1:17 AM Sunday4 - May 2025
ಬ್ರೇಕಿಂಗ್ ನ್ಯೂಸ್
Murder | ನಾರಾಯಣಪುರ: ಗೌಡಪ್ಪ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಅಪ್ರಾಪ್ತ ವಯಸ್ಸಿನ… ಶಾಂತಿಗಾಗಿ ಪ್ರಯತ್ನಿಸಿದ್ದೇನೆ ಹೊರತು ಯಾರ ಪರವೂ ಇಲ್ಲ, ಯಾರ ವಿರುದ್ದವೂ ಇಲ್ಲ: ಸ್ಪೀಕರ್… ಕೇಂದ್ರಕ್ಕೆ 4.5 ಲಕ್ಷ ಕೋಟಿ ತೆರಿಗೆ ಕೊಟ್ಟರೆ ರಾಜ್ಯಕ್ಕೆ ವಾಪಸ್ ಬರುವುದು ಕೇವಲ… Vijayapura | ಸಚಿವ ಜಮೀರ್‌ ಸುಮ್ಮನಿದ್ದರೆ ಸಾಕು, ಅದೇ ದೊಡ್ಡ ದೇಶ ಸೇವೆ:… ತನಿಖೆಯ ಮುನ್ನವೇ ಫಾಝಿಲ್ ಕುಟುಂಬಕ್ಕೆ ಕ್ಲೀನ್ ಚಿಟ್; ಸ್ಪೀಕರ್ ಖಾದರ್ ತಕ್ಷಣ ರಾಜೀನಾಮೆ… Chikkamagaluru | ಪೆಹಲ್ಗಾಮ್ ದಾಳಿ: ಆಲ್ದೂರು ಪಟ್ಟಣ ಬಂದ್; ವ್ಯಾಪಾರ-ವಹಿವಾಟು ಸ್ತಬ್ದ; ವಾರದ… Kerala | ಪ್ರಧಾನಿ ಮೋದಿ – ಕೇರಳ ಸಿಎಂ ಪಿಣರಾಯಿ ವಿಜಯನ್ ಒಂದೇ… Karnataka High Court | ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಗೆ ಅಶ್ಲೀಲ ಪದ… ಅಲ್ಲಪಟ್ಟಣದಿಂದ ಮೆಲ್ಲ ಮೆಲ್ಲನೇ ಬಂದೆ…ರಾಮೇಶ್ವರಾ…ಅನ್ನದಾನೇಶ್ವರಾ: ಮನೆ ದೇವರ ಲಾವಣಿ ಹಾಡಿದ ಸಿಎಂ ಸಿದ್ದರಾಮಯ್ಯ Chikkamagaluru | ಜಯಪುರ ಅತ್ತಿಕುಡಿಗೆ ರಸ್ತೆ ಬದಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ

ಇತ್ತೀಚಿನ ಸುದ್ದಿ

Kalladka | ನಿಟಿಲಾಪುರ ಸದಾಶಿವ ದೇವಸ್ಥಾನ: ಮೇ 2ರಿಂದ 4ರ ವರೆಗೆ ಅತಿಮಹಾರುದ್ರಯಾಗ

01/05/2025, 16:32

ಬಂಟ್ವಾಳ(reporterkarnataka.com):ಅತಿಮಹಾರುದ್ರಯಾಗ ಸಮಿತಿ ವತಿಯಿಂದ ಮೊಗರ್ನಾಡು ಸಾವಿರ ಸೀಮೆಯ ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ವಠಾರದಲ್ಲಿ ಮೇ 2ರಿಂದ ಮೇ 4 ರವರಗೆ ಅತಿಮಹಾರುದ್ರಯಾಗ ನಡೆಯಲಿದೆ ಎಂದು ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ತಿಳಿಸಿದ್ದಾರೆ.

ಅವರು ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು.
ಈ ಯಾಗದ ಅಂಗವಾಗಿ ಚಾಂದ್ರಮಾನ ಯುಗಾದಿಯ ಸಂದರ್ಭದಲ್ಲಿ ದೀಪ ಪ್ರಜ್ವಲಿಸಿ ಪ್ರಾರಂಭವಾದ ಪಾರಾಯಣ ಎ. 29ರ ವರೆಗೆ 18158 ಪಾರಾಯಣಗಳು ಪೂರ್ತಿಯಾಗಿದೆ.
ವಾರಣಾಸಿಯ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ, ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಾಡಿನ ಸಮಸ್ತ ಸಂಸ್ಥಾನದ‌ ಮಠಾಧೀಶರುಗಳ ದಿವ್ಯ ಉಪಸ್ಥಿತಿ, ವಿವಿಧ ಪುಣ್ಯ ಕ್ಷೇತ್ರಗಳ ಧರ್ಮಾಧಿಕಾರಿಗಳು , ಧರ್ಮದರ್ಶಿಗಳು, ಧಾರ್ಮಿಕ ಮುಖಂಡರುಗಳ ಸಹಭಾಗಿತ್ವದಲ್ಲಿ ಸಹಕಾರದಲ್ಲಿ ಲೋಕಲ್ಯಾಣಾರ್ಥವಾಗಿ ಅತಿಮಹಾರುದ್ರಯಾಗ ಸಂಕಲ್ಪದಂತೆ ನಡೆಯಲಿದೆ ಎಂದು ಅವರು ತಿಳಿಸಿದರು. ಸಾರ್ವಜನಿಕವಾಗಿಯೇ ಏರ್ಪಡಿಸುತ್ತಿರುವುದು ಯಾಗದ ವಿಶೇಷವಾಗಿದೆ ಎಂದು ಹೇಳಿದರು.
ಮೇ 2ರಂದು ಶತರುದ್ರಾಭಿಷೇಕ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಮೇ 3ರಂದು ಕ್ಷೇತ್ರಕ್ಕೆ ಕಲ್ಲಡ್ಕ ಪೇಟೆಯಿಂದ ಹಸಿರು ಹೊರೆಕಾಣಿಕೆ ಶೋಭಯಾತ್ರೆ ನಡೆಯಲಿದೆ.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಮೇ 4ರಂದು ಅತಿಮಹಾರುದ್ರಯಾಗ ನಡೆಯಲಿದ್ದು, ಸಂಜೆ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.
ಮೂರು ದಿನಗಳಲ್ಲಿ ಸಾವಿರಾರು ಭಕ್ತರು ಯಾಗದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸಚಿನ್ ರೈ ಮಾಣಿ, ಅಜಿತ್ ಕುಮಾರ್ ಬರಿಮಾರ್, ಗಣೇಶ್ ಶೆಟ್ಟಿ ಗೋಳ್ತಮಜಲು, ತೋಟ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಉಪಸ್ಥಿತರಿದ್ದರು. ಕಲ್ಲಡ್ಕದಿಂದ ನೆಟ್ಲ ಕ್ಷೇತ್ರಕ್ಕೆ ವಾಹನ ವ್ಯವಸ್ಥೆ ಮಾಡಲಾಗುವುದು. ಪ್ರತಿದಿನ ಸಹಸ್ರಾರು ಮಂದಿ ಬರುವ‌ ಭಕ್ತಾದಿಗಳಿಗೆ ಅನ್ನಸಂತರ್ಪಣೆ, ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು