ಇತ್ತೀಚಿನ ಸುದ್ದಿ
ಕೃಷಿ ವಿಕಾಸ ಯೋಜನೆ: ಮಂಗಳೂರಿನಲ್ಲಿ 8 ಸಂಚಾರಿ ಶಿಥಲೀಕರಣ ವಾಹನಗಳಿಗೆ ಚಾಲನೆ
06/09/2021, 10:54
ಮಂಗಳೂರು(reporterkarnataka.com): ಕೇಂದ್ರ ಸರ್ಕಾರದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಒಟ್ಟು 8 ಸಂಚಾರಿ ಶಿಥಲೀಕರಣ ವಾಹನಗಳಿಗೆ ನಗರದ ಹೊಯ್ಗೆ ಬಜಾರಿನಲ್ಲಿರುವ ಕರ್ನಾಟಕ ಮೀನುಗಾರಿಕಾ ಅಭಿವೃದ್ದಿ ನಿಗಮ ನಿಯಮಿತದ ಕೇಂದ್ರ ಕಚೇರಿ ಆವರಣದಲ್ಲಿ ಸೋಮವಾರ ಚಾಲನೆ ನೀಡಲಾಗುವುದು.
ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ, ಶಾಸಕ ಡಿ. ವೇದವ್ಯಾಸ ಕಾಮತ್ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ನಿತೀನ್ ಕುಮಾರ್ ಹಾಗೂ ಗಣ್ಯರು ಹಸಿರು ನಿಶಾನೆ ತೋರಿದರು.