ಇತ್ತೀಚಿನ ಸುದ್ದಿ
ಕೂಡ್ಲಿಗಿ ತಾಲೂಕಿನಾದ್ಯಂತ 3 ದಿನಗಳ ಸಾಂಪ್ರದಾಯಿಕ ಸರಳ ಗಣೇಶೋತ್ಸವಕ್ಕೆ ತೆರೆ
13/09/2021, 10:14
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ಜಿಲ್ಲೆಯ ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆ ಸಾರ್ವಜನಿಕ ಸಾಂಪ್ರದಾಯಿಕ ಶ್ರೀಗಣೇಶೋತ್ಸವ ಜರುಗಿಸಲಾಗಿದೆ.
ಕೋವಿಡ್ ನಿಯಮ ಪಾಲಿಸುವ ನಿಯಮ ಪಾಲನೆಯಂತೆ, ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಧಾರ್ಮಿಕ ಶ್ರದ್ಧಾಭಕ್ತಿಯೊಂದಿಗೆ ಸರಳವಾಗಿ ಶ್ರೀಗಣೇಶೋತ್ಸವ ಆಚರಿಸಲಾಗಿತು.
ಮಹಿಳೆಯರು ಹಾಗೂ ವೃದ್ಧರ ನೆರವಿನೊಂದಿಗೆ ಬಾಲಕರು ಸಹಜವಾಗಿ ಗಲ್ಲಿ ಗಲ್ಲಿಗಳಲ್ಲಿ ಗಣೇಶೋತ್ಸವ ಆಚರಿಸಿದ್ದಾರೆ.
ಕೂಡ್ಲಿಗಿ ಪಟ್ಟಣದ ನಾಗರೀಕ ಹಿತರಕ್ಷಣ ವೇದಿಕೆಯಿಂದ ಪ್ರತಿಷ್ಠಾಪಿಸಿರುವ ಶ್ರೀಗಣೇಶನನ್ನು. ಕೋವಿಡ್ ನಿಯಮದಂತೆ ಸಾಮೂಹಿಕ ಸರಳ ಗಣೇಶೋತ್ಸವ ಆಚರಿಸಲಾಯಿತ. ನಾಗರೀಕ ಹಿತರಕ್ಷಣ ವೇದಿಕೆ ಪದಾಧಿಕಾರಿಗಳು ಹಾಗೂ ಹಿರಿಯ ನಾಗರೀಕರು ಹಾಗೂ ಬೀದಿ ಬದಿ ವ್ಯಾಪಾರಿಗಳಿಂದ ಶ್ರೀಕೊತ್ತಲಾಂಜನೇಯ ಪಾದಗಟ್ಟೆ ಬಳಿ ಪ್ರತಿಷ್ಠಾಪಿಸಲಾಗಿತ್ತು.
ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೋವಿಡ್ ನಿಯಮ ಪಾಲನೆ ಕಡ್ಡಾಯ ಜಾರಿ ಹಿನ್ನಲೆಯಲ್ಲಿ ಗಣೇಶೋತ್ಸವ ನೆಪದಲ್ಲಿ ಆಚರಿಸುವ ಡ್ಯಾನ್ಸ್ ಹಾಗೂ ಸಾಂಸ್ಕೃತಿಕ ಆಚರನೆಣೆಗಳಿಗೆ ಬ್ರೇಕ್ ಬಿದ್ದಿದೆ. ಸರಳ ಸಾಂಪ್ರದಾಯಿಕ ಮೂರು ದಿನಗಳ ಉತ್ಸವಕ್ಕೆ ತಾಲೂಕಿನೆಲ್ಲೆಡೆ ಸೆ12ರಂದು ತೆರೆಬಿದಿದೆ.