7:25 PM Sunday31 - August 2025
ಬ್ರೇಕಿಂಗ್ ನ್ಯೂಸ್
ದಂತ ವೈದ್ಯಕೀಯ ಸೇವೆ ಹಳ್ಳಿ ಹಳ್ಳಿಗಳಿಗೂ ತಲುಪಲಿ: ಡೆಂಟಿಸ್ಟ್‌ ಶೃಂಗಸಭೆ-2025 ಸಮಾವೇಶದಲ್ಲಿ ಸಚಿವ… ಗೂಡ್ಸ್ ವಾಹನದಲ್ಲಿ ಗಾಂಜಾ ಮಾರಾಟಕ್ಕೆ ಯತ್ನ: ಮಾಲು ಸಹಿತ ಆರೋಪಿ ಬಂಧನ Kodagu | ‘ಹುಡುಗಿ, ಆಂಟಿ ಸರ್ವಿಸ್…’ ಎಂದು ಜಾಲತಾಣದಲ್ಲಿ ಹರಿಯ ಬಿಟ್ಟ: ಮಡಿಕೇರಿ… Kerala | ವಯನಾಡು ತಮರಶೆರಿ ಘಾಟ್ ಬಳಿ ಭೂಕುಸಿತ: ಬದಲಿ ಮಾರ್ಗಕ್ಕೆ ಸಲಹೆ ಕೆಪಿಟಿಸಿಎಲ್ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ಹುದ್ದೆಗಳ ಅಯ್ಕೆ ಪಟ್ಟಿ… ಕೊಚ್ಚಿಯಲ್ಲಿ ಕೌಶಲ್ಯ ಶೃಂಗಸಭೆ | ಪದವಿಗಳಲ್ಲ, ಭವಿಷ್ಯದ ಬಾಗಿಲು ತೆರೆಯುವುದು ಕೌಶಲ್ಯತೆ: ಸಚಿವ… Kodagu | ಗೋಣಿಕೊಪ್ಪದಲ್ಲಿ ಅಸ್ಸಾಂ ವ್ಯಕ್ತಿಯಿಂದ ಅಂಗಡಿ ಶಟರ್ ಮುರಿದು 32 ಹೊಸ… ಮಡಿಕೇರಿ – ವಿರಾಜಪೇಟೆ ಮುಖ್ಯರಸ್ತೆಯ ಮೇಕೇರಿ ಬಳಿ ಮಣ್ಣು ಕುಸಿತ: ವಾಹನ ಸಂಚಾರ… ಅ. 9ರಿಂದ 23ರವರೆಗೆ ಹಾಸನಾಂಬೆ ಉತ್ಸವ; ಈ ಬಾರಿ ದೇವಿ ದರ್ಶನ ನಿಯಮ… ಜಾತ್ಯತೀತತೆಯ ಸಂಕೇತವಾಗಿರುವ ನಾಡ ಹಬ್ಬ, ಧಾರ್ಮಿಕವಲ್ಲ: ಡಾ. ಪುರುಷೋತ್ತಮ ಬಿಳಿಮಲೆ

ಇತ್ತೀಚಿನ ಸುದ್ದಿ

Kodagu | ಶ್ರೀ ಗಣೇಶ ಸೇವಾ ಸಮಿತಿಯಿಂದ ವೈಭವದ ಗಣೇಶೋತ್ಸವ: ಮೇಕೇರಿಯಲ್ಲಿ ಗಮನಸೆಳೆದ ಭಜನೆ ಕುಣಿತ

31/08/2025, 15:38

ಮಡಿಕೇರಿ(reporterkarnataka.com): ಇಲ್ಲಿಗೆ ಸಮೀಪದ ಮೇಕೇರಿ ಗ್ರಾಮದ ಶ್ರೀ ಗೌರೀಶಂಕರ ದೇವಾಲಯದಲ್ಲಿ ಶ್ರೀ ಗಣೇಶ ಸೇವಾ ಸಮಿತಿ ಆಶ್ರಯದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಗಣೇಶನ ಶೋಭಾಯಾತ್ರೆಯಲ್ಲಿ ಪುತ್ತೂರಿನ ಭಜನಾ ತಂಡದಿಂದ ನೃತ್ಯ ಭಜನೆ ಗಮನ ಸೆಳೆಯಿತು.
ಆಗಸ್ಟ್ 27ರಂದು ಗಣೇಶನ ಉತ್ಸವ ಮೂರ್ತಿಯನ್ನು ಪ್ರತಿಷ್ಥಾಪಿಸುವ ಮೂಲಕ ಗಣೇಶೋತ್ಸವಕ್ಕೆ ಚಾಲನೆ ನೀಡಿ 29ರಂದು ಸಂಜೆ ಸುಭಾಷ್‌ನಗರದ ಹೊಳೆಯಲ್ಲಿ ಗಣೇಶನ ಉತ್ಸವ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು.
ಈ ನಡುವೆ ದೇವಾಲಯದ ಆವರಣದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗ್ರಾಮದ ನಿವಾಸಿ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸನ್ಮಾನ ನಡೆಯಿತು.
ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ವಾಗ್ಮಿ ಶ್ರೀಶಾ ಅವರು ಗಣೇಶೋತ್ವವದ ಆಚರಣೆ, ಮಹತ್ವ, ನಡೆದು ಬಂದ ಹಾದಿಯ ಕುರಿತು ಧಾರ್ಮಿಕ ಪ್ರವಚನ ನೀಡಿದರು.
28ರಂದು ಸಂಜೆ ಖ್ಯಾತ ಗಾಯನ ತಂಡದಿಂದ ಸಂಗೀತ ಸತ್ಸಂಗ, ಧಾರ್ಮಿಕ ಪ್ರವಚನ ನಡೆಯಿತು. ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಶ್ರೀ ಗೌರಿ ಗಣೇಶನ ಉತ್ಸವ ಮೂರ್ತಿಯನ್ನು ಅಲಂಕೃತ ಭವ್ಯ ಮಂಟಪದಲ್ಲಿ ಮೇಕೇರಿ ಗ್ರಾಮದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಹೊರಟು ಸುಭಾಷ್ ನಗರದ ಹೊಳೆಯಲ್ಲಿ ವಿಸರ್ಜಿಸಲಾಯಿತು. ಶ್ರೀ ಗಣೇಶ ಸೇವಾ ಸಮಿತಿಯಿಂದ ಪ್ರತೀದಿ ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಂತರ್ಪಣೆ ನಡೆಯಿತು.
ಗಮನ ಸೆಳೆದ ಭಜನೆ ಕುಣಿತ ಈ ಬಾರಿ ಮೇಕೇರಿ ಗ್ರಾಮದಲ್ಲಿ ನೃತ್ಯ ಭಜನೆಯ ಸದ್ದು ಭಕ್ತಾದಿಗಳನ್ನು ಪುಳಕಿತಗೊಳಿಸಿತು. ಶ್ರೀ ಗಣೇಶ ಸೇವಾ ಸಮಿತಿಯ ಆಶ್ರಯದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಗಣೇಶನ ಶೋಭಾಯಾತ್ರೆಯಲ್ಲಿ ಪುತ್ತೂರಿನ ಆನಡ್ಕದ ಶ್ರೀರಾಮ ಭಜನಾ ತಂಡದಿಂದ ನಡೆದ ನೃತ್ಯ ಭಜನೆಯು ಭಕ್ತಾದಿಗಳ ಮನಸೂರೆಗೊಂಡಿತು.

ಇತ್ತೀಚಿನ ಸುದ್ದಿ

ಜಾಹೀರಾತು