10:02 AM Monday29 - June 2026
ಬ್ರೇಕಿಂಗ್ ನ್ಯೂಸ್
2 ದಿನಗಳ ರಾಜ್ಯ ಪ್ರವಾಸ ಮುಗಿಸಿದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ… ಆರೆಸ್ಸೆಸ್ ವಿರುದ್ಧ ಪೋಸ್ಟ್ : ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಕೋರ್ಟ್… ಕ್ರಿಪ್ಟೋ ಹೂಡಿಕೆ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಆರೋಪ: ತೀರ್ಥಹಳ್ಳಿ ಕಾಲೇಜು ಪ್ರಾಧ್ಯಾಪಕ… ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ತೂರಿದ ಪ್ರಕರಣ | 4 ಮಂದಿ… ಮುಂಬೈ | ಮೊಹರಂ ವೇಳೆ ಸಾಮೂಹಿಕ ವಿಷಪ್ರಾಶನಕ್ಕೆ ಸಂಚು: 14,900 ಕ್ಯಾಪ್ಸುಲ್‌ ವಶಕ್ಕೆ;… ತೀರ್ಥಹಳ್ಳಿ: ಪಲ್ಸ್ ಪೋಲಿಯೋ ಅಭಿಯಾನಕ್ಕೆ ಶಾಸಕ ಆರಗ ಜ್ಞಾನೇಂದ್ರ ಚಾಲನೆ ಟ್ರೆಕ್ಕಿಂಗ್ ವೇಳೆ ದುರಂತ: ಹೃದಯಾಘಾತದಿಂದ ಚಿತ್ರ ನಿರ್ಮಾಪಕ ಭಾ ಮಾ ಹರೀಶ್ ಪುತ್ರ… ವಿರಾಜಪೇಟೆ: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು ಮಂಗಳೂರಿನಲ್ಲೇ ಇದ್ದಿದ್ದರೆ ಶಿಕ್ಷಕನಾಗಿರುತ್ತಿದ್ದೆ: ಬಾಲಿವುಡ್ ಬಾದ್ ಶಾ ಶಾರುಖ್‌ ಖಾನ್ ಎಐ ತಂತ್ರಜ್ಞಾನದಲ್ಲಿ ಗೃಹಿಣಿಯ ಫೋಟೋ ಎಡಿಟ್; 30 ಲಕ್ಷಕ್ಕೆ ಬೇಡಿಕೆ; ಮಹಿಳೆ ಆತ್ಮಹತ್ಯೆಗೆ…

ಇತ್ತೀಚಿನ ಸುದ್ದಿ

ಆಂಜೆಲೊರ್ ಧರ್ಮಕ್ಷೇತ್ರದಲ್ಲಿ ‘ವೈಸಿಎಸ್ ಯುವ ದಬಾಜೊ’: ಕುಲಶೇಖರ ಘಟಕ ಪ್ರಥಮ, ಆಂಜೆಲೊರ್ ಘಟಕ ದ್ವಿತೀಯ

02/11/2024, 16:23

ಮಂಗಳೂರು(reporterkarnataka.com): ಮಂಗಳೂರು ಧರ್ಮಪ್ರಾಂತ್ಯದ ಸಿಟಿ ವಲಯದ ಯಂಗ್ ಕ್ಯಾಥೋಲಿಕ್‌ ಸ್ಟೂಡೆಂಟ್ಸ್ ಸಂಚಾಲನದ ವಿದ್ಯಾರ್ಥಿಗಳಿಗೆ ವೈಸಿಎಸ್ ಯುವ ದಬಾಜೊ 2024 ಎಂಬ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮವನ್ನು ಆಂಜೆಲೊರ್ ಧರ್ಮಕ್ಷೇತ್ರದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳಗ್ಗೆ 9 ಗಂಟೆಗೆ ಸಿಟಿ ವಲಯದ ಪ್ರಧಾನ ಗುರುಗಳಾದ ವಂದನೀಯ ಜೇಮ್ಸ್ ಡಿಸೋಜ ಅವರು ನೆರವೇರಿಸಿದರು. ವೇದಿಕೆಯಲ್ಲಿ ಧರ್ಮ ಕ್ಷೇತ್ರದ ಧರ್ಮಗುರುಗಳಾದ ವಂದನೀಯ ಫೆಡ್ರಿಕ್ ಲೋಬೊ, ವಸತಿ ಯಾಜಕರಾದ ವಂದನೀಯ ಸ್ಟ್ತಾನಿ ಫೆರ್ನಾಂಡಿಸ್, ಸೇವಾದರ್ಶಿ ಬ್ರ. ಜೀವನ್ ಲೋಬೊ, ವೈಸಿಎಸ್ ವಲಯ ನಿರ್ದೇಶಕರಾದ ವಂದನೀಯ ವಿಜಯ ಮೊಂತೆರೊ, ಧರ್ಮಕ್ಷೇತ್ರದ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಪೌಲ್ ರೊಡ್ರಿಗಸ್, ಕಾರ್ಯದರ್ಶಿ ಲೊಲಿನಾ ಡಿಸೋಜ, ವಲಯ ಸಚೇತಕಿ ರೆನಿಟಾ ಮಿನೇಜಸ್, ಘಟಕ ಸಚೇತಕ ರೋಶನ್ ಪತ್ರಾವೊ, ಧರ್ಮಪ್ರಾಂತ್ಯದ ವೈಸಿಎಸ್ ಅಧ್ಯಕ್ಷ ಡಿಯೋನ್ ಸಲ್ದಾನಾ, ವಲಯ ವೈಸಿಎಸ್ ಅಧ್ಯಕ್ಷ ಡ್ಯಾರೆಲ್ ಮೊಂತೇರೊ, ಘಟಕಾಧ್ಯಕ್ಷ ಲಿಯೋನ್ ಡಿಸೋಜ ಅವರು ಉಪಸ್ಥಿತರಿದ್ದರು.
ವೈಯಕ್ತಿಕ ಗಾಯನ, ಪಂಗಡ ಗಾಯನ ಹಾಗೂ ವೆರೈಟಿ ವಿಭಾಗಗಳಲ್ಲಿ 9 ಘಟಕಗಳ 130 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಜೆ 4.30ಕ್ಕೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೈಸಿಎಸ್ ಕುಲಶೇಖರ ಘಟಕ ಪ್ರಥಮ ಸಮಗ್ರ ಪ್ರಶಸ್ತಿ, ಆಂಜೆಲೊರ್ ವೈಸಿಎಸ್ ಘಟಕ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆಯಿತು.

ಇತ್ತೀಚಿನ ಸುದ್ದಿ

ಜಾಹೀರಾತು