ಇತ್ತೀಚಿನ ಸುದ್ದಿ
ಕೂಡ್ಲಿಗಿ: ಶ್ರೀಪೇಟೆ ಬಸವೇಶ್ವರ ಕಾರ್ತೀಕೋತ್ಸವ; ಶ್ರೀವೀರಭದ್ರೇಶ್ವರ ಹಲಗೆ ಪ್ರಸ್ತ; ಹರಿದು ಬಂದ ಭಕ್ತಸಾಗರ
05/01/2024, 22:30

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ವಿಜಯನಗರ ಜಿಲ್ಲೆಯ ಕೂಡ್ಲಿಗಿಯ ಶ್ರೀಪೇಟೆ ಬಸವೇಶ್ವರ ದೇವಸ್ಥಾನದ ಸೇವಾ ಸಮಿತಿ ಹಾಗೂ ಪೇಟೆಯ ಸಮಸ್ತ ಭಕ್ತರ ಸಹಯೋಗದಲ್ಲಿ ರಾತ್ರಿ ಪಟ್ಟಣದ ಶ್ರೀಪೇಟೆ ಬಸವೇಶ್ವರ ದೇವರ ಕಾರ್ತೀಕೋತ್ಸವ ಜರುಗಿತು.
ಮಹಿಳೆಯರು ಮಕ್ಕಳು ಯುವಕರು ಪಟ್ಟಣದ ವಿವಿಧೆಡೆಯ ಭಕ್ತರು ದೇವರ ದರ್ಶನ ಪಡೆದರು, ಧಾರ್ಮಿಕ ವಿಧಿ ವಿಧಾನದಂತೆ ದೀಪ ಬೆಳಗಿ ಪುನೀತರಾದರು. ಜ. 5ರಂದು ಬೆಳಿಗ್ಗೆ ಶ್ರೀವೀರಭದ್ರೇಶ್ವರ ಹಲಗೆ ಪ್ರಸ್ತ ಜರುಗಿತು, ಶ್ರೀಊರಮ್ಮ ದೇವಿ ಹೊಂಡದಲ್ಲಿ ಶ್ರೀವೀರಭದ್ರೇಶ್ವರ ಸ್ವಾಮಿಯ ಹಲಗೆ ಗಳನ್ನು. ಶಾಸ್ತ್ರೋಕ್ತವಾಗಿ ಪೂಜಿಸಿ ನಂದಿಕೋಲು ಸಮ್ಮಾಳ ವಾದ್ಯಗಳೊಂದಿಗೆ, ಪ್ರಮುಖ ಬೀದಿಗಳ ಮೂಲಕ ಶ್ರೀ ಬಸವೈಶ್ವರ ದೇವರ ಪಲ್ಲಕ್ಕಿ ಜರುಗಿಸಲಾಯಿತು. ಭಕ್ತರು ಶ್ರೀವೀರಭದ್ರೇಶ್ವರ ದೇವರ ಸೂಸ್ತ್ರ ಹಾಕಿಸಿಕೊಂಡು, ಮಹಿಳೆಯರು ಮಕ್ಕಳು ಯುವಕರು ಭಕ್ತಿಯಿಂದ ಕಾರ್ತೀಕೋತ್ಸವ ಆಚರಿಸಿ ದೇವರ ಕೃಪೆಗೆ ಪಾತ್ರರಾದರು.