8:11 PM Friday30 - January 2026
ಬ್ರೇಕಿಂಗ್ ನ್ಯೂಸ್
ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ವಿ ಬಿ ಜಿ ರಾಮ್… 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಉದ್ಘಾಟನೆ ಕೊಡಗು: ಮುಂದುವರಿದ ಆನೆ- ಮಾನವ ಸಂಘರ್ಷ; ಕಾಡಾನೆ ದಾಳಿಗೆ ಕಾರ್ಮಿಕ ಬಲಿ ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ನಮ್ಮ ಸರ್ಕಾರ ಯಾರ ಪೋನ್ ಟ್ಯಾಪ್ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ ಕನ್ನಡ ಭಾಷೆ ಎಂದರೆ ಹಲವು ಆಯಾಮಗಳ ಸಾಧ್ಯತೆ: ಪುರುಷೋತ್ತಮ ಬಿಳಿಮಲೆ 600ಕ್ಕೂ ಹೆಚ್ಚು ಜಿಟಿಸಿಸಿ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲಿರುವ ರ‍್ಯಾಂಗ್‌ಸನ್ಸ್‌ ಏರೋಸ್ಪೇಸ್, ​​ಎಕ್ಸೈಡ್ ಎನರ್ಜಿ ಸುನಿಲ್ ಕುಮಾರ್ ಪರಶುರಾಮನ ಮೂರ್ತಿಯ ಫೈಬರ್ ನಲ್ಲಿ ಮಾಡಿಸಿ ಕಂಚಿನದ್ದು ಎಂದು ನಂಬಿಸಿದ್ದರು:… ಸೋಮವಾರಪೇಟೆ ಕಾಜೂರಿನಲ್ಲಿ ಭಾರೀ ಬೆಂಕಿ ಅವಘಡ: ಮನೆಯೊಳಗೆ ನಿದ್ರಿಸುತ್ತಿದ್ದ ಬಾಲಕ ಬಚಾವ್ ಮಾಡಿದ… ಕೊಡಗಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧ: ಉಸ್ತುವಾರಿ ಸಚಿವ ಬೋಸರಾಜ್

