ಇತ್ತೀಚಿನ ಸುದ್ದಿ
Kodagu | ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಕಾಡಾನೆ ದಾರುಣ ಸಾವು
19/09/2025, 22:02

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕುಶಾಲನಗರ ಅರಣ್ಯ ರೇಂಜ್ ಗೆ ಸೇರಿದ ಮೀನು ಕೊಲ್ಲಿ ಬಳಿಯ ಮಾಲ್ದಾರೆ ಬಳಿ ಹರಿಯುವ ಕಾವೇರಿ ನದಿಯಲ್ಲಿ ಕಾಡಾನೆ ಯೊಂದು ಮುಳುಗಿ ಸಾವನಪ್ಪಿದೆ.
ನೀರು ಕುಡಿಯಲು ಇಲ್ಲವೇ ನದಿ ದಾಟಲು ಯತ್ನಿಸಿದ್ದ ಹೆಣ್ಣಾನೆ ನೀರಿನಲ್ಲಿ ಮುಳುಗಿ ಸಾವನಪ್ಪಿರಬಹುದು ಎಂದು ಅರಣ್ಯ ಇಲಾಖೆ ಶಂಕಿಸಿದ್ದು, ಬೋಟಿನ ಸಹಾಯದಿಂದ ತೇಲಿಕೊಂಡು ಹೋಗುತ್ತಿದ್ದ ಆನೆಯ ಮೃತದೇಹವನ್ನು ನದಿ ದಡಕ್ಕೆ ತಂದು ಕ್ರೇನ್ ಮೂಲಕ ಹೊರ ತೆಗೆದು, ಪಶು ವೈದ್ಯಾಧಿಕಾರಿ ಡಾ. ಮುಜೀಬ್ ಹಾಗೂ ಡಾ. ಚಿಟ್ಟಿಯಪ್ಪ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಲಾಯಿತು.