9:27 AM Tuesday26 - August 2025
ಬ್ರೇಕಿಂಗ್ ನ್ಯೂಸ್
Bangalore | ಪರಿಶಿಷ್ಟ ಜಾತಿ/ ಪಂಗಡ ದೌರ್ಜನ್ಯ ತಡೆ ಕಾಯ್ದೆ ಕಟ್ಟುನಿಟ್ಟಿನಲ್ಲಿ ಜಾರಿಗೊಳಿಸಿ:… Kodagu | ಸಿದ್ದಾಪುರ: ಕರಡಿಗೋಡು ವಂದನಾಪುರ ಎಸ್ಟೇಟ್ ಮನೆ ಆವರಣದಲ್ಲಿ ಕಾಡಾನೆಗಳ ದಾoಧಲೆ ಡಿಸ್ಕಸ್ ಥ್ರೋ ವೇಳೆ ಅವಘಡ: ವಿದ್ಯಾರ್ಥಿ ಗಂಭೀರ: ಮಂಗಳೂರು ಆಸ್ಪತ್ರೆಗೆ ದಾಖಲು ಬ್ರ್ಯಾಂಡ್ ಕರಾವಳಿ ಹೆಸರಲ್ಲಿ ಅಭಿವೃದ್ಧಿಗೆ ಒತ್ತು ನೀಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ನೇಹಿತನ ಆಟೋ ತರಲು ಹೋಗಿದ್ದ ಚಾಲಕ ಅಪಘಾತದಲ್ಲಿ ದುರ್ಮರಣ: ಕಾರು ಡಿಕ್ಕಿ ಹೊಡೆದು… ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣ: ಸುಜಾತ ಭಟ್ ದೂರು ಎಸ್ಐಟಿಗೆ… ಕುಶಾಲನಗರ: ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೇಹಳ್ಳಿ ಪೊಲೀಸ್ ವಶಕ್ಕೆ ದಲಿತ ಸಿಎಂ ಕೂಗು ತಪ್ಪಿಸಲು ಒಳ ಮೀಸಲಾತಿ ಜಾರಿ: ದಿಲ್ಲಿಯಲ್ಲಿ ಮಾಜಿ ಸಿಎಂ… ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಿದ್ದಕ್ಕೆ ಮಾಲೀಕನಿಂದ ಅಮಾನುಷ ಹಲ್ಲೆ: ಯುವಕ ಸಾವು ಧರ್ಮಸ್ಥಳ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ

ಇತ್ತೀಚಿನ ಸುದ್ದಿ

ಕನಿಷ್ಠ ಬೆಂಬಲ ಬೆಲೆ; ಕರ್ನಾಟಕಕ್ಕೆ ಬಾಕಿ ಮೊತ್ತ 902.86 ಕೋಟಿ ಸಬ್ಸಿಡಿ ಬಿಡುಗಡೆ: ಕೇಂದ್ರ ಸಚಿವೆ ಕರಂದ್ಲಾಜೆ

02/04/2022, 10:29

ಬೆಂಗಳೂರು(reporterkarnataka.com): ಕನಿಷ್ಠ ಬೆಂಬಲ ಬೆಲೆಯಡಿಯಲ್ಲಿ ಕರ್ನಾಟಕ ರಾಜ್ಯಕ್ಕೆ ರಾಗಿ ಹಾಗೂ ಜೋಳ ಖರೀದಿಯ ಬಾಕಿ ಮೊತ್ತ 902.86 ಕೋಟಿಗಳನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಕರ್ನಾಟಕ ರಾಜ್ಯದಲ್ಲಿ 2021-22ನೇ ಆರ್ಥಿಕ ವರ್ಷದಲ್ಲಿ ಒಟ್ಟು 5.02 ಲಕ್ಷ ಮೆಟ್ರಿಕ್ ಟನ್ ರಾಗಿ (4.26 ಲಕ್ಷ ಮೆ. ಟನ್) ಮತ್ತು ಜೋಳ (75,302 ಮೆ. ಟನ್) ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆಯಡಿಯಲ್ಲಿ ಖರೀದಿಸಿ, ಪಡಿತರ ವಿತರಣಾ ಪದ್ಧತಿಯಡಿ ಫಲಾನುಭವಿಗಳಿಗೆ ವಿತರಿಸಲು ಅನುಮತಿ ನೀಡಿತ್ತು.

2021-22ರ ಆರ್ಥಿಕ ವರ್ಷದಲ್ಲಿ ಕನಿಷ್ಠ ಬೆಂಬಲ ಬೆಲೆಯಡಿಯಲ್ಲಿ ಖರೀದಿ ಮಾಡಿ, ವಿತರಿಸಿದ ಧಾನ್ಯಗಳ ರಾಜ್ಯದ ಪಾಲಿನ ಬಾಕಿ ಇರುವ ಸಹಾಯಧನವನ್ನು ಬಿಡುಗಡೆಗೊಳಿಸುವಂತೆ ಕೋರಿ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಇಲಾಖೆಯ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ಮಾ. 29ರಂದು ಪತ್ರವನ್ನು ಬರೆದಿದ್ದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರ ಕೋರಿಕೆಯನ್ನು ಪರಿಗಣಿಸಿದ ಕೇಂದ್ರ ಸರಕಾರ, ಮಾ. 30ರಂದು ಕರ್ನಾಟಕ ರಾಜ್ಯದ ರಾಗಿ ಹಾಗೂ ಜೋಳ ಖರೀದಿಯ ಬೆಂಬಲ ಬೆಲೆಯ ಬಾಕಿ ಮೊತ್ತ 902.86 ಕೋಟಿಗಳನ್ನು ತ್ವರಿತವಾಗಿ ಬಿಡುಗಡೆ ಮಾಡಿ ಆದೇಶಿಸಿದೆ.

ಕರ್ನಾಟಕದ ರೈತರ ಹಿತಾಸಕ್ತಿಯನ್ನು ಪರಿಗಣಿಸಿ, ಕೇಂದ್ರ ಸರಕಾರದಿಂದ ಸಹಾಯಧನವನ್ನು ಅತೀ ಶೀಘ್ರದಲ್ಲಿ ಬಿಡುಗಡೆಗೊಳಿಸಿದಕ್ಕೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಇಲಾಖಾ ಸಚಿವ ಪಿಯೂಷ್ ಗೋಯಲ್ ಅವರಿಗೆ ಸಚಿವೆ ಶೋಭಾ ಕೃತಜ್ಞತೆ ಸಲ್ಲಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು