ಇತ್ತೀಚಿನ ಸುದ್ದಿ
ಕೊಕ್ಕಡ ದೇಗುಲದ ಅಚ್ಚುಮೆಚ್ಚಿನ ಶ್ಯಾಮ ಇನ್ನು ನೆನಪು ಮಾತ್ರ: ಅಲ್ಪಕಾಲದ ಅನಾರೋಗ್ಯದಿಂದ ದೇವರಪಾದ ಸೇರಿದ ಬಸವ
29/12/2024, 21:10
ಬೆಳ್ತಂಗಡಿ(reporterkarnataka.com): ಕೊಕ್ಕಡ ಶ್ರೀ ಧನ್ವಂತರಿ ಕ್ಷೇತ್ರ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಶ್ಯಾಮ ಬಸವ (ನಂದಿ) ದೇವರಪಾದ ಸೇರಿದ್ದಾನೆ.
ಸುಮಾರು 15 ವರ್ಷಗಳಿಂದ ಶ್ಯಾಮ ದೇಗುಲದ ಜಾತ್ರಾ ಸಂದರ್ಭಗಳಲ್ಲಿ ಭಾಗವಹಿಸಿ ದೇವರಿಗೆ ಸೇವೆ ಸಲ್ಲಿಸಿಸುತ್ತಿದ್ದ.
ಆದರೆ, ಅಲ್ಪಕಾಲಿಕ ಅನಾರೋಗ್ಯದಿಂದ ಹಲ್ಲಿಂಗೇರಿ ಗೋಶಾಲೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಶ್ಯಾಮನನ್ನು ಮಡ್ಯಾಳಗುಂಡಿಯ ಪುರುಷೋತ್ತಮ ಟೈಲರ್ ಆರೈಕೆ ಮಾಡುತ್ತಿದ್ದರು. ಕಳೆದ 7 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಹಲ್ಲಿಂಗೇರಿಯಲ್ಲಿರುವ ಕಾಮಧೇನು ಗೋಶಾಲೆಯಲ್ಲಿ
ಆರೈಕೆ ಮಾಡಲಾಗುತ್ತಿತ್ತು.