ಇತ್ತೀಚಿನ ಸುದ್ದಿ
Kodagu | ವಿರಾಜಪೇಟೆಯ ಕರಡಿಗೋಡಿನ ಮನೆ ಅಂಗಳದಲ್ಲಿ ಕಾಡಾನೆ ದಾoಧಲೆ: ಬೆಚ್ಚಿ ಬಿದ್ದ ಗ್ರಾಮಸ್ಥರು
26/09/2025, 14:03

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnata@gmail.com
ವಿರಾಜಪೇಟೆ ತಾಲ್ಲೂಕಿನ ಕರಡಿ ಗೋಡುನಲ್ಲಿ ತೋಟದ ಮನೆಯ ಅಂಗಳದಲ್ಲಿ ಕಾಡಾನೆ ದಾoಧಲೆ ನಡೆಸಿ ಅಪಾರ ಪ್ರಮಾಣದ ನಷ್ಟ ಉಂಟು ಮಾಡಿದೆ. ಇಲ್ಲಿನ ಕುಕ್ಕನೂರು ಪುರುಷೋತ್ತಮ್, ದೇವ ಪ್ರಕಾಶ್ ಮತ್ತು ಸುನಿಲ್ ಎಂಬುವವರ ಮನೆಯ ಅಂಗಳದಲ್ಲಿದ್ದ ಹೂಕುಂಡಗಳು, ಕಾಫಿ, ಅಡಿಕೆ, ಪಪಾಯ ಗಿಡಗಳನ್ನು ಸಂಪೂರ್ಣ ಹಾನಿ ಮಾಡಿ ಉಂಟು ಮಾಡಿದೆ.
ಬಳಿಕ ಇದೇ ಆನೆಗಳು ಪಕ್ಕದ ನಾಲ್ಕೈದು ಭತ್ತದ ಗದ್ದೆಗೆ ಪ್ರವೇಶ ಮಾಡಿದ್ದು ಸಂಪೂರ್ಣ ಪುಡಿಗೈದಿವೆ. ಇತ್ತ ಕಾರ್ಮಿಕರು ಸಾರ್ವಜನಿಕರು ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಕಷ್ಟ ಪಟ್ಟು ಬೆಳೆದ ಕೃಷಿಗೆ ಪರಿಹಾರ ಜೊತೆಗೆ ಆನೆಗಳಿಂದ ಶಾಶ್ವತ ಪರಿಹಾರ ನೀಡುವಂತೆ ಬೆಳೆಗಾರರು ಅರಣ್ಯ ಇಲಾಖೆಗೆ ಒತ್ತಾಯ ಮಾಡಿದರು, ಕಾಡಿಗೆ ಅಟ್ಟಿದ ಕೆಲವೇ ಗಂಟೆಗಳಲ್ಲಿ ಮತ್ತೆ ಗ್ರಾಮಕ್ಕೆ ಪ್ರವೇಶ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.