ಇತ್ತೀಚಿನ ಸುದ್ದಿ
ಖ್ಯಾತ ಪರಿಸರ ಹೋರಾಟಗಾರ, ಚಿಪ್ಕೊ ಚಳುವಳಿಯ ಹರಿಕಾರ ಸುಂದರ್ ಲಾಲ್ ಬಹುಗುಣ ಕೊರೊನಾಗೆ ಬಲಿ
21/05/2021, 15:41
ನವದೆಹಲಿ(reporterkarnataka news):
ಖ್ಯಾತ ಪರಿಸರ ಹೋರಾಟಗಾರ, ಚಿಪ್ಕೊ ಚಳುವಳಿಯ ಹರಿಕಾರ ಸುಂದರ್ ಲಾಲ್ ಬಹುಗುಣ(94) ಕೊರೊನಾ ಸೋಂಕಿಗೆ ಶುಕ್ರವಾರ
ಬಲಿಯಾಗಿದ್ದಾರೆ.
ಸುಂದರ್ ಲಾಲ್ ಬಹುಗುಣ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.
ಬಹುಗುಣ ಅವರು ಮರ, ಅರಣ್ಯ ನಾಶವನ್ನು ತಡೆಯುವ ನಿಟ್ಟಿನಲ್ಲಿ ಚಿಪ್ಕೊ ಚಳುವಳಿ ( ಮರವನ್ನು ಅಪ್ಪಿಕೊ ಚಳುವಳಿ) ಆರಂಭಿಸಿದ್ದರು. ಇದು ದೇಶಾದ್ಯಂತ ಪ್ರಸಿದ್ಧಿ ಪಡೆದಿತ್ತು.
ಅರಣ್ಯನಾಶ, ಬೃಹತ್ ಅಣೆಕಟ್ಟುಗಳು, ಗಣಿಗಾರಿಕೆ ವಿರುದ್ಧ ಧ್ವನಿಯೆತ್ತಿದ್ದ ಅವರು ಪರಿಸರ ಸಂರಕ್ಷಣೆ ಮಹತ್ವ ಸಾರಿದ್ದರು. 2009ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಸುಂದರ್ ಲಾಲ್ ನ್ಯುಮೋನಿಯಾ ಹಾಗೂ ಡಯಾಬಿಟಿಸ್
ಕಾಯಿಲೆಯಿಂದಲೂ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.