8:45 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಕೂಡ್ಲಿಗಿ: ಬಾಣದ ವಂಶಸ್ಥ ಕುಟುಂಬದವರಿಂದ ಶ್ರೀಊರಮ್ಮದೇವಿಗೆ ಶ್ರಾವಣ ಪರ್ವ ಪ್ರಸಾದ ಸೇವೆ

13/08/2024, 21:24

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಗ್ರಾಮ ದೇವತೆ ಶ್ರೀಊರಮ್ಮ ದೇವಿಗೆ, ಶ್ರಾವಣ ಮಾಸದ ಮಂಗಳವಾರ ಪ್ರಯುಕ್ತ ಪ್ರಸಾದ ಪರ್ವ ಜರುಗಿತು.


ಪಟ್ಟಣದ 16ನೇ ವಾರ್ಡ್ ನಿವಾಸಿಗಳಾದ ವಾಲ್ಮೀಕಿ ಸಮುದಾಯದ” ಬಾಣದ ಮನೆತನದ” ಕುಟುಂಬಸ್ಥರಿಂದ, ಶ್ರೀಊರಮ್ಮ ದೇವಿಯ ಭಕ್ತ ಮಂಡಳಿಯ ಸಹಯೋಗದೊಂದಿಗೆ ನಡೆಯಿತು. ಶ್ರೀಊರಮ್ಮ ದೇವಿಗೆ ಶ್ರ‍ಾವಣ ಪರ್ವ ವಿಶೇಷ ಪೂಜೆ, ಪರ್ವ ಪ್ರಸಾದ ಸೇವೆ ನೆರವೇರಿಸಲಾಯಿತು. ಬಾಣದ ವಂಶಸ್ಥ ಕುಟುಂಬದವರು, ಹಲವು ವರ್ಷಗಳಿಂದ ಪ್ರತಿ ವರ್ಷದ ಶ್ರಾವಣ ಮಾಸದಲ್ಲಿ ಸಾರ್ವಜನಿಕರಿಗೆ ಪರ್ವ ಪ್ರಸಾದ ಸೇವೆ ಜರುಗಿಸುತ್ತಾರೆ. ವಾಲ್ಮೀಕಿ ಸಮುದಾಯದ ಬಾಣದ ವಂಸ್ಥರ ಕುಟುಂಬದವರು ಸಾಮೂಹಿಕವಾಗಿ ಸಹಭಾಗಿತ್ವದೊಂದಿಗೆ, ಪ್ರತಿ ವರ್ಷದ ಶ್ರಾವಣ ಮಾಸದ ಮಂಗಳವಾರದಂದು. ಶ್ರೀಊರಮ್ಮದೇವಿಗೆ ವಿಶೇಷ ಪೂಜೆ ನೆರವೇರಿಸಿ, ನಂತರ ಪರ್ವ ಪ್ರಸಾದ ಸೇವೆ ನೆರವೇರಿಸುತ್ತಿದ್ದಾರೆ, ಅಂತೆಯೇ ಇಂದು ಶ್ರ‍ವಣ ಮಾಸದ ಮಂಗಳವಾರದಂದು ಗ್ರಾಮದೇವತೆ ಶ್ರೀಊರಮ್ಮ ದೇವಿ ದೇವಸ್ಥಾನದ ಆವರಣದಲ್ಲಿ. ವಿಶೇಷ ಪರ್ವ ಪ್ರಸಾದ ಸೇವೆ ಏರ್ಪಡಿಸಲಾಗಿತ್ತು, ಪ್ರಸಾದ ಸಂದರ್ಭದಲ್ಲಿ ಪಟ್ಟಣದ ನೂರಾರು ಭಕ್ತರು ಸೇರಿದಂತೆ. ಸುತ್ತ ಮತ್ತಲಿನ ಕೆಲವು ಗ್ರಾಮಗಳಲ್ಲಿನ ನೂರಾರು ಭಕ್ತರು, ನಾಗರೀಕರು ಹಿರಿಯರು ಮಹಿಳೆಯರು ಮಕ್ಕಳು. ಶ್ರೀಊರಮ್ಮ ದೇವಿಯ ದರ್ಶನ ಪಡೆದು ನಂತರ, ದೇವಸ್ಥಾನದ ಆವರಣದಲ್ಲಿನ ಪರ್ವದಲ್ಲಿ ಭಾಗವಿಹಿಸಿ ಪ್ರಸಾದ ಸ್ವೀಕರಿಸಿದರು. ಬಾಣದ ಮನೆತನದ ಕುಟುಂಬಸ್ಥರು ಎಲ್ಲಾ ಹಿರಿಯರು, ಅವರ ನೆಂಟರು ಬಂಧು ಬಳಗ ಸ್ನೇಹಿತರು ಹಿತೈಷಿಗಳು. ಶ್ರೀಊರಮ್ಮ ದೇವಿಯ ಭಕ್ತ ಮಂಡಳಿಯ ಸಹಯೋಗದೊಂದಿಗೆ, ಪ್ರಸಾದ ಪರ್ವದಲ್ಲಿ ಸಕ್ತೀಯವಾಗಿ ಪಾಲ್ಗೊಂಡು, ಪರ್ವ ಪ್ರಸಾದ ಸೇವೆ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು