2:07 PM Tuesday16 - September 2025
ಬ್ರೇಕಿಂಗ್ ನ್ಯೂಸ್
ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ

ಇತ್ತೀಚಿನ ಸುದ್ದಿ

ಕಾರವಾರ ‘ಸಿದ್ಧಬಸವೇಶ್ವರ’ ಅನುಭವ ಮಂಟಪದಲ್ಲಿ ‘ಅನುಭಾವ ಸಂಗಮ’ ಸಂಪನ್ನ

26/08/2022, 20:49

ಕಾರವಾರ(reporterkarnataka.com):
ಶರಣ ಮಾಸದ ಕೊನೆಯ ಸೋಮವಾರದಂದು ಸುಕ್ಷೇತ್ರ ಕಾರವಾರದ ಬಂಗಾರಪ್ಪ ಕಾಲೋನಿಯ “ಸಿದ್ಧಬಸವೇಶ್ವರ” ಅನುಭವ ಮಂಟಪದಲ್ಲಿ “ಅನುಭಾವ ಸಂಗಮ” ಕಾರ್ಯಕ್ರಮ ಸಂತೋಷ ಸಡಗರದಿಂದ ಸಂಪನ್ನಗೊಂಡಿತು.


ಅಂದು ಶರಣ ಸಿದ್ದಯ್ಯಸ್ವಾಮಿ ಚೌಕಿಮಠ ಗೋನಾಳ ಅವರೊಂದಿಗೆ ಅವರ ಸಹೋದರರ ಕುಟುಂಬವು ಪ್ರತಿವರ್ಷದಂತೆ ಸ್ಥಳೀಯ ಆಯುಷ ಇಲಾಖೆಯ ಮುಖ್ಯಸ್ಥರಾದ ಶರಣ ಡಾ.ಮಲ್ಲಿಕಾರ್ಜುನ ಹಿರೇಮಠ ಮಸ್ಕಿ ಅವರ ನೇತೃತ್ವದಲ್ಲಿ ಒಂದಾಗಿ ಸಕಲ ಸಿದ್ದತೆಯನ್ನು ಮಾಡಿದ್ದಾರೆ. ಹಾಗೆಯೆ ಅಂದು ಸಮಾರಂಭದಲ್ಲಿ ಅಕ್ಕಪಕ್ಕದ ಎಲ್ಲಾ ಜನಸಮುದಾಯದ ಜನಾಸಕ್ತರು ಭಾಗವಹಿಸಿದ್ದು, ನಿಜಕ್ಕೂ “ಇವನಮ್ಮವ” ಎಂಬ ಅಪ್ಪ ಸಂಗನಬಸವಣ್ಣ ಅವರ ಪವಿತ್ರ ವಚನವು ನೆನಪಿಗೆ ತರುವಂತೆ ಆಯೋಜನೆಗೊಂಡಿದೆ. ಅಂದು ಅಲ್ಲಮಪ್ರಭೂ ಅನುಭಾವ ಪೀಠ, ಕಾಂತಾವರ, ಕಾರ್ಕಳ, ಉಡುಪಿಯ ಶರಣ ಜಗನ್ನಾಥಪ್ಪ ಪನಸಾಲೆ ಜನವಾಡಾ ಅವರು ಬಸವಾದಿ ಶರಣರ ಅನೇಕ ಪವಿತ್ರ ವಚನಗಳನ್ನು ಉಲ್ಲೇಖಿಸುತ್ತಾ, ಅಪ್ಪ ಸಂಗನಬಸವಣ್ಣ ಅವರು ಹಾಕಿಕೊಟ್ಟ ಪಥವನ್ನು ನಾವೆಲ್ಲರೂ ಅನುಸರಿಸಿದರೆ ಮಾತ್ರ ಈ ಜಗತ್ತಿನ ಭಾವಿ ಜನಾಂಗವು ಸುರಕ್ಷಿತವಾಗಿ ಬದುಕಲು ಸಾಧ್ಯವೆಂಬ ಮಾತನ್ನು ಹಲವಾರು ದೃಷ್ಟಾಂತಗಳೊಂದಿಗೆ ಹೇಳಿದರು. ನಂತರ ಮಹಾಪ್ರಸಾದದೊಂದಿಗೆ ಕಾರ್ಯಕ್ರಮವು ಮಂಗಳವಾಗಿ ಮುಕ್ತಾಯಗೊಂಡಿತ್ತು, 

ಇತ್ತೀಚಿನ ಸುದ್ದಿ

ಜಾಹೀರಾತು