ಇತ್ತೀಚಿನ ಸುದ್ದಿ
ಕೊಚ್ಚಿ: ಕಾಶೀ ಮಠದ ಪೀಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದಂಗವರ ಚಾತುರ್ಮಾಸ ಆರಂಭ
28/07/2021, 21:45
ಮಂಗಳೂರು(reporterkarnataka news): ಕಾಶೀ ಮಠದ ಪೀಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದಂಗವರು ಕೊಚ್ಚಿ ತಿರುಮಲ ದೇವಳದಲ್ಲಿ ಚಾತುರ್ಮಾಸ ಆರಂಭಿಸಿದರು
ಶ್ರೀಮದ್ ವಿಜಯೇಂದ್ರ ತೀರ್ಥರು ಅನುಗ್ರಹಿಸಿದ ಧರ್ಮಪೀಠ ಶ್ರೀ ಕಾಶೀಮಠ ಸಂಸ್ಥಾನ. ಪ್ರಥಮ ಮಠ ವಾರಣಾಸಿಯ ಬ್ರಹ್ಮಘಾಟ್ ನಲ್ಲಿದ್ದು ಇಂದು ಸಮಸ್ತ ಭಾಗದಲ್ಲಿ ಶಾಖಾ ಮಠಗಳಿವೆ.
ಗೌಡ ಸಾರಸ್ವತ ಬ್ರಾಹ್ಮಣ ಕಾಶೀಮಠೀಯ ಶಿಷ್ಯ ವರ್ಗದವರಿಗೆ ಅಭಿಮಾನ ಗೌರವದ ಸಂಗತಿ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದಂಗವರ ಪ್ಲವ ನಾಮ ಸಂವಸ್ಸರದ ಚಾತುರ್ಮಾಸ ವ್ರತ ಆರಂಭಿಸುವುದು ಆಗಿದೆ.
ಗೌಡ ಸಾರಸ್ವತ ಸಮಾಜದ ಪ್ರತಿಷ್ಠಿತ ದೇವಾಲಗಳಲ್ಲೊಂದಾದ ಕೇರಳ ರಾಜ್ಯದ ಕೊಚ್ಚಿಯಲ್ಲಿರುವ ಕೊಚ್ಚಿ ತಿರುಮಲ ದೇವಳದಲ್ಲಿ ಸ್ಥಾನಾರಾಧ್ಯ ಶ್ರೀವ್ಯಾಸರಘುಪತಿ ನರಸಿಂಹರಾದಿ ಪರಿವಾರ ದೇವತೆಗಳೊಂದಿಗೆ ವೈಭವಪೂರ್ಣ ಪೂಜ-ಪುರಸ್ಕಾರ ನಿತ್ಯಭಜನೆ ಸ್ತುತ್ರಪಾಠ-ವೇದಾದಿ ಪಾರಾಯಣಗಳೊಂದಿಗೆ ಶ್ರೀಗಳು ಚಾತುರ್ಮಾಸ ಪ್ರಾರಂಭಿಸಿದರು.