6:52 PM Wednesday27 - November 2024
ಬ್ರೇಕಿಂಗ್ ನ್ಯೂಸ್
ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​

ಇತ್ತೀಚಿನ ಸುದ್ದಿ

ಕಲ್ಲರಕೋಡಿ ಸರಕಾರಿ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸನ್ಮಾನ 

13/11/2021, 11:20

ಚಿತ್ರ :ಅನುಷ್ ಪಂಡಿತ್ ಮಂಗಳೂರು

ಮಂಗಳೂರು(reporterkarnataka.com): ಕಲ್ಲರಕೋಡಿ ಸರಕಾರಿ ಪ್ರೌಢಶಾಲೆಯಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ ಅವರು ಉದ್ಘಾಟಿಸಿದರು. 


ಮಂಗಳೂರು ಶಾಸಕ ಯು.ಟಿ. ಖಾದರ್ ಎಸೆಸೆಲ್ಸಿಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಬಬಿತಾ ,ಪಲ್ಲವಿ, ನಮ್ರತಾ ಅವರನ್ನು ಸ್ಮರಣಿಕೆ ಮತ್ತು ನಗದು ಬಹುಮಾನದೊಂದಿಗೆ ಸನ್ಮಾನಿಸಿದರು. ಕನ್ನಡ ಮತ್ತು ಹಿಂದಿ ಭಾಷಾ ವಿಷಯದಲ್ಲಿ ಅಧಿಕ ಅಂಕ ಗಳಿಸಿದ ಗಳಿಗೆ ನಗದು ಬಹುಮಾನವನ್ನು ನೀಡಿದರು. ಎಂ.ಆರ್. ಪಿ.ಎಲ್  ವತಿಯಿಂದ ನೀಡಲಾದ 3.08 ಲಕ್ಷದ ಪೀಠೋಪಕರಣಗಳ ಸಾಂಕೇತಿಕ ಹಸ್ತಾಂತರವನ್ನು ಮುಖ್ಯೋಪಾಧ್ಯಾಯರಿಗೆ ಮಾಡಿ ಮಾಡಿದರು. 


ಅಬ್ದುಲ್ ಅಜೀಜ್ ಆರ್. ಕೆ. ಸಿ.  ಶಾಲಾ ಮಕ್ಕಳಿಗೆ ಅನ್ನ ದಾಸೋಹಕ್ಕಾಗಿ ಸ್ಟೀಲ್ ಬಟ್ಟಲುಗಳನ್ನು ಕೊಡುಗೆಯಾಗಿ ನೀಡಿದರು.

ಶಾಲೆಗೆ ಕೊಡುಗೆಯನ್ನು ನೀಡಿದ ದಾನಿಗಳಾದ ಅಬ್ದುಲ್ ಅಝೀಝ್ ಆರ್. ಕೆ. ಸಿ , ನಾಸಿರ್ ಸಾಮಾನಿಗೆ, ಎ.ಜೆ ಶೇಖರ್ ,

ಸ್ಟೀಫನ್ ಮಿನೆಜಸ್, ಪ್ರತಿಮಾ ಹೆಬ್ಬಾರ್, ಫ್ರ್ಯಾಂಕಿ ಫ್ರಾನ್ಸಿಸ್ ಕೂತಿನ್ನೋ, ವಿಲಿಯಮ್ ಜೋಸೆಫ್, ಅವರನ್ನು  ಸನ್ಮಾನಿಸಲಾಯಿತು. 


ಹರೇಕಳ ಹಾಜಬ್ಬ ಅವರನ್ನು ಶಾಲೆಯ ಎಸ್. ಡಿ. ಎಂ. ಸಿ. ಶಿಕ್ಷಕರ ಪರವಾಗಿ ಸನ್ಮಾನಿಸಲಾಯಿತು.. ಶಾಲಾ ಮೂಲಭೂತ ಸೌಕರ್ಯಕ್ಕಾಗಿ ಶ್ರಮಿಸಿದ ಶಾಲಾ ಶಿಕ್ಷಕಿ ಜಯಲಕ್ಷ್ಮಿ ಜಿ.  ಅವರನ್ನು  ಯು.ಟಿ. ಖಾದರ್  ಸನ್ಮಾನಿಸಿದರು.

ಅಧ್ಯಕ್ಷತೆಯನ್ನು ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೈಲಜಾ ಶೆಟ್ಟಿ ವಹಿಸಿದ್ದರು. ಎಸ್. ಡಿ. ಎಂ ಅಧ್ಯಕ್ಷ ಸಿದ್ದಿಕ್ ಪಾರೆ, ಬಂಟ್ವಾಳ ಕ್ಷೇತ್ರ ಸಮನ್ವಯಾಧಿಕಾರಿ ರಾಘವೇಂದ್ರ ಬಲ್ಲಾಳ್, ಜೆಸಿ ಮಂಗಳಗಂಗೋತ್ರಿ ಕೊಣಾಜೆ ಘಟಕದ ಅಧ್ಯಕ್ಷ ಫ್ರಾಂಕೀ ಫ್ರಾನ್ಸಿಸ್ ಕುಟಿನ್ನೋ, ಹ್ಯುಮಾನಿಟಿ  ಫೌಂಡೇಶನ್ ಅಧ್ಯಕ್ಷ  ನಾಸಿರ್ ಸಾಮಾನಿಗೆ, ಅಬ್ದುಲ್ ಅಝೀಝ್ ಆರ್. ಕೆ.ಸಿ., ಪ್ರತಿಮಾ ಹೆಬ್ಬಾರ್, ಜೀನತ್ , ಸಿ ಆರ್ ಪಿ ಅಶಾ, ಶಾಲಾ ಮುಖ್ಯೋಪಾಧ್ಯಾಯಿನಿ ಸೀಮಾ ಮರಿಯಾ ಡಿಸೋಜ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಮೀರಾ, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಅಬ್ದುಲ್ ರಝಾಕ್ ಉಪಸ್ಥಿತರಿದ್ದರು.


ಕಾರ್ಯಕ್ರಮವು ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಸೀಮಾ ಮರಿಯ ಡಿಸೋಜ ಸ್ವಾಗತಿಸಿದರು.

ಪ್ರಾಸ್ತಾವಿಕ ವಾಗಿ ಎಸ್ಡಿಎಂಸಿ ಕಾರ್ಯಾಧ್ಯಕ್ಷ ಸಿದ್ದಿಕ್ ಪಾರೆಯವರು ಮಾತನಾಡಿದರು.
ಪ್ರತಿಭಾ ಪುರಸ್ಕಾರದ ಪಟ್ಟಿಯನ್ನು  ಪುಷ್ಪ ವಾಚಿಸಿದರು. ಬಟ್ಟಲು ವಿತರಣೆ ಕಾರ್ಯಕ್ರಮವನ್ನು ಸಂತೋಷ್ ಕುಮಾರ್  ನಿರ್ವಹಿಸಿದರು. ದಾನಿಗಳ ಸನ್ಮಾನದ ವಿವರವನ್ನು ವಿನಿತಾ ಮತ್ತು ಪ್ರಭಾಕರ್ ವಾಚಿಸಿದರು. ಕಾರ್ಯಕ್ರಮ ನಿರೂಪಣೆ ಯನ್ನು ಕನ್ನಡ ಭಾಷಾ ಶಿಕ್ಷಕಿ ಜಯಲಕ್ಷ್ಮಿ ಮಾಡಿದರು ಮತ್ತು ಮಾಲಿನಿ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು