ಇತ್ತೀಚಿನ ಸುದ್ದಿ
ಕೂಡ್ಲಿಗಿ: ಅಪರಿಚಿತ ವಾಹನ ಡಿಕ್ಕಿ ಹೊಡೆದು ಕರಡಿ ಸಾವು; ವನ್ಯ ಜೀವಿಗಳನ್ನು ರಕ್ಷಿಸುವಂತೆ ‘ವಂದೇ ಮಾತರಂ’ ಒತ್ತಾಯ
22/08/2021, 10:53
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಹೊರವಲಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ, ಆ 21ರಂದು ತಡರಾತ್ರಿ ಕರಡಿ ಸಾವನ್ನಪ್ಪಿದೆ. ವಾಯು ವಿಹಾರಕ್ಕೆ ತೆರಳಿದ್ದ ನಾಗರೀಕರು ರಸ್ತೆ ಬದಿ ಕರಡಿ ಮೃತಪಟ್ಟಿರುವುದನ್ನು,ಅರಣ್ಯ ಇಲಾಖಾಧಿಕಾರಿಗೆ ತಿಳಿಸಿದ್ದು, ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ. ಕರಡಿ ಕಳೇಬರವನ್ನು ವಶಕ್ಕೆ ಪಡೆದಿದ್ದಾರೆ.
ನಿನ್ನೆ ಮಧ್ಯರಾತ್ರಿ ಕರಡಿ ರಸ್ತೆ ದಾಟುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿರಬಹುದೆಂದು ಅರಣ್ಯ ಇಲಾಖೆ ಶಂಕೆ ವ್ಯಕ್ತಪಡಿಸಿದೆ.
ಮೂರು ನಾಲ್ಕು ವರ್ಷದ ಕರಡಿ ಇದಾಗಿ ಎನ್ನಲಾಗಿದೆ. ವರ್ಷದ ಹಿಂದೆಯಷ್ಟೇ ಇದೇ ರಸ್ತೆಯ ಒಂದು ಕಿಲೋ ಮೀಟರ್ ಅಂತರದಲ್ಲಿ ಕರಡಿಯೊಂದು ಇದೇ ತರನಾಗಿ ಮೃತಪಟ್ಟಿತ್ತು. ರಾಷ್ಟ್ರೀಯ ಹೆದ್ದಾರಿ ರಸ್ತೆ ದಾಟುವಾಗ ವನ್ಯ ಪ್ರಾಣಿಗಳು ಮೃಗಗಳು ಬಲಿಯಾಗುವುದು ಸಹಜ. ಅವುಗಳು ಮಾನವನ ನೆಮ್ಮದಿ ಹಾಳು ಮಾಡದಂತೆ ತಡೆಯಲು ಮತ್ತು ಅವುಗಳು ಹೀಗೆ ನಶಿಸದಂತೆ ಕಾಪಾಡಲು ಅವುಗಳನ್ನು ಸೂಕ್ತ ಸ್ಥಳಕ್ಕೆ ವರ್ಗಹಿಸಬೇಕಿದೆ.
ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಶೀಘ್ರವೇ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕೆಂದು ವಂದೇ ಮಾತರಂ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ವಿ.ಜಿ.ವೃಷಭೇಂದ್ರ ಈ ಮೂಲಕ ಒತ್ತಾಯಿಸಿದ್ದಾರೆ.
ಕೂಡ್ಲಿಗಿ ತಾಲೂಕು ಹಾಗೂ ಸುತ್ತ ಮುತ್ತಲ ಗ್ರಾಮಗಳಲ್ಲಿ ಕರಡಿಗಳು ಮತ್ತು ಚಿರತೆಗಳು ಇರುವಿಕೆ ಸಾಬೀತಾಗಿದೆ ಅವು ಮನುಷ್ಯನಿಗೆ ಹಾನಿ ಮಾಡುವ ಮೊದಲು ಮತ್ತು ಹೀಗೆ ಪ್ರಾಣ ಕಳೆದುಕೊಳ್ಳುವ ಮೊದಲು, ಮಾನವನ ನೆಮ್ಮದಿಗಾಗಿ ಅವುಗಳ ರಕ್ಷಣೆಗಾಗಿ ಅರಣ್ಯ ಇಲಾಖೆ ಅಗತ್ಯ ಕ್ರಮಗಳನ್ನು ಶೀಘ್ರವೇ ಕೈಗೊಳ್ಳಬೇಕಿದೆ ಎನ್ನುತ್ತಾರೆ ನಾಗರೀಕರು.