2:01 AM Monday16 - September 2024
ಬ್ರೇಕಿಂಗ್ ನ್ಯೂಸ್
ನಂಜನಗೂಡು: ಮುನಿರತ್ನ ವಿರುದ್ಧ ಜನ ಸಂಗ್ರಾಮ ಪರಿಷತ್ ಪ್ರತಿಭಟನೆ: ಶಾಸಕ ಸ್ಥಾನದಿಂದ ವಜಾಗೊಳಿಸಲು… ಜೈಪುರದಲ್ಲಿ ಇಂಡಿಯನ್ ಯೂತ್ ಪಾಲಿ೯ಮೆಂಟ್ 27ನೇ ಅಧಿವೇಶನ: ಸ್ಪೀಕರ್ ಖಾದರ್ ಉದ್ಘಾಟನೆ ನಮ್ಮ‌ ಶಾಲೆ‌ ನಮ್ಮ‌ ಜವಾಬ್ದಾರಿ ಕಾರ್ಯಕ್ರಮ ಸರಕಾರಿ ಶಾಲಾ ಮಕ್ಕಳ ಉಜ್ವಲ ಭವಿಷ್ಯಕ್ಕೆ… ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಭಾರೀ ಫೈಟ್: ಮಹಿಳಾ ಅಭ್ಯರ್ಥಿಯಿಂದ ಪ್ರಬಲ ಪೈಪೋಟಿ ಮಹಿಳಾ ಆಯೋಗದ ಅಧ್ಯಕ್ಷೆ ಬಂದ್ರೂ ಅಧಿಕಾರಿಗಳು ನಾಪತ್ತೆ: ರಾಯಲ್ಪಾಡು ಪ್ರಾಥಮಿಕ ಆರೋಗ್ಯ ಕೇಂದ್ರ,… ಅಥಣಿ: ಶೌಚಕ್ಕೆ ಹೋದ ಸಂದರ್ಭದಲ್ಲಿ ಕಾಲು ಜಾರಿ ಕಾಲುವೆಗೆ ಬಿದ್ದು ಯುವಕ ದಾರುಣ… ನಂಜನಗೂಡು: ಭಗೀರಥ ಹಾಗೂ ಕನಕ ಸಮುದಾಯ ಭವನಕ್ಕೆ ಶಾಸಕರಿಂದ ಭೂಮಿ ಪೂಜೆ ಮಂಗಳೂರು: ಸಾಕು ನಾಯಿಯ ತ್ಯಾಜ್ಯ ಸಂಗ್ರಹಿಸುವ ವಾಹನಕ್ಕೆ ನೀಡಿದ ಪಾಪಿಗಳು; ವೀಡಿಯೊ ವೈರಲ್… ವೈದ್ಯರ ಮೇಲೆ ಹಲ್ಲೆ ಪ್ರಕರಣ: ಚಿಕ್ಕಮಗಳೂರು ನಗರ ಠಾಣೆ ಎದುರು ಆರೋಗ್ಯ ಸಿಬ್ಬಂದಿಗಳ… ರಸ್ತೆ ಆಳುವ ಬೀದಿ ನಾಯಿಗಳು: ಶ್ರೀನಿವಾಸಪುರದಲ್ಲಿ ಶ್ವಾನಗಳದ್ದೇ ಕಾಟ; ಕಣ್ಮುಚ್ಚಿ ಕುಳಿತ ಪುರಸಭೆ…

ಇತ್ತೀಚಿನ ಸುದ್ದಿ

ಕಂಬಳ ಕೋಣಗಳ ಯಜಮಾನ ಕೆದುಬರಿ ಗುರುವಪ್ಪ ಪೂಜಾರಿ ಅಪಘಾತದಲ್ಲಿ ನಿಧನ

08/08/2021, 17:59

Photo source : BeautyOfTulunad
ಮಂಗಳೂರು (ReporterKarnataka.com)

ಕಂಬಳ ಕ್ಷೇತ್ರದಲ್ಲಿ ಅಗ್ರಮಾನ್ಯರಾದ ಕಂಬಳದ ಕೋಣಗಳ‌ ಯಜಮಾನ ಗುರುಪುರ ಕೆದುಬರಿ ಗುರುವಪ್ಪ ಪೂಜಾರಿಯವರು ಅಪಘಾತದಲ್ಲಿ ನಿಧನರಾಗಿದ್ದಾರೆ.
ಕಂಬಳ ಕ್ಷೇತ್ರದಲ್ಲಿ ಗುರುಪುರ ಕೆದುಬರಿ ಗುರುವಪ್ಪ ಪೂಜಾರಿಯ ಹೆಸರು ಚಿರಪರಿಚಿತ. ಕಳೆದ 47 ವರ್ಷಗಳಿಂದ ಕಂಬಳ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಇವರು ಕೃಷಿಭೂಮಿ ಹೊಂದಿದ್ದು, ಬಾಲ್ಯದಿಂದಲೇ ಕಂಬಳದ ಆಸಕ್ತಿ ಹೊಂದಿದ್ದರು, ತನ್ನ ಗದ್ದೆ ಉಳಲೆಂದು ಉತ್ತಮ ಜಾತಿಯ ಕೋಣಗಳನ್ನು ತಂದು, ಕೃಷಿ ಕೆಲಸ ಮುಗಿದ ಬಳಿಕ ಕಂಬಳ ಗದ್ದೆಗಳಲ್ಲಿ ಓಡಿಸಿ ಖುಷಿ ಪಡೆಯುತ್ತಿದ್ದರು. ಮುಂದೆ, ದೂರದ ಊರುಗಳಲ್ಲಿ ನಡೆಯುವ ಕಂಬಳಗಳತ್ತ ಗಮನ ಕೇಂದ್ರೀಕರಿಸಿದ ಇವರು ಕಂಬಳಕ್ಕಾಗಿಯೇ ಹುಬ್ಬಳ್ಳಿ, ಕೋಟಾ ಮೊದಲಾದ ಕಡೆಯಿಂದ ಉತ್ತಮ ಜಾತಿಯ ಕೋಣಗಳನ್ನು ತಂದು, ಪಳಗಿಸುವುದರಲ್ಲಿ ಎತ್ತಿದ ಕೈ. ಇವರು ಹಿರಿಕಿರಿಯ ಕಂಬಳಾಸಕ್ತರ ಪ್ರೀತಿಗೆ ಪಾತ್ರರಾಗಿದ್ದಾರೆ. ಪ್ರಥಮ ಬಾರಿಗೆ ಬಾರಾಡಿ ಕಂಬಳದಲ್ಲಿ ಗುರುತಿಸಲ್ಪಟ್ಟಿದ್ದ ಇವರು ಇದಕ್ಕಿಂತ ಮುಂಚೆ ಪೂಕರೆ ಕಂಬಳಗಳಲ್ಲಿ ಪಾಲ್ಗೊಂಡಿದ್ದರು. ಆರಂಭದ ದಿನಗಳಲ್ಲಿ ಕೋಣ ಓಡಿಸಿದ್ದರು. ಬಳಿಕ ಜೋಡಿ ಕೋಣ ಸಾಕಿ, ಅವುಗಳನ್ನು ಕಂಬಳಕ್ಕೆ ಕೊಂಡೊಯ್ಯುವ ಗೀಳು ಬೆಳೆಸಿಕೊಂಡಿದ್ದರು, ದಕ್ಷಿಣ ಕನ್ನಡ ಜಿಲ್ಲೆ ಮತ್ತು ನೆರೆಯ ಉಡುಪಿ ಜಿಲ್ಲೆಯಲ್ಲಿ ನಡೆಯುವ ಎಲ್ಲ ಕಂಬಳಗಳಲ್ಲಿ ಕೋಣ ಇಳಿಸಿದ ಇವರಿಗೆ ಬಹುತೇಕ ಕಡೆಗಳಲ್ಲಿ ಮೆಡಲ್ ಸಿಕ್ಕಿದೆ. ಕದ್ರಿ, ಮೂಲ್ಕಿ, ಮಿಜಾರು, ಬಜಗೋಳಿ, ಪುತ್ತೂರು, ಕಾವಳಕಟ್ಟೆ-ಮೂಡೂರು ಪಡು, ಉಪ್ಪಿನಂಗಡಿ, ಜೆಪ್ಪು, ಕಟಪಾಡಿ, ಮೂಡಬಿದ್ರೆ, ವೇಣೂರು, ಕಾಜೂರು, ಬೋಳಿಯಾರು, ಪಡುಬಿದ್ರಿ, ಐಕಳ ಬಾವ, ತಿರುವೈಲು, ಬೊಳ್ಳೂರು (ಗುರುಪುರ), ಸುರತ್ಕಲ್, ಪಿಲಿಕುಲ, ಹೊಸಬೆಟ್ಟು ಹೀಗೆ ಎಲ್ಲೆಲ್ಲಿ ಕಂಬಳ ನಡೆಯುತ್ತಿದೆಯೋ ಅಲ್ಲಿ ಕೆದುಬರಿ ಗುರುವಪ್ಪನವರ ಕೋಣಗಳು ಹಾಜರಾಗುತ್ತಿದ್ದವು.

ಇತ್ತೀಚಿನ ಸುದ್ದಿ

ಜಾಹೀರಾತು