ಇತ್ತೀಚಿನ ಸುದ್ದಿ
ಕೇರಳದಲ್ಲಿ ಖಾತೆ ತೆರೆಯುವಲ್ಲಿ ಬಿಜೆಪಿ ಕೊನೆಗೂ ಯಶಸ್ವಿ: ತ್ರಿಶೂರ್ ನಲ್ಲಿ ನಟ ಸುರೇಶ್ ಗೋಪಿ ಗೆಲುವು
04/06/2024, 20:27
ತಿರುವನಂತಪುರ(reporterkarnataka.com): ಬಿಜೆಪಿಯು ದೇವರನಾಡು ಕೇರಳದಲ್ಲಿ ಖಾತೆ ತೆರೆಯುಲ್ಲಿ ಕೊನೆಗೂ ಯಶಸ್ವಿಯಾಗಿದೆ. ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ನಟ ಸುರೇಶ್ ಗೋಪಿ ಗೆಲುವು ಸಾಧಿಸಿದ್ದಾರೆ.
ಸುರೇಶ್ ಗೋಪಿ 69 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಅವರು ಸಿಪಿಐಯ ವಿ.ಎಸ್. ಸುನೀಲ್ ಕುಮಾರ್ ಅವರನ್ನು ಸೋಲಿಸಿ ಗೆಲುವು ಕಂಡಿದ್ದಾರೆ. ಕಾಂಗ್ರೆಸ್‌ನ ಕೆ. ಮುರಳೀಧರನ್ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ಇದು ಕೇರಳದ ಇತಿಹಾಸದಲ್ಲೇ ಬಿಜೆಪಿಯ ಮೊಟ್ಟ ಮೊದಲ ಗೆಲುವಾಗಿದೆ. ಈ ಹಿಂದಿನ
2019ರ ಲೋಕಸಭೆ ಚುನಾವಣೆಯಲ್ಲೂ ಸುರೇಶ್ ಗೋಪಿ ಸ್ಪರ್ಧಿಸಿದ್ದರು.