ಇತ್ತೀಚಿನ ಸುದ್ದಿ
ಕಾಗವಾಡ: ಮಹಾರಾಷ್ಟ ಸಿಎಂ ಉದ್ದವ್ ಠಾಕ್ರೆ ಪ್ರತಿಕೃತಿಗೆ ಬೆಂಕಿ ಹಚ್ಚಿ ಕನ್ನಡ ಪರ ಸಂಘಟನೆಗಳ ಪ್ರತಿಭಟನೆ; ವಾಹನ ಸಂಚಾರ ರದ್ದು
18/12/2021, 15:51
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಮಹಾರಾಷ್ಟ್ರದ ಗಡಿಯಲ್ಲಿರವ ಕಾಗವಾಡ ಪಟ್ಟಣದಲ್ಲಿ ಕನ್ನಡ ಪರ ಸಂಘಟನೆಗಳಿಂದ ಮರಾಠಿಗರ ಪುಂಡಾಟಿಕೆ ವಿರುದ್ದ ಪ್ರತಿಭಟನೆ ