7:00 AM Friday14 - June 2024
ಬ್ರೇಕಿಂಗ್ ನ್ಯೂಸ್
ಪ್ರಧಾನಿ ಮೋದಿ ಇಟಲಿಗೆ: 14ರಂದು ಜಿ7 ಶೃಂಗಸಭೆಯಲ್ಲಿ ಭಾಗಿ ಉಡುಪಿ ಜಿಲ್ಲೆಯಲ್ಲೂ ಕಾಡಾನೆ ಕಾಟ ಶುರು: ಹೆಬ್ರಿ, ಸೋಮೇಶ್ವರ ಪ್ರದೇಶದಲ್ಲಿ ಒಂಟಿ ಸಲಗದ… ಅಜ್ಜಿಬೆಟ್ಟು ಸರಕಾರಿ ಪ್ರಾಥಮಿಕ ಶಾಲೆಯ ಶಿಥಿಲವಾದ ಕಂಪೌಂಡ್ ಭಾಗಶಃ ಕುಸಿತ; ವಾಲಿಕೊಂಡ ಗೇಟ್:… ರಾಜ್ಯದಲ್ಲಿ ಕಾಂಗ್ರೆಸ್ ತಾಲಿಬಾನ್ ರೀತಿ ಆಡಳಿತ ನಡೆಸುತ್ತಿದೆ: ಮಂಗಳೂರಿನಲ್ಲಿ ಪ್ರತಿಪಕ್ಷದ ನಾಯಕ ಆರ್.… ಖಾಸಗಿ ಫೋಟೋ ವೈರಲ್ ಮಾಡ್ತೀನಿ ಎಂದು ಬೆದರಿಸಿದ ಪ್ರಿಯತಮನ ಭೀಕರ ಕೊಲೆ: ಪ್ರಿಯತಮೆ,… ಭಾರತೀಯ ಪಶು ವೈದ್ಯಕೀಯ ಪರಿಷತ್ ಸದಸ್ಯರಾಗಿ ಮಂಗಳೂರಿನ ಡಾ. ಸುಶಾಂತ್ ರೈ ಬೆಳ್ಳಿಪ್ಪಾಡಿ… ಪ್ರಧಾನಿಯ ಸ್ಚಚ್ಫತಾ ಆಂದೋಲನಕ್ಕೆ ಕ್ಯಾರೇ ಎನ್ನದ ರೈಲ್ವೆ ಇಲಾಖೆ: ಫರಂಗಿಪೇಟೆಯಲ್ಲಿ ರಾಶಿ ರಾಶಿ… ಬರೀ 40 ಶಾಸಕರಿದ್ರೆ ಮುಖ್ಯಮಂತ್ರಿಯೇ ಆಗ್ತಾರೆ!: ಕೇವಲ ಇಬ್ಬರು ಸಂಸದರಿದ್ದರೆ ಕೇಂದ್ರದಲ್ಲಿ ಸಚಿವರಾಗಿಯೇ… ಮೂಡಿಗೆರೆ: ಅಪ್ಪ ಕಡಿಯುತ್ತಿದ್ದ ಮರ ಬಿದ್ದು ಮಗ ಸ್ಥಳದಲ್ಲೇ ದಾರುಣ ಸಾವು ನೂತನ ಸಂಸದೆ, ನಟಿ ಕಂಗನಾ ರಣಾವತ್‌ ಗೆ ಸಿಐಎಸ್​ಎಫ್​ ಮಹಿಳಾ ಸಿಬ್ಬಂದಿಯಿಂದ ಕಪಾಳಮೋಕ್ಷ:…

ಇತ್ತೀಚಿನ ಸುದ್ದಿ

ಪತ್ನಿ ಮಕ್ಕಳಿಗೆ ಕ್ಷಮಿಸಿ ಎಂದು ಸೆಲ್ಫೀ ವಿಡಿಯೋ ಮಾಡಿ ಸೆಕ್ಯೂರಿಟಿ ಗಾರ್ಡ್ ಆತ್ಮಹತ್ಯೆ: ಕಳ್ಳತನ ಆರೋಪಕ್ಕೆ ಹೆದರಿ ಸುಸೈಡ್

05/06/2024, 17:37

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ಮಾಡದ ತಪ್ಪಿಗೆ ನನ್ನನ್ನ ಹೊಣೆ ಮಾಡಿದ್ದಾರೆಂದು ಆರೋಪಿಸಿ ಫ್ಯಾಕ್ಟರಿ ಸೆಕ್ಯೂರಿಟಿ ಗಾರ್ಡ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಂಜನಗೂಡು ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಂಜನಗೂಡಿನ ಕಲ್ಲಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ರೇ ಹ್ಯಾನ್ಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸೆಕ್ಯುರಿಟಿ ಗಾರ್ಡ್ ಕಾರ್ಖಾನೆಯ ಆವರಣದಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಕ್ಷಮಿಸುವಂತೆ ಮನವಿ ಮಾಡಿದ್ದಾರೆ. ತಾನು ಮಾಡದ ತಪ್ಪಿಗೆ ನನ್ನನ್ನ ಹೊಣೆ ಮಾಡಿದ್ದಾರೆಂದು ಪೊಲೀಸರ ವಿರುದ್ದ ಆರೋಪಿಸಿ ನೇಣಿಗೆ ಶರಣಾಗಿದ್ದಾರೆ. ಆದ್ರೆ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಕಾರ್ಖಾನೆಯಲ್ಲಿ ಕೆಲಸ ಇಲ್ಲ ಎಂದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದಾಖಲಾಗಿರುವುದು ಅಚ್ಚರಿ ಮೂಡಿಸಿದೆ.
ನಂಜನಗೂಡು ತಾಲ್ಲೂಕಿನ ಮಹದೇವನಗರದ ನಿವಾಸಿ 42 ವರ್ಷದ ನಂಜೇಶ್ ಆತ್ಮಹತ್ಯೆಗೆ ಶರಣಾದವರು. ಶಾಲೆಯೊಂದರಲ್ಲಿ ಅತಿಥಿ ಶಿಕ್ಷಕರಾಗಿದ್ದ ನಂಜೇಶ್ ಕೆಲಸ ಕಳೆದುಕೊಂಡ ಕಾರಣ ರೇ ಹ್ಯಾನ್ಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಾರ್ಖಾನೆಯಲ್ಲಿ ಕಳುವು ಪ್ರಕರಣವಾಗಿತ್ತು. ಈ ಆರೋಪವನ್ನು ನಂಜೇಶ್ ಮೇಲೂ ಹೊರೆಸಲಾಗಿತ್ತು ಎಂದು ಹೇಳಲಾಗಿದೆ. ಆತ್ಮಹತ್ಯೆಗೂ ಮುನ್ನ ವಿಡಿಯೋದಲ್ಲಿ ತಮಗಾದ ಕಿರುಕುಳವನ್ನ ಹೇಳಿಕೊಂಡಿದ್ದಾರೆ. ಕಳ್ಳರನ್ನ ಹಿಡಿದುಕೊಡಬೇಕು ಇಲ್ಲದಿದ್ದಲ್ಲಿ ನೀವೇ ಹೊಣೆಗಾರರಾಗುತ್ತೀರ ಎಂದು ಪೊಲೀಸರು ಒತ್ತಡ ಹೇರಿದ್ದಾರೆಂದು ಎದರಿಸಿದ್ದಾರೆ. ಈ ಹಿನ್ನಲೆ ಗೋವಿಂದ, ರಾಜು ಹಾಗೂ ಪೊಲೀಸರ ಹೆಸರನ್ನು ಹೇಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಂಜೇಶ್ ಸಹೋದರ ನೀಡಿರುವ ದೂರು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸರಿಯಾದ ಕೆಲಸ ಇಲ್ಲದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ನೀಡಿರುವ ಹೇಳಿಕೆ ಅನುಮಾನಕ್ಕೆ ಕಾರಣವಾಗುತ್ತಿದೆ. ನಂಜೇಶ್ ರವರ ಮೇಲೆ ಹೇರಿದ ಒತ್ತಡವಾದ್ರೂ ಏನು ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ. ದೂರು ದಾಖಲಿಸಿಕೊಂಡಿರುವ ನಂಜನಗೂಡು ಪಟ್ಟಣ ಪೊಲೀಸರು ತನಿಖೆ ನಡೆಸಿ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿ, ನ್ಯಾಯ ಒದಗಿಸಬೇಕಿದೆ.

ಇತ್ತೀಚಿನ ಸುದ್ದಿ

ಜಾಹೀರಾತು