ಇತ್ತೀಚಿನ ಸುದ್ದಿ
ಕಲ್ಲಡ್ಕ ಶ್ರೀ ಶಾರದಾ ಸೇವಾ ಪ್ರತಿಷ್ಠಾನ ವತಿಯಿಂದ 46ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವಕ್ಕೆ ಚಾಲನೆ
20/10/2023, 19:10

ಬಂಟ್ವಾಳ(reporterkarnataka.com): ಕಲ್ಲಡ್ಕ ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ವತಿಯಿಂದ 46ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವ ಅಂಗವಾಗಿ
ಎಂ ಆರ್ ಪಿ ಎಲ್ ಅಭಿಯಂತರರಾದ ವಿನಯ ಕುಮಾರ್ ಬಲ್ಕಟ್ಟ ಅವರು ದ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಮೂರ್ತಿ ಶ್ರೀಪತಿ ಭಟ್ ಪಲನೀರು ಅವರಿಂದ ಗಣಹೋಮ ಹಾಗೂ ಶ್ರೀ ಶಾರದಾ ಮಾತೆಯ ಪ್ರತಿಷ್ಠೆ ನೆರವೇರಿತು. ನಂತರ ನಡೆದ ಭಜನಾ ಸಂಕೀರ್ತನೆಯ ದ್ವೀಪ ಪ್ರಜ್ವಲನೆಯನ್ನು ಚೆನ್ನಪ್ಪ ಪೂಜಾರಿ ಗುಂಡಿಮಜಲು, ಮತ್ತು ವಿಶ್ವನಾಥ ದೇವಾಡಿಗ ನೆಟ್ಲ ನೆರವೇರಿಸಿದರು.
ನಂತರ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಪ್ರಾರಂಭಗೊಂಡಿತು. ಈ ಸಂದರ್ಭದಲ್ಲಿ ಶ್ರೀ ಶಾರದಾ ಪ್ರತಿಷ್ಠಾನದ ಅಧ್ಯಕ್ಷ ಯತೀನ್ ಕುಮಾರ್ ಪಂಚವಟಿ, ಪ್ರಧಾನ ಕಾರ್ಯದರ್ಶಿ ವಜ್ರನಾಥ ಕಲ್ಲಡ್ಕ,ಉತ್ಸವ ಸಮಿತಿಯ ಅಧ್ಯಕ್ಷರಾದ ಯೋಗೀಶ್ ಗೌರೀಶ್, ಕಾರ್ಯದರ್ಶಿ ಪ್ರಮಿತ್ ಕುಮಾರ್, ಚಿ. ರಮೇಶ್, ನರಸಿಂಹ, ನಾಗರಾಜ್ ಬಲ್ಯಾಯ, ರಾಜೇಶ್ ಕೊಟ್ಟಾರಿ ಮತ್ತು ಪ್ರತಿಷ್ಠಾನದ ಸದಸ್ಯರು, ಉತ್ಸವ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.