ಇತ್ತೀಚಿನ ಸುದ್ದಿ
ಪಶ್ಚಿಮ ಬಂಗಾಳ: ಕೇಂದ್ರ ತನಿಖಾ ದಳಗಳ ವಿರುದ್ದ ಮಮತಾ ಬ್ಯಾನರ್ಜಿ ಸರಕಾರದಿಂದ ಮಸೂದೆ ಪಾಸ್
21/09/2022, 08:17
ಕೊಲ್ಕತ್ತಾ(reporterkarnataka.com):
ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನ ರಾಜ್ಯದಲ್ಲಿ ಹೆಚ್ಚಾಗಿ ಬಳಸ್ತಿರೊ ವಿರುದ್ದವಾಗಿ ಪಶ್ಚಿಮ ಬಂಗಾಳ ವಿಧಾನಸಭೆ ನಿರ್ಣಯ ಒಂದನ್ನ ಪಾಸ್ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ, ಸಿಎಂ ಮಮತಾ ಬ್ಯಾನರ್ಜಿ ಮುಂದೆ ನ್ಯಾಯಾಂಗದ ವಿರುದ್ದ ನಿರ್ಣಯವನ್ನ ತರ್ತಾರಾ ಅಂತ ಪ್ರಶ್ನಿಸಿ ಟೀಕಿಸಿದೆ.
ಇನ್ನು CBI, ED ಹಾಗೂ ಇತರ ಕೇಂದ್ರ ತನಿಖಾ ದಳಗಳ ವಿರುದ್ದ ನಿರ್ಣಯ ಪಾಸ್ ಮಾಡಿದ ಮೊದಲ ರಾಜ್ಯ ಅಂತ ಪಶ್ಚಿಮ ಬಂಗಾಳ ಕರೆಸಿಕೊಂಡಿದೆ.














