ಇತ್ತೀಚಿನ ಸುದ್ದಿ
ಕುಲಶೇಖರದ ಯೋಧ ಹರೀಶ್ ಕುಮಾರ್ ಹೃದಯಾಘಾತಕ್ಕೆ ಬಲಿ: ಶಾಸಕ ವೇದವ್ಯಾಸ ಕಾಮತ್ ಸಂತಾಪ
01/01/2023, 20:06

ಮಂಗಳೂರು(reporterkarnataka.com): ರಜೆಯಲ್ಲಿ ಹುಟ್ಟೂರಾದ ಕುಲಶೇಖರ ಉಮಿಕ್ಕಾನದ ಯೋಧ ಹರೀಶ್ ಕುಮಾರ್ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಶಾಸಕ ಡಿ. ವೇದವ್ಯಾಸ ಕಾಮತ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಕಳೆದ 21 ವರ್ಷಗಳಿಂದ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ 142ನೇ ಬೆಟಾಲಿಯನ್ ಒರಿಸ್ಸಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಲಶೇಖರ ಉಮಿಕ್ಕಾನ ನಿವಾಸಿ, ಬಿಎಸ್‌ಎಫ್ ಯೋಧ ಹರೀಶ್ ಕುಮಾರ್ ಅವರು ನಿಧನರಾದ ಸುದ್ಧಿ ತಿಳಿದು ಆಘಾತವಾಗಿದೆ. ರಜೆಯಲ್ಲಿ ಊರಿಗೆ ಬಂದಿದ್ದ ಸಂದರ್ಭದಲ್ಲಿ ಘಟನೆ ನಡೆದಿದ್ದು ಇಂದು ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.