ಇತ್ತೀಚಿನ ಸುದ್ದಿ
ಕೆಲಸದ ವಿಚಾರದಲ್ಲಿ ಗಲಾಟೆ: ಕಟ್‌ಬೆಲ್ತೂರಿನ ಹರೆಗೋಡಿನಲ್ಲಿ ವ್ಯಕ್ತಿಗೆ ಬಿದಿರಿನ ಕೋಲಿನಿಂದ ಹಲ್ಲೆ
16/07/2022, 21:57
ಕುಂದಾಪುರ(reporterkarnataka.com): ಕೆಲಸದ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ ಘಟನೆ ಕಟ್‌ಬೆಲ್ತೂರು ಗ್ರಾಮದ ಹರೆಗೋಡು ಎಂಬಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.
ಕಟ್‌ಬೆಲ್ತೂರು ಗ್ರಾಮದ ಮುತ್ತಪ್ಪ ಪೂಜಾರಿ ಹಲ್ಲೆಗೊಳಗಾದ ವ್ಯಕ್ತಿ. ಇವರು ಇಂದು ಹರೆಗೋಡು ಮನೋಜ್ ಶೆಟ್ಟಿಯವರ ಸಿಗಡಿ ಕೆರೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಆರೋಪಿ ರಾಘವೇಂದ್ರ ಎಂಬಾತನು ‘ನೀನು ನಮಗೆ ಕೆಲಸ ಇಲ್ಲದ ಹಾಗೆ ಮಾಡಿದ್ದಿಯಾ, ನಿನ್ನನ್ನು ಹೇಗೆ ಓಡಿಸಬೇಕೆಂದು ಗೊತ್ತಿದೆ ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲದೆ, ನಾನು ಆರೋಪಿಗೆ ನೀನು ಇಲ್ಲಿಂದ ಹೋಗು ಎಂದು ಹೇಳಿದ್ದಕ್ಕೆ ಆತ ‘ನನ್ನನ್ನು ಕೈಯಿಂದ ದೂಡಿ, ಬಿದಿರಿನ ಕೋಲಿನಿಂದ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾನೆ ಎಂದು ಮುತ್ತಪ್ಪ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.