1:39 AM Sunday12 - October 2025
ಬ್ರೇಕಿಂಗ್ ನ್ಯೂಸ್
ಹಾಸನಾಂಬ ದರ್ಶನಕ್ಕೆ ಜನರಿಗೆ ತಮ್ಮ ಗುರುತಿನ ಚೀಟಿ ನೀಡಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;…

ಇತ್ತೀಚಿನ ಸುದ್ದಿ

ಕೆನಡಾ ಸಂಸತ್ತಿನಲ್ಲಿ ಕನ್ನಡದ ಕಂಪು: ಮಾತೃಭಾಷೆಯಲ್ಲಿ ಮಾತನಾಡಿದ ಅಪ್ಪಟ ಕನ್ನಡಿಗ ಚಂದ್ರ ಆರ್ಯ

20/05/2022, 16:18

ಒಟ್ಟಾವ(reporterkarnataka.com): ಕೆನಡಾದ ಸಂಸತ್ತಿನಲ್ಲಿ ಕನ್ನಡದ ಧ್ವನಿ ಮೊಳಗಿದೆ. ಕೆನಡಾ ಸಂಸತ್ತಿನ ಸದಸ್ಯನಾಗಿ ಆಯ್ಕೆಯಾದ ಅಪ್ಪಟ ಕನ್ನಡಿಗರೊಬ್ಬರು ಸಂಸತ್ತಿನಲ್ಲಿ ಕನ್ನಡ ಮಾತನಾಡುವ ಮೂಲಕ ಇಡೀ ವಿಶ್ವ ಬೆರಗು ಆಗುವಂತೆ ಮಾಡಿದ್ದಾರೆ.

ನೆಪಿಯನ್ ಕ್ಷೇತ್ರದ ಪ್ರತಿನಿಧಿ, ರಾಜ್ಯಸಭೆ ಸದಸ್ಯರಾದ ಕನ್ನಡಿಗ ಚಂದ್ರ ಆರ್ಯ ಅವರು ಕನ್ನಡದಲ್ಲಿ ಮಾತನಾಡಿದರು. ಸ್ಪೀಕರ್ ಅವರ ಪೂರ್ವಾನುಮತಿ ಪಡೆದು ಅವರು ಸಂಸತ್ತನ್ನುದ್ದೇಶಿ ಮಾತನಾಡಿದರು. ರಾಷ್ಟ ಕವಿ ಕುವೆಂಪು ಅವರ ಎಲ್ಲದರು ಇರು,ಎಂಥಾದರು ಇರು, ಎಂದೆಂದಿಗೂ ನೀನು ಕನ್ನಡವಾಗಿರುವ ಕವನಗಳ ಸಾಲುಗಳನ್ನು ಉದ್ಘರಿಸುವ ಮೂಲಕ ಅವರು ಮಾತು ಮುಗಿಸಿದರು.

ನಮ್ಮ ದೇಶದ ಸಂಸತ್ತಿನಿಂದ ಮತ್ತು ರಾಜಕೀಯ‌ದಿಂದ ದೇಶಭಾಷೆಗಳನ್ನು ಕಣ್ಮರೆಯಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಕೆನಡಾ ಸಂಸತ್ತಿನಲ್ಲಿ ಚಂದ್ರ ಆರ್ಯ ಅವರು ಕನ್ನಡದ ಕಂಪು ಬೀರಿದ್ದಾರೆ.

ಚಂದ್ರ ಆರ್ಯ ಅವರು ತುಮಕೂರು ಜಿಲ್ಲೆಯ ಶಿರಾ ತಾಲೂಕಿನವರು. ತಾಯಿನುಡಿಯ ಕುರಿತು ಅವರ ಕಾಳಜಿ, ಪ್ರೀತಿ ಉತ್ಸಾಹ ನಿಜಕ್ಕೂ ಅನುಕರಣೀಯ.

ಇತ್ತೀಚಿನ ಸುದ್ದಿ

ಜಾಹೀರಾತು