ಇತ್ತೀಚಿನ ಸುದ್ದಿ
ಖೇಲೋ ಇಂಡಿಯಾ ಕ್ರೀಡಾಕೂಟ: ಹರಿಯಾಣ ಪ್ರಥಮ; ಕರ್ನಾಟಕಕ್ಕೆ 3ನೇ ಸ್ಥಾನ
14/06/2022, 11:51
ಹೊಸದಿಲ್ಲಿ(reporterkarnataka.com): ಹರಿಯಾಣದಲ್ಲಿ ನಡೆದ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಕರ್ನಾಟಕ 3ನೇ ಸ್ಥಾನ ಪಡೆಯಿತು. 22 ಚಿನ್ನ, 17 ಬೆಳ್ಳಿ, 28 ಕಂಚು ಸೇರಿದಂತೆ ಒಟ್ಟು 67 ಪದಕಗಳನ್ನು ರಾಜ್ಯದ ಕ್ರೀಡಾಪಟುಗಳು ಗೆದ್ದಿದ್ದಾರೆ.
ಈಜು, ಕುಸ್ತಿ, ಕಬ್ಬಡ್ಡಿ, ಖೋ ಖೋ, ಬ್ಯಾಡ್ಮಿಂಟನ್, ಟ್ರ್ಯಾಕ್ ರನ್ನಿಂಗ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಕರ್ನಾಟಕದ ಆಟಗಾರರು ಪಾರಮ್ಯ ಮೆರೆದಿದ್ದಾರೆ. ರಾಜ್ಯದ ಖ್ಯಾತ ಕ್ರೀಡೆಯಾದ ಮಲ್ಲಗಂಬದಲ್ಲಿ ತಂಡ ಚಿನ್ನದ ಸಾಧನೆ ಮಾಡಿದೆ.
ಕರ್ನಾಟಕ ತಂಡದಲ್ಲಿ 84 ಪುರುಷರು, 110 ಮಹಿಳೆಯರು ಸೇರಿ 194 ಕ್ರೀಡಾಪಟುಗಳು ಭಾಗವಹಿಸಿದ್ದರು.
ಹರಿಯಾಣ ಪ್ರಥಮ ಸಾಧನೆ: ಹರಿಯಾಣ ಕ್ರೀಡಾಪಟುಗಳು 137 ಪದಕ ಸಾಧನೆ ಮಾಡಿದ್ದು, ಇದರಲ್ಲಿ 52 ಚಿನ್ನ, 39 ಬೆಳ್ಳಿ, 46 ಕಂಚಿನ ಪದಕಗಳು ಸೇರಿವೆ. ಈ ಮೂಲಕ ಕ್ರೀಡಾಕೂಟದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಮಹಾರಾಷ್ಟ್ರ 125 ಪದಕಗಳ ಸಮೇತ 2ನೇ ಸ್ಥಾನ ಪಡೆದಿದ್ದು, 45+40+40 ಸಾಧನೆ ಮಾಡಿದೆ.