8:57 AM Saturday3 - January 2026
ಬ್ರೇಕಿಂಗ್ ನ್ಯೂಸ್
ಬಳ್ಳಾರಿ ಫೈಯರಿಂಗ್ | ಕೊಲೆ ಪ್ರಕರಣ ದಾಖಲಿಸಿ ಶಾಸಕರ ಕೂಡಲೇ ಬಂಧಿಸಿ: ಆರ್.ಅಶೋಕ್… ಬಳ್ಳಾರಿ ಗಲಭೆ ಸಿಬಿಐ ಅಥವಾ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಲಿ: ಮಾಜಿ ಸಿಎಂ… ಬಳ್ಳಾರಿ ಅಹಿತಕರ ಘಟನೆಯ ನ್ಯಾಯಾಂಗ ತನಿಖೆ ನಡೆಯಲಿ: ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಗ್ರಹ 6322 ಪರಿಶಿಷ್ಟ ಕುಟುಂಬಗಳಿಗೆ ಕೊಳವೆಬಾವಿ ಭಾಗ್ಯ: ಕಾಮಗಾರಿ ಚುರುಕುಗೊಳಿಸಲು ನೀರಾವರಿ ಸಚಿವರ ಖಡಕ್… Kodagu | ಸೋಮವಾರಪೇಟೆ ಮೀಸಲು ಅರಣ್ಯ ಪ್ರದೇಶದಲ್ಲಿ ಬೇಟೆ: ಕೋವಿ ಸಹಿತ ಮೂವರ… ಕೋವಿಡ್ ಸಾವು ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ: ಸರಕಾರಕ್ಕೆ ಅಂತಿಮ ವರದಿ… ಅಪ್ರಾಪ್ತ ಬಾಲಕನಿಂದ ಬೈಕ್ ಚಾಲನೆ: ತಂದೆಗೆ 25 ಸಾವಿರ ರೂ. ದಂಡ ವಿಧಿಸಿದ… ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳು: ಮಾಜಿ ಡಿಸಿಎಂ ಗೋವಿಂದ ಕಾರಜೋಳ ಲೇವಡಿ ಕೆ.ಸಿ.‌ವೇಣುಗೋಪಾಲ್ ರಾಜ್ಯದ ಸೂಪರ್ ಸಿಎಂ: ಬಿಜೆಪಿಯ ಎನ್.ರವಿಕುಮಾರ್ ಆರೋಪ ಅಕ್ರಮ ವಲಸಿಗರ ಕುರಿತು ಉನ್ನತ ಮಟ್ಟದ ತನಿಖೆಯಾಗಲಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಇತ್ತೀಚಿನ ಸುದ್ದಿ

ಕುದ್ರೋಳಿ ಯುವಕ ಸಂಘದಿಂದ ಆಟಿಡೊಂಜಿ ಕೂಟ: ಮಕ್ಕಳಿಂದ ಆಟಿ ಕೊಡಂಗೆ ನೃತ್ಯ

01/08/2024, 01:03

ಮಂಗಳೂರು(reporterkarnataka.com): ಕುದ್ರೋಳಿ ಯುವಕ ಸಂಘ ಸಂಘದ ವತಿಯಿಂದ ನಮ್ಮ ತುಳುನಾಡಿನ ಆಟಿ ತಿಂಗಳಿನ (ಆಷಾಢ ಮಾಸದ) ವೈಶಿಷ್ಟ್ಯಮಯ ಸಂಸ್ಕೃತಿಯನ್ನು ನಮ್ಮ ಈಗಿನ ಹಾಗೂ ಮುಂದಿನ ತಲೆಮಾರಿನವರಿಗೆ ಪರಿಚಯಿಸುವ ಸಲುವಾಗಿ ಆಟಿಡೊಂಜಿ ದಿನ ಕೂಟ ಸಂಘದ ಮಹಿಳಾ ಸಮಿತಿಯ ಸಹಯೋಗದೊಂದಿಗೆ ನಡೆಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಕೆ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ
ಸ್ವರೂಪ ಎನ್. ಶೆಟ್ಟಿ ಹಾಗೂ ಜ್ಯೋತಿ ಎಸ್ ಶೆಟ್ಟಿ ಅವರುಗಳು ಭಾಗವಹಿಸಿದ್ದರು. ನಮ್ಮ ತುಳುನಾಡಿನ ಆಚರಣೆಗಳು ಸಾಂಸ್ಕೃತಿಕ ಹಾಗೂ ನಂಬಿಕೆಗಳ ಆಧಾರವಾಗಿದ್ದು, ಆಟಿದ ಆ ಕಷ್ಟದ ದಿನಗಳ ಬಗ್ಗೆ ಹಾಗೂ ಆಟಿದ ಮಹತ್ವದ ಬಗ್ಗೆ ಅತಿಥಿಗಳು ಸಭೆಗೆ ಮಾಹಿತಿ ನೀಡಿದರು. ನಂತರ ಗ್ರಾಮದ ಮಕ್ಕಳಿಂದ ಆಟಿ ಕೊಡಂಗೆ ನೃತ್ಯ ಹಾಗೂ ಆಟಿಗೆ ಸಂಬಂಧಪಟ್ಟ ನೃತ್ಯ ಕಾರ್ಯಕ್ರಮಗಳು ಜರಗಿತು. ಪ್ರಾರಂಭದಲ್ಲಿ ಶಲ ವೀಣಾ ಕಿರಣ್ ಸ್ವಾಗತಿಸಿದರು, ವಿಜಯಶ್ರೀ ಅತಿಥಿಗಳ ಪರಿಚಯ ಮಾಡಿದರು. ಶಿಲ್ಪಾ ಆಟಿದ ಮದಿಪು ನೀಡಿದರು.
ಕವಿತಾ ಸಾಲಿಯಾನ್ ಅವರು ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷರಾದ ಶಂಕರ್ ಬರ್ಕೆ, ಉಪಾಧ್ಯಕ್ಷ ರವೀಂದ್ರ ಆರ್.ಆರ್., ಕಾರ್ಯದರ್ಶಿ ರಾಜೇಶ್ ಕುದ್ರೋಳಿ, ಕೋಶಾಧಿಕಾರಿ ದಿನೇಶ್ ಅಂಚನ್ ಮತ್ತು ಮಹಿಳಾ ಸಮಿತಿಯ ಸಂಚಾಲಕಿ ಸುಮನ್ ಸುನೀಲ್, ಸಹ ಸಂಚಾಲಕಿ ಭಾನುಮತಿ ಉಪಸ್ಥಿತರಿದ್ದರು.
ಸಭೆಯಲ್ಲಿ ಸಂಘದ ಸದಸ್ಯರು ಮಹಿಳಾ ಸಮಿತಿಯ ಸದಸ್ಯರು ಹಾಗೂ ಪರಿಸರದ ಸಾರ್ವಜನಿಕರು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಸಂಘದ ಮಹಿಳಾ ಸಮಿತಿಯ ಸದಸ್ಯರು ತಯಾರಿಸಿದ ಆಟಿಗೆ ಸಂಬಂಧಪಟ್ಟಂತಹ ವಿವಿಧ ತಿಂಡಿ ತಿನಸುಗಳನ್ನು ಉಣ ಬಡಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು