ಇತ್ತೀಚಿನ ಸುದ್ದಿ
Kodagu | ಆಷಾಢ: ಪೊನ್ನಂಪೇಟೆಯಲ್ಲಿ ಮೆರೆಥಾನ್ ಓಟ
03/08/2025, 12:18

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ತತ್ವಮಸಿ ಹಾಗೂ ಜಬ್ಬುಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಕ್ಕಡ(ಆಷಾಢ) 18ರ ನಿಮಿತ ಮೆರೆಥಾನ್ ಓಟವನ್ನು ಪೊನ್ನಂಪೇಟೆಯಲ್ಲಿ ಭಾನುವಾರ ಬೆಳಿಗ್ಗೆ ಆಯೋಜಿಸಲಾಗಿತ್ತು.
ಪೊನ್ನಂಪೇಟೆಯ ಕೆ.ಪಿ.ಎಸ್.ಸಿ ಶಾಲೆಯಲ್ಲಿ ಡಾ.ಎಂ.ಆರ್.ಐಯಪ್ಪ ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಮುಖರಾದ ಉಳುವಂಗಡ ಲೋಹಿತ್ ಭೀಮಯ್ಯ, ಚೊಟ್ಟೆಕಮಡ ರಾಜೀವ್ ಬೋಪಯ್ಯ ಮತ್ತಿತರು ಉಪಸ್ಥಿತರಿದ್ದರು.
ಮೆರೆಥಾನ್ ಓಟವನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಿ ಪೊನ್ನಂಪೇಟೆಯಿಂದ ಬೆಕ್ಜೆಸುಡ್ಲೂರಿನ ಶಾರದ ಶಾಲೆಯವರೆಗೆ ಆಯೋಜಿಸಲಾಗಿದ್ದು ನೂರಾರು ಆಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಕ್ಕಡ 18 ನಿಮಿತ್ತ, ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಉದ್ದೇಶ ಹಾಗೂ ಸಮಾಜ ಸೇವೆಗಾಗಿ ಹಣ ಕ್ರೋಢಿಕರಿಸಲು, ಎರಡು ಸಂಘಟನೆಗಳ ಟ್ರಸ್ಟ್ ಮೂಲಕ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಪ್ರಮುಖರು ಹೇಳಿದ್ದಾರೆ.