ಇತ್ತೀಚಿನ ಸುದ್ದಿ
Kodagu | ಭಾಗಮಂಡಲ ತ್ರಿವೇಣಿ ಸಂಗಮ: ಶ್ರದ್ದಾಭಕ್ತಿಯಿಂದ ಸಂಪನ್ನಗೊಂಡ ಪೊಲಿಂಕಾನ ಉತ್ಸವ
24/07/2025, 15:45

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಭಾಗಮಂಡಲ ಶ್ರೀ ಭಗoಡೇಶ್ವರ ಸನ್ನಿಧಿಯಲ್ಲಿ ಶ್ರದ್ದಾ ಭಕ್ತಿಯಿಂದ “ಪೊಲಿಂಕಾನ ಉತ್ಸವ” ವಿಶೇಷ ಪೂಜೆ ಕೈoಕರ್ಯದೊಂದಿಗೆ ನೆರವೇರಿತು.
ಮಹಾಗಣಪತಿ, ಮಹಾವಿಷ್ಣು, ಸುಬ್ರಮಣ್ಯ, ಭಗoಡೇಶ್ವರ ಗುಡಿಗಳಿಗೆ ಪೂಜೆ ಸಲ್ಲಿಸಿದ ಬಳಿಕ ಬಾಳೆ ದಿಂಡುನಿಂದ ಸಿದ್ದಗೊಂಡ ಸುಮಂಗಲಿ ಮಂಟಪಕ್ಕೆ ದೇವಾಲಯದ ಪ್ರದಕ್ಷಿಣೆ ಬಂದ ನಂತರ ದೀಪ ಬೆಳಗಿ, ಮುತೈದೆ ಆಭರಣ ಗಳಾದ ಕರಿಮಣಿ, ತಾಳಿ, ಬಳೆ, ಸೀರೆ, ಬೆಳ್ಳಿ ತಟ್ಟೆ ಸೇರಿದಂತೆ ಹೂವು ಹಣ್ಣುಗಳಿಂದ ಅಲಂಕರಿಸಿ ಮತ್ತೆ ಪ್ರದಕ್ಷಿಣೆ ಬಂದು ಮುಖ್ಯ ದ್ವಾರದ ಮೂಲಕ ನೂರಾರು ಭಕ್ತರ ಸಮ್ಮುಖದಲ್ಲಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಮೂಲಕ ಕಾವೇರಿ ಕನ್ನಿಕೆ, ಸುಜ್ಯೋತಿ ಸಂಗಮಿಸುವ ತ್ರಿವೇಣಿ ಸಂಗಮದಲ್ಲಿ, ಕಾವೇರಿ ಶಾಂತಳಾಗಿ, ಮಳೆಗಾಲದಲ್ಲಿ ಯಾವುದೇ ಹಾನಿ ಮಾಡದೇ ರೈತರಿಗೆ ಸುಬಿಕ್ಷ ವಾಗಲಿ ಎಂದು ಪೂಜೆ ಸಲ್ಲಿಸಿ ಮಂಟಪವನ್ನು ನದಿಯಲ್ಲಿ ತೇಲಿ ಬಿಡಲಾಯಿತು. ಈ ವೇಳೆ ತಲಕಾವೇರಿ – ಭಾಗಮಂಡಲ ದೇವಾಲಯ ಆಡಳಿತ ಮಂಡಳಿ ಮುಖ್ಯಸ್ಥರು, ಪ್ರಧಾನ ಅರ್ಚಕರು, ಸ್ಥಳೀಯ ಭಕ್ತರು ಹಾಜರಿದ್ದರು.