1:01 AM Sunday20 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಕಣ್ಣಾರೆ ಕಂಡ ಪದ್ಮಶ್ರೀ: ಹತ್ತಾರು ಹಾಜಬ್ಬರು ನಮ್ಮ ನಡುವೆ ಹುಟ್ಟಿಬರಲಿ

20/11/2021, 22:46

ನವೆಂಬರ್ 14, 2021, ಮಕ್ಕಳ ದಿನಾಚರಣೆಯ ಸಂಭ್ರಮ. ಹೊರಗೆ ಜೋರಾಗಿ ಮಳೆ ಸುರಿಯುತ್ತಿತ್ತು. ನಮ್ಮ ಊರಿನ ಹೆಮ್ಮೆಯ ಪದ್ಮಶ್ರೀ ಪುರಸ್ಕೃತ ಹಾಜಬ್ಬ ರವರನ್ನು ಜೆಸಿಐ ಮಂಗಳಗಂಗೋತ್ರಿ ಘಟಕದ ವತಿಯಿಂದ ಭೇಟಿ ಮಾಡುವುದೆಂದು ಮೊದಲೇ ನಿರ್ಧರಿಸಲಾಗಿತ್ತು.

ಮಳೆಯ ಆರ್ಭಟ ನೋಡುವಾಗ ಕತ್ತಲಿನಲ್ಲಿ ಹೋಗುವುದೋ ಬೇಡವೋ ಎಂಬ ದ್ವಂದ್ವದಲ್ಲಿ ನಾನು  ಮುಳುಗಿದೆ. ಏನೇ ಆಗಲಿ ಅವರನ್ನು ಭೇಟಿ ಮಾಡುವುದಾಗಿ ದೃಢ ನಿಶ್ಚಯ ಮಾಡಿ ಅವರ ಮನೆಯಾದ ನ್ಯೂಪಡ್ಪು ಕಡೆಗೆ ನಮ್ಮ ಪ್ರಯಾಣ ಸಾಗಿತ್ತು.

ಅಂದಾಜು 06:45ಕ್ಜೆ ಅವರ ಮನೆಯ ದಾರಿ ತಲುಪಿದೆವು. ವರುಣರಾಯನ ಆರ್ಭಟ ಇನ್ನೂ ಜೋರಾಗಿತ್ತು. ಅದಾಗಲೇ ಕಟೀಲಿನಲ್ಲಿ ಸನ್ಮಾನ ಸಮಾರಂಭ ಮುಗಿಸಿ ಮನೆಗೆ ಬಂದಿದ್ದ ಹಾಜಬ್ಬರು. ಆ ಸುರಿಯುತ್ತಿರುವ ಮಳೆಯಲ್ಲಿ ಮನೆಯ ಜಗಲಿಯಲ್ಲಿ ನಮ್ಮನ್ನು ಎದುರುಗೊಂಡರು.

ಅವರ ಮನೆಯ ಅಂಗಳಕ್ಕೆ ಇಳಿದಾಗ ನಮಗೆ ಅದೇನೋ ಪುನೀತ ಭಾವ.ನಮ್ಮನ್ನು ನೋಡಿದ ತಕ್ಷಣ ಅದೇನು ಆದರಾತಿಥ್ಯ…..

ಅದೇ ಸರಳತೆ, ಅದೇ ನಿರ್ಲಿಪ್ತ ಭಾವ, ಅಹಂಕಾರ ಆಡಂಬರದ ಲವಲೇಶವೂ ಸುಳಿವಿಲ್ಲ..ಅದೇ ಪೂರ್ತಿ ಗುಂಡಿ ಹಾಕದ ಶರ್ಟು…

ಮನೆಯೊಳಗೆ ಬಂದ ತಕ್ಷಣ ಹಲವಾರು ಪ್ರಶಸ್ತಿಗಳು ನಮ್ಮ ಕಣ್ಣನ್ನು ಸೆಳೆದವು.

ನನ್ನ ಮನದಲ್ಲಿದ್ದ ಕುತೂಹಲ, ಆಸೆ ಎಂದರೆ ರಾಷ್ಟ್ರಪತಿಯವರು ಕೊಟ್ಟ ಪದ್ಮಶ್ರೀ ಪುರಸ್ಕಾರವನ್ನು ಕಣ್ಣಾರೆ ನೋಡಿ ಮುಟ್ಟಿ ನಮಸ್ಕರಿಸಬೇಕು ಎಂಬುದಾಗಿತ್ತು.

ಕೇವಲ ಟಿವಿಯಲ್ಲಿ ಮಾತ್ರ ಪದ್ಮಶ್ರೀ ಪುರಸ್ಕಾರದ ದೃಶ್ಯಾವಳಿ ನೋಡುತ್ತಿದ್ದ ನನಗೆ ಪದ್ಮಶ್ರೀಯನ್ನು ನೋಡಿದಾಗ ಆದ ಆನಂದ ಹೇಳತೀರದು.

ಹಾಜಬ್ಬರ ಪದ್ಮಶ್ರೀ ಪುರಸ್ಕಾರದ ಹಿಂದಿರುವ ಸಾಧನೆ ಮತ್ತು ಹಳ್ಳಿಯಿಂದ ದಿಲ್ಲಿಯವರೆಗೆ ಆದಂತಹ ಅನುಭವ ಕೇಳಿದಾಗ ರೋಮಾಂಚನವಾಯಿತು.

ಪ್ರಶಸ್ತಿಯ ಬಗ್ಗೆ ಎಂದಿಗೂ ಕನಸು ಕಾಣದೆ ತನ್ನ ಮಹದಾಸೆಯನ್ನು ಈಡೇರಿಸಲು ಪಣತೊಟ್ಟ ಸಾಮಾನ್ಯ ವ್ಯಕ್ತಿಗೆ ಇಂತಹ ಪುರಸ್ಕಾರ ಬಂದಾಗ ಅದರ ಮೌಲ್ಯ ಹೆಚ್ಚಾಗುತ್ತದೆ. ಪ್ರಶಸ್ತಿಗೆ ಹಣ ಶ್ರೀಮಂತಿಕೆ ಮುಖ್ಯವಲ್ಲ ಸಾಧಿಸಲೇಬೇಕೆಂಬ ಛಲ ಒಂದಿದ್ದರೆ ಸಾಕು ಎಂಬುದಕ್ಕೆ ಹಾಜಬ್ಬರೇ ಸಾಕ್ಷಿ.


ಹಾಜಬ್ಬರ ನಿರ್ಮಲ ಮನಸ್ಸು ಸರಳತೆ ಸಹೃದಯತೆ ಮುಗ್ಧತೆ ಸಾಧಿಸುವ ಛಲ ಅಭಿಮಾನಕ್ಕೆ ಶರಣು ಶರಣು. ಇಂತಹ ಹತ್ತಾರು ಹಾಜಬ್ಬರು ನಮ್ಮ ಭಾರತ ಮಾತೆಯ ಒಡಲಿನಲ್ಲಿ ಹುಟ್ಟಿಬರಲಿ ಎಂಬುದೇ ನಮ್ಮೆಲ್ಲರ ಆಶಯ.

ಇವರ ಜೊತೆ ಮಾತನಾಡುವಾಗ ನನಗೆ ಅನಿಸಿದ್ದು ಇಷ್ಟೇ ಇವರಿಂದ ಇನ್ನೂ ನಾನು ಎಷ್ಟೊಂದು ಕಲಿಯಬೇಕಿದೆ.

ಇತ್ತೀಚಿನ ಸುದ್ದಿ

ಜಾಹೀರಾತು