದ ಪ್ರಮುಖ ರಾಜ್ಯಗಳ ಚುನಾವಣೆಯ ಫಲಿತಾಂಶ ಲೋಕಸಭೆಯ ಸಂದೇಶದ ಚುನಾವಣೆಯಾಗಿದೆ. ಗ್ಯಾರಂಟಿಗಿಂತ ನಮಗೆ ದೇಶ, ರಾಷ್ಟ್ರೀಯತೆ ಮುಖ್ಯ ಎಂದು ಮತದಾರ ಬಿಜೆಪಿ ಬೆಂಬಲಿಸಿ ಮತದಾನ ಮಾಡಿದ್ದಾರೆ. ಇದರಿಂದ ಕಾಂಗ್ರೆಸ್ ವಿಚಲಿತವಾಗಿದೆ ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ವೈ. ಹೇಳಿದರು.
ಸುರತ್ಕಲ್‍ನಲ್ಲಿ ರಾಜಸ್ಥಾನ, ಮದ್ಯಪ್ರದೇಶ, ಚತ್ತೀಸ್‍ಘಡದಲ್ಲಿ ಜಯಗಳಿಸಿದ್ದು, ಈ ಪ್ರಯುಕ್ತ ಸುರತ್ಕಲ್ ಜಂಕ್ಷನ್ ಹಾಗೂ ಕಾವೂರು ಜಂಕ್ಷನ್ ನಲ್ಲಿ ನಡೆದ ವಿಜಯೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ಯಾರಂಟಿಗಳಿಗೆ ಆದ್ಯತೆ ನೀಡದ ಮಹಿಳಾ ಮತದಾರರು ಬಿಜೆಪಿಯನ್ನು ಬೆಂಬಲಿಸಿ ಧಿಕಾರ ಹಿಡಿಯಲು ನೆರವಾಗಿದ್ದಾರೆ.
ತೆಲಂಗಾಣದಲ್ಲಿ ಭಾರೀ ಪ್ರಮಾಣದಲ್ಲಿ ಮತಗಳಿಸಿ ,ಮತದಾರರ ಪ್ರೀತಿಗೆ ಪಾತ್ರವಾಗಿದ್ದೇವೆ. 8ಕ್ಕೂ ಅಧಿಕ ನಮ್ಮ ಶಾಸಕರು ವಿಧಾನಸಭೆ ಪ್ರವೇಶಿಲಿದ್ದಾರೆ. ನಾಯಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ನಾಯಕರ ,ವಿವಿಧ ರಾಜ್ಯದ ಕಾರ್ಯಕರ್ತರ ಅವಿರತ ಶ್ರಮದಿಂದ ಬಿಜೆಪಿ ರಾಜ್ಯಭಾರ ಹೆಚ್ಚಾಗುತ್ತಿದೆ.
ಮುಂದೆ ಲೋಕಸಭೆಯಲ್ಲಿಯೂ ಇಂತಹ ಭರ್ಜರಿ ಫಲಿತಾಂಶ ನಿರೀಕ್ಷಿಸಬಹುದಾಗಿದೆ ಎಂದರು.

ಮಂಡಲದ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಶಕ್ತಿ ಕೇಂದ್ರದ ಪ್ರಮುಖರಾದ ವಿಠಲ ಸಾಲಿಯಾನ್ ಮಾತನಾಡಿದರು. ಪ್ರಮುಖರಾದ ಗಣೇಶ್ ಹೊಸಬೆಟ್ಟು, ಅಶೋಕ್ ಶೆಟ್ಟಿ ತಡಂಬಬೈಲ್, ಸುನಿಲ್ ಕುಳಾಯಿ, ಜಯಂತ್ ಸಾಲಿಯಾನ್, ರಾಜೇಶ್ ಮುಕ್ಕ, ರಣ್‍ದೀಪ್ ಕಾಂಚನ್, ಸಂದೀಪ್ ಪಚ್ಚನಾಡಿ, ಸಿತೇಶ್ ಕೊಂಡೆ ,ಯುವಮೋರ್ಚಾದ ಭರತ್‍ರಾಜ್ ಕೃಷ್ನಾಪುರ, ತಿಲಕ್, ಜಯಾನಂದ ಚೇಳಾೈರು, ಸುರೇಶ್,ಓಂ ಪ್ರಕಾಶ್ ಶೆಟ್ಟಿಗಾರ್, ಮನಪಾ ಸದಸ್ಯರಾದ ಶ್ವೇತ ಪೂಜಾರಿ, ಸರಿತ ಶಶಿಧರ್, ಶೋಭಾ ರಾಜೇಶ್, ಲೋಕೇಶ್ ಬೊಳ್ಳಾಜೆ,ಲೋಹಿತ್ ಅಮೀನ್, ಶರತ್ ಕುಮಾರ್, ಸುಮಂಗಲರಾವ್,ಗಾಯತ್ರಿ ರಾವ್, ಸಂಗೀತಾ ನಾಯಕ್ ಮತ್ತಿತರರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು