ಇತ್ತೀಚಿನ ಸುದ್ದಿ
ಕೊಂಚಾಡಿ ಮಹಾಲಸಾ ನಾರಾಯಣಿ ದೇವರ ವಾರ್ಷಿಕ ಬ್ರಹ್ಮ ರಥೋತ್ಸವ ಸಂಭ್ರಮದಿಂದ ಸಂಪನ್ನ
20/04/2021, 06:45
ಚಿತ್ರ : ಮಂಜು ನೀರೇಶ್ವಾಲ್ಯ
ಮಂಗಳೂರು(reporterkarnataka news) : ನಗರದ ಕೊಂಚಾಡಿ ಕ್ಷೇತ್ರದಲ್ಲಿರುವ ಶ್ರೀ ಮಹಾಲಸಾ ನಾರಾಯಣಿ ದೇವರ ವಾರ್ಷಿಕ ಬ್ರಹ್ಮ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ಜರಗಿತು. ಐದು ದಿನಗಳ ಪರ್ಯಂತ ಶ್ರೀ ದೇವದಲ್ಲಿ ವೈದಿಕ ವಿಧಿ ವಿಧಾನದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ನಡೆದು ಭಾನುವಾರ ಬ್ರಹ್ಮ ರಥೋತ್ಸವ ನೆರವೇರಿತು.
ಬೆಳಗ್ಗೆ ಶ್ರೀ ದೇವರಿಗೆ ಪಂಚಾಮೃತ , ಗಂಗಾಭಿಷೇಕ , ಕನಕಾಭಿಷೇಕ ನಡೆದು ಬಳಿಕ ಯಜ್ಞ ಮಂಟಪದಲ್ಲಿ ಮಹಾ ಪೂರ್ಣಾಹುತಿ ನಡೆದವು , ಪುಷ್ಪಾಲಂಕೃತ ಸೇಈ ಶ್ರೀ ವೆಂಕಟರಮಣ ಹಾಗೂ ಶ್ರೀ ಮಹಾಲಸಾ ನಾರಾಯಣಿ ದೇವರ ಉತ್ಸವ ಬಳಿಕ ರಥಾರೋಹಣ ನೆರವೇರಿತು . ಸರಕಾರದ ಆದೇಶದ ಪ್ರಕಾರ ಸೂಕ್ತ ಸಾಮಾಜಿಕ ಅಂತರ ಪಾಲಿಸಲಾಗಿದ್ದು , ಎಲ್ಲಾ ಕಾರ್ಯಕ್ರಮಗಳು ಸುಸೂತ್ರವಾಗಿ ಜರಗಿದವು.