12:21 AM Tuesday25 - November 2025
ಬ್ರೇಕಿಂಗ್ ನ್ಯೂಸ್
ಸಂತಾನ ಹರಣ ಚಿಕಿತ್ಸೆ ಬಳಿಕವೂ ಗರ್ಭಿಣಿಯಾದ ಪತ್ನಿ: ಪತಿಯಿಂದ ವೈದ್ಯರಿಗೆ ಬೆದರಿಕೆ ಆರೋಪ:… ರಾಜ್ಯದ ಕ್ರಿಕೆಟ್ ಪಟುಗಳಿಗೆ ತಲಾ 10 ಲಕ್ಷ ನಗದು ಬಹುಮಾನ ಜತೆಗೆ ಸರ್ಕಾರಿ… ಹೈವಿಷನ್ ಇಂಡಿಯಾ ಜತೆ ಕೊರಿಯನ್ ಸಂಸ್ಥೆ ಜಿಟಿಟಿಸಿ ಒಪ್ಪಂದಕ್ಕೆ ಸಹಿ |ರಾಜ್ಯದ ಪ್ರವಾಸಿ… ಗಗನಯಾನಿಯಾಗಲು ದೈಹಿಕ, ಮಾನಸಿಕ ಆರೋಗ್ಯ ಬಹಳ ಮುಖ್ಯ: ಶುಭಾಂಶು ಶುಕ್ಲಾ Kodagu | ಅಪಘಾತಕ್ಕೆ ಈಡಾಗಿ ಗಂಭೀರ ಸ್ಥಿತಿಯಲ್ಲಿ ಪುತ್ರ: ನೊಂದ ತಾಯಿ ಕೆರೆಗೆ… ಅಕ್ರಮ‌ ಆಸ್ತಿ ಸಂಪಾದನೆ ಆರೋಪ: ಕೊಡಗು ಪಿಡಬ್ಲ್ಯುಡಿ ಎಂಜಿನಿಯರ್ ಕಚೇರಿ, ಮನೆ ಮೇಲೆ… Yadagiri | ವಿದ್ಯುತ್ ಕಳ್ಳತನ ನಿಯಂತ್ರಣ, ಟಿಸಿಗಳ ಸಮರ್ಪಕ ನಿರ್ವಹಣೆಗೆ ಇಂಧನ ಸಚಿವ… ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಉಡುಪಿಗೆ ನ.28ರಂದು ಪ್ರಧಾನಿ ಮೋದಿ ಭೇಟಿ: ಸಾರ್ವತ್ರಿಕ ರಜೆ ಘೋಷಿಸಲು ಶಾಸಕ ಯಶ್… ಬಾಲಿವುಡ್‌ನ ದಿಗ್ಗಜ ನಟ ಧರ್ಮೇಂದ್ರ ನಿಧನ: ಭಾರತೀಯ ಚಿತ್ರರಂಗದ ‘ಹೀ-ಮ್ಯಾನ್’ಗೆ ವಿದಾಯ

ಇತ್ತೀಚಿನ ಸುದ್ದಿ

ಕೂಡ್ಲಿಗಿ: ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು; ಇಬ್ಬರ ಬಂಧನ; ಸಾಮಗ್ರಿ ಜಪ್ತಿ

03/12/2024, 13:21

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಈಚಲಬೊಮ್ಮನಹಳ್ಳಿ ಹೊರವಲಯದಲ್ಲಿರುವ ಶ್ರೀ ಉಡುಸಲಮ್ಮ ದೇವಿ ದೇವಸ್ಥಾನ ಕಳ್ಳತನ ಪ್ರಕರಣವನ್ನು ಕೂಡ್ಲಿಗಿ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ ಒಟ್ಟು 1.95.839 ರೂ. ಬೆಲೆಯ ಸಾಮಗ್ರಿಗಳನ್ನು ಜಪ್ತಿ ಮಾಡಿದ್ದಾರೆ.


ಈ ವಿಷಯವನ್ನು ಪೊಲೀಸ್ ಠಾಣಾಧಿಕಾರಿ ಸಿಪಿಐ ಸುರೇಶ ತಳವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಳ್ಳತನ ಮಾಡಿದ್ದ ಹೂವಿಹಡಗಲಿ ತಾಲೂಕಿನ, ಕೆಂಚಮಲ್ಲನಹಳ್ಳಿಯ ಹಡಪದ ವೀರೇಶ. ಕೂಡ್ಲಿಗಿ ತಾಲೂಕಿನ ಪಾಲಯ್ಯನಕೋಟೆಯ, ಹನುಮಂತಪ್ಪ ಎಂದು ಗುರುತಿಸಲಾಗಿದೆ.
ಕಳ್ಳತನ ಪ್ರಕರಣ ನ. 23 ರಂದು ರಾತ್ರಿ ಜರುಗಿರುವುದಾಗಿ, ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದಾವೆ ದಾಖಲಾಗಿತ್ತು. ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಬಿ.ಎಲ್. ಹರಿಬಾಬು, ಜಿಲ್ಲಾ ಪೊಲೀಸ್ ಹೆಚ್ಚುವರಿ ವರಿಷ್ಠಾದಿಕಾರಿ ಸಲೀಂ ಪಾಷ ರವರ ಸೂಚನೆಯ ಮೇರೆಗೆ. ಕೂಡ್ಲಿಗಿ ಡಿವೈಎಸ್ಪಿ, ಮಲ್ಲೇಶಪ್ಪ ವಿ ಮಲ್ಲಾಪುರವರ ಮಾರ್ಗದರ್ಶನದಲ್ಲಿ. ಸಿಪಿಐ ಸುರೇಶ ಹೆಚ್ ತಳವಾರ ರವರ ನೇತೃತ್ವದಲ್ಲಿ, ಕೂಡ್ಲಿಗಿ ಪಿಎಸ್ಐ ಸಿ.ಪ್ರಕಾಶರವರು. ಅಪರಾಧ ನಿಗ್ರಹ ಹಾಗೂ ಅಪರಾಧಿಗಳ ಪತ್ತೆ ದಳ ಸಿಬ್ಬಂದಿಯವರು, ಕಳ್ಳರ ಪತ್ತೆ ಕಾರ್ಯಚರಣೆ ನಡೆಸಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಬ್ಬಂದಿಯವರಾದ ಪೊಲೀಸ್ ಪೇದೆಗಳಾದ ಅಂಜಿನಪ್ಪ, ಹಸನುಲ್ಲಾ, ಜಿ.ಹಂಪಣ್ಣ, ಬಂಡೇ ರಾಘವೇಂದ್ರ, ಪ್ರವೀಣಕುಮಾರ, ಶಿವಕುಮಾರ ರವರು ಪತ್ತೆ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು. ಪತ್ರಿಕಾ ಪ್ರಕಟಣೆ ಸಂದರ್ಭದಲ್ಲಿ, ಎಎಸ್ಐ ಮೋಹನ್ ಕುಮಾರ್ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು