1:36 PM Friday18 - April 2025
ಬ್ರೇಕಿಂಗ್ ನ್ಯೂಸ್
Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ… ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರಿಡುವ ಕುರಿತು ಸಿಎಂ ಜತೆ ಚರ್ಚೆ:… Karnataka BJP | ದಲಿತರ ತುಳಿದವರೇ ಕಾಂಗ್ರೆಸಿಗರು: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ

ಇತ್ತೀಚಿನ ಸುದ್ದಿ

ಕೂಡ್ಲಿಗಿ: ಪಂಡರಾಪುರ ಶ್ರೀಪಾಂಡುರಂಗ ದರ್ಶನಕ್ಕೆ ಭಕ್ತರ ದಂಡು ಪಾದಯಾತ್ರೆ

27/10/2024, 23:37

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ಮಹಾರಾಷ್ಟ್ರದ ಪಂಡರಾಪುರ ಶ್ರೀಪಾಂಡುರಂಗ ದೇವರ ಸನ್ನಿದೆಗೆ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ. ತಳವಾರಹಟ್ಟಿ ಬಳಗಟ್ಟ ಗ್ರಾಮದ ಪಂಡರಾಪುರ ಶ್ರೀಪ‍ಾಂಡು ರಂಗ ಸ್ವಾಮಿ ಪಾದಯಾತ್ರೆ ಭಕ್ತರ ಸೇವಾ ಸಮಿತಿ, ಸತತ 11ನೇ ವರ್ಷದ ಪಾದಯಾತ್ರೆ ಹಮ್ಮಿಕೊಂಡಿದ್ದು. ಪಾದಾಯಾತ್ರೆ ಭಕ್ತರ ದಂಡು ಅಕ್ಟೋಬರ್‌ 26ರಂದು ಸಂಜೆ, ಕೂಡ್ಲಿಗಿ ಪಟ್ಟಣ ಪ್ರವೇಶಿಸಿ ಶ್ರೀಕೊತ್ತಲಾಂಜನೇಯ ಫೇವಸ್ಥಾನದಲ್ಲಿ ಕೆಲ ಹೊತ್ತು ವಿಶ್ರಮಿಸಿತ್ತು.


