ಇತ್ತೀಚಿನ ಸುದ್ದಿ
Kodagu | ಸುಂಟಿಕೊಪ್ಪ: ಹೆದ್ದಾರಿ ತಡೆದ ಕಾಡಾನೆ; ವಾಹನ ಚಾಲಕರಿಗೆ ಶಾಕ್
04/07/2025, 12:46

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕಳೆದ ರಾತ್ರಿ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆಯ ಮೆಟ್ನಳ್ಳ ಇಳಿಜಾರಿನಲ್ಲಿ ಕಾಡಾನೆಯೊಂದು ಕಾಡಿನಿಂದ ಹೊರಬಂದು ಹೆದ್ದಾರಿಯ ನಡುವೆ ಅಡ್ಡಾಡಿದ ಘಟನೆ ನಡೆದಿದೆ.
ರಾತ್ರಿ ಸುಮಾರು 10.30 ವೇಳೆಗೆ ವಿಷಯ ಅರಿಯದೇ ಬಂದಿರುವ ವಾಹನಗಳು ರಸ್ತೆ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಕಾಡಾನೆ ಪ್ರತ್ಯಕ್ಷವಾಗಿ ನಿಂತಿರುವುದನ್ನು ಕಂಡು ಗಾಬರಿಯಾಗಿ ಒಳದಾರಿಯೊಳಗೆ ನುಗ್ಗಿ ತಪ್ಪಿಸಿಕೊಂಡಿದ್ದಾರೆ. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕಾರೊಂದರ ಡ್ಯಾಷ್ ಕ್ಯಾಮರದಲ್ಲಿ ಕಾಡಾನೆ ಓಡಾಟದ ದೃಶ್ಯ ಸೆರೆಯಾಗಿದ್ದು, ಇತ್ತ ಸಾಗುವ ವಾಹನಗಳ ಚಾಲಕರು ಎಚ್ಚರ ವಹಿಸಬೇಕಿದೆ.