ಇತ್ತೀಚಿನ ಸುದ್ದಿ
ಕುಮಾರಸ್ವಾಮಿ ಮನ ಪರಿವರ್ತನೆಯಾಗಿದೆ, ಜೆಡಿಎಸ್ ಶೀಘ್ರದಲ್ಲೇ ಬಿಜೆಪಿ ಜತೆ ವಿಲೀನವಾಗಲಿದೆ: ಮಾಜಿ ಸಿಎಂ ಶೆಟ್ಟರ್ ಭವಿಷ್ಯ
13/12/2023, 11:20
ಹುಬ್ಬಳ್ಳಿ (reporterkarnataka.com):ಮಾಜಿ ಮುಖ್ಯಮಂತ್ರಿ, ಜಾತ್ಯತೀತ ಜನತಾ ದಳದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಮನ ಪರಿವರ್ತನೆಯಾಗಿದೆ. ಜೆಡಿಎಸ್ ಶೀಘ್ರದಲ್ಲೇ ಬಿಜೆಪಿ ಜತೆ ವಿಲೀನವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಆರೆಸ್ಸೆಸ್ ನಾಯಕ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರ ಶಾಲೆಯ ಕ್ರೀಡೋತ್ಸವದಲ್ಲಿ ಪಾಲ್ಗೊಂಡ ಕುಮಾರಸ್ವಾಮಿ ಅವರು ನನ್ನ ಮನ ಪರಿವರ್ತನೆಯಾಗಿದೆ ಎಂದು ಹೇಳಿದ್ದಾರೆ. ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನಕ್ಕೆ ಇದು ಪುಷ್ಠಿ ನೀಡುತ್ತದೆ. ಜೆಡಿಎಸ್ ಮತ್ತು ಬಿಜೆಪಿ ವಿಲೀನವಾಗುವ ಪ್ರಾಥಮಿಕ ಹಂತದ ಮುನ್ಸೂಚನೆ ಇದಾಗಿದೆ. ಸಿ.ಎಂ. ಇಬ್ರಾಹಿಂ ಅವರು ಈಗಾಗಲೇ ಮತ್ತೊಂದು ಜೆಡಿಎಸ್ ಕಟ್ಟಿದ್ದಾರೆ. ದೇವೇಗೌಡರು ಮತ್ತು ಕುಮಾರಸ್ವಾಮಿ ಇರುವ ಜೆಡಿಎಸ್ ಬಿಜೆಪಿ ಜತೆ ಶೀಘ್ರ ವಿಲೀನವಾಗಲಿದೆ ಎಂದು ಭವಿಷ್ಯ ನುಡಿದರು.