ಇತ್ತೀಚಿನ ಸುದ್ದಿ

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಮೇಲ್ಟಾವಣಿಗೆ ಗುದ್ದಲಿ ಪೂಜೆ

31/03/2024, 10:42

ಮಂಗಳೂರು(reporterkarnataka.com):ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ಸಂಪೂರ್ಣ ಜೀರ್ಣೋದ್ಧಾರಗೊಂಡು ಸುಂದರವಾಗಿ ದೈವಿಕವಾಗಿ ಪುನರ್ ನಿರ್ಮಾಣಗೊಂಡ ದೇವಸ್ಥಾನದ ಅಂಗಣವನ್ನು ಮಳೆ, ಬಿಸಿಲಿನಿಂದ ರಕ್ಷಿಸಿ, ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಮಾರು 60 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಕ್ಷೇತ್ರಕ್ಕೆ ಮೇಲ್ಟಾವಣಿ ನಿರ್ಮಾಣಕ್ಕಾಗಿ ಗುದ್ದಲಿ ಪೂಜೆ ಮಾ. 29ನೇ ಶುಕ್ರವಾರ ಬೆಳಿಗ್ಗೆ ಸುಮುಹೂರ್ತದಲ್ಲಿ ಶ್ರೀಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರದ ತಂತ್ರಿಗಳಾದ ಅನಂತ ಉಪಾಧ್ಯಾಯರ ಮತ್ತು ಹರಿ ಉಪಾಧ್ಯಾಯರ ನೇತೃತ್ವದಲ್ಲಿ ನಡೆಯಿತು.
ಆಡಳಿತ ಮೊತ್ತೇಸರರು ಪುರುಷೋತ್ತಮ ಕುಲಾಲ್ ಕಲ್ಬಾವಿ, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ಯವರು ಉಪಸ್ಥಿತಿಯಲ್ಲಿ, ಮುಂಬೈಯ ದಾನಿ ದೇವಕಿ ಸುನಿಲ್ ಸಾಲಿಯನ್, ಡಾ. ಸುರೇಖಾ ರತನ್ ಕುಲಾಲ್ ಅವರ ಯಜಮಾನಿಕೆಯಲ್ಲಿ ಧಾರ್ಮಿಕ ವಿಧಿಗಳು ನಡೆದವು.
ಮಾಣಿಲ ಶ್ರೀಗಳು ಆಶೀರ್ವಚನ ನೀಡಿ ಕ್ಷೇತ್ರದಲ್ಲಿ ಧರ್ಮ ಕಾರ್ಯಗಳು ನಡೆಯುತ್ತಿರುವಾಗ ಭಕ್ತರಿಗೆ ಅನುಕೂಲಕ್ಕಾಗಿ ಮತ್ತು ದೇವಸ್ಥಾನದ ಮಳೆ ಬಸಿಲಿನ ರಕ್ಷಣೆಗಾಗಿ,ಧ್ಯಾನ ಮತ್ತು ಶುಭ ಕಾರ್ಯಗಳು ನಡೆಯುವುದಕ್ಕೆ ಸುತ್ತಲು ಮೇಲ್ಟಾವಣಿಗೆ ಅಗತ್ಯ ವಾಗಿದೆ ಅದರ ಯೋಜನೆಯನ್ನು ರೂಪಿಸಿ ಇರುವುದು ಅಗತ್ಯವಾಗಿತ್ತು ಈ ಮೂಲಕ ಕ್ಷೇತ್ರ ಇನ್ನಷ್ಟು ಸುಂದರಮಯವಾಗಲಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಾದ ಎ ದಾಮೋದರ್ , ಸೇವ ಟ್ರಸ್ಟ್ ನ ಅಧ್ಯಕ್ಷ ಪ್ರೇಮಾನಂದ ಕುಲಾಲ್ ಕೋಡಿಕಲ್, ಸೇವಾ ಸಮಿತಿಯ ಅಧ್ಯಕ್ಷ ಕೆ. ಸುಂದರ ಕುಲಾಲ್ ಶಕ್ತಿನಗರ, ಮಹಿಳಾ ಮಂಡಳಿಯ ಅಧ್ಯಕ್ಷ ಗೀತಾ ಮನೋಜ್ ಮರೋಳಿ, ನ್ಯಾ. ರವೀಂದ್ರ ಮುನ್ನಿ ಪಾಡಿ, ಸುರೇಶ್ ಕುಲಾಲ್ ಮಂಗಳದೇವಿ ,ಗಿರಿಧರ್ ಜೆ ಮೂಲ್ಯ , ಕಸ್ತೂರಿ ಪಂಜ , ರೂಪ ಬಂಗೇರ,ಕುಂಬಾರ ಗುಡಿ ಕೈಗಾರಿಕಾ ಸಹಕಾರಿ ಸಂಘ ಪುತ್ತೂರು ಅಧ್ಯಕ್ಷ ನ್ಯಾ.ಭಾಸ್ಕರ್ ಪೆರುವಾಯಿ, ಎಂ .ಪಿ ಬಂಗೇರ,ಸದಾಶಿವ ಕುಲಾಲ್, ನ್ಯಾ. ರಾಮ್ ಪ್ರಸಾದ್ ,ಪ್ರವೀಣ್ ಬಸ್ತಿ , ನ್ಯಾ. ಉದಯಾನಂದ ,ದಿನೇಶ್ ಕುಲಾರ್ ಮುಂಬಯಿ, ಗಂಗಾಧರ್ ಬಂಜನ್, ಲl ಅನಿಲ್ ದಾಸ್. ನಾಗರಾಜ್ ಸುರತ್ಕಲ್, ಕಾರ್ಪೊರೇಟರ್ ಗಣೇಶ್ ಕುಲಾಲ್, ಆನಂದ ಉರ್ವ , ಮೋಹನ ದಾಸ್ ಅಲಪೆ, ಧೂಮಪ್ಪ ಮಂದಾರ ಬೈಲು, ವಿಶ್ವನಾಥ್ ಬಂಗೇರ,ನಾಗವೇಣಿ, ಚಂದ್ರಪ್ರಭ,
ಸಿವಿಲ್ ಗುತ್ತಿಗೆದಾರ ಹೊನ್ನಪ್ಪ ಕುಲಾಲ್, ಸುರೇಶ್ ಕುಲಾಲ್ ಮುಂಬೈ, ವಿಶ್ವನಾಥ್ ವಾಮಂಜೂರು, ಸದಾಶಿವ ಬಿಜೈ, ವಿನಯ್ ಕುಮಾರ್ ಮತ್ತಿತರು ಪಾಲ್ಗೊಂಡಿದ್ದರು,

ಇತ್ತೀಚಿನ ಸುದ್ದಿ

ಜಾಹೀರಾತು