ಪಾದಯಾತ್ರೆ ತಂಡದಲ್ಲಿ ಮಹಿಳಾ ಭಕ್ತರು ಯುವಕರು ವೃದ್ಧರಾದಿ‌ಯಾಗಿ, ಒಟ್ಟು ಮೂವತ್ತು ಜನರುಳ್ಳ ಭಕ್ತರ ದಂಡು ಭಜನೆ ಮಾಡುತ್ತಲೆ ಪ‍ಾದಯಾತ್ರೆ ಮೂಲಕ ಮುಂದೆ ತೆರಳಿತು. ಪ್ರತಿ ದಿನ ಒಂದಕ್ಕೆ ಇಪ್ಪತ್ತೈದು ಮೂವತ್ತು ಕಿಲೋ ಮೀಟರ್ ದೂರಾ, ಪಾದಯಾತ್ರೆ ಮೂಲಕ ಕ್ರಮಿಸುವ ತಂಡ. ದಾರಿಯುದ್ದಕ್ಕೂ ಶ್ರೀರಂಗನ ಜಪ ತಪ ನಾಮಸ್ಮರಣೆ ಮಾಡುತ್ತ, ಪಂಡರಾಪುರ ಶ್ರೀರಂಗನ ಭಜನೆಗಳನ್ನು ಆಡುಗಳನ್ನು ಹಾಡುತ್ತ. ತಳಕ್ಕೆ ತಕ್ಕಬಹಾಗೆ ಕುಣಿಯುತ್ತ ನಲಿಯುತ್ತ, ಮಾರ್ಗ ಮದ್ಯದಲ್ಲಿ ಬರುವ ಗ್ರಾಮ ಪಟ್ಟಣಗಳ ಭಕ್ತರು. ಪಾದಯಾತ್ತಿಕರನ್ನು ಬರ ಮಾಡಿಕೊಂಡು, ಆಹ್ವಾನಿಸಿ ಭಕ್ತರು ನೀಡುವ ಆತಿಥ್ಯವನ್ನು ಸ್ವೀಕರಿಸಿ. ಅಗತ್ಯವಿದ್ದಲ್ಲಿ ಹತ್ತಿರದ ದೇವಸ್ಥಾನದಲ್ಲಿ ರಾತ್ರಿ ಹೊತ್ತಲ್ಲಿ ತಂಗಿ ಬೆಳಿಗ್ಗೆ ಹೊರಡುತ್ತಾರೆ, ಮಧ್ಯಾಹ್ನದ ಬಿರು ಬಿಸಿಲಿದ್ದಲ್ಲಿ ಊಟ ಉಪಹಾರಾದಿಗಳನ್ನು ಸ್ವೀಕರಿಸಿ. ಕೆಲ ಹೊತ್ತು ವಿಶ್ರಮಿಸಿ ಧಣಿವಾರಿದ ನಂತರ, ಮತ್ತೆ ಅವರ ಪಾದಯಾತ್ರೆ ಪುನರಾರಂಭಗೊಳ್ಳುತ್ತದೆ. ಹೀಗೆ ಪಂಡರಾ ಪುರಕ್ಕೆ ಬಹು ದೂರದೂರಿನ ಭಕ್ತರು, ಸಾವಿರಾರು ಕಿ ಮೀ ದೂರದಿಂದ. ನಿರಂತರ ಪಾದಯಾತ್ರೆ ಮೂಲಕ ಕ್ರಮಿಸಿ, ಶ್ರದ್ಧೆ ಭಕ್ತಿಯಿಂದ ಪಾಂಡುರಂಗನನ್ನು ಭಜಿಸುತ್ತ. ನೆರೆ ರ‍ಾಜ್ಯ ಮಹರಾಷ್ಟ್ರದಲ್ಲಿರುವ, ಪಂಡರಾಪುರ ಸುಕ್ಷೇತ್ರಕ್ಕೆ ಭಕ್ತರ ದಂಡು ತಮ್ಮ ಪಾದಯಾತ್ರೆ ಯಶಸ್ವೀಗೊಳಿಸಿ ಸಮಾಪ್ತಿ ಗೊಳಿಸುತ್ತಾರೆ. ಇದೇ ರೀತಿ ನೂರಾರು ಕಿಮೀ ದೂರದ ಕರ್ನಾಟಕದ ಮೂಲೆ ಮೂಲೆಯ ಗಡಿ ಗ್ರ‍ಾಮಗಳಿಂದ, ಸತತ ಹತ್ತಾರು ವರ್ಷಗಳಿಂದ ಪಾದಯಾತ್ರೆ ಹಮ್ಮಿಕೊಳ್ಳುತ್ತಾರೆ. ಗ್ರಾಮವೊಂದರಿಂದ ಇಪ್ಪತ್ತೇದು ಮೂವತ್ತು ಪಾಂಡು ರಂಗ ಭಕ್ತರ ದಂಡು, ನೆರೆ ಹೊರೆಯ ಗ್ರಾಮಗಳ ಭಕ್ತರೊಂದಿಗೆ ಸೇರಿ. ಐವತ್ತರಿಂದ ಎಪ್ಪತ್ತು ನೂರು ಭಕ್ತರಿರುವ ಪಾದಯಾತ್ರಿಕರ ದಂಡು, ಒಟ್ಟೊಟ್ಟಾಗಿ ಪಂಡರಾಪುರಕ್ಕೆ ಪಾದಯಾತ್ರೆ ಮೂಲಕ ತೆರಳಿ. ಶ್ರದ್ಧಾ ಭಕ್ತಿಯಿಂದ ‍ಅರಾಧಿಸಿ ದೇವರ ದರ್ಶನ ಪಡೆದು, ಧಾರ್ಮಿಕ ವಿಧಿ ವಿದಾನಗಳನ್ನು ಮುಗಿಸಿಕೊಂಡು ತಮ್ಮೂರಿಗೆ ಸಂಚಾರಿ ವಾಹನಗಳ ಮೂಲಕ ಪ್ರಯಾಣಿೆೆಸಿ ಮರಳುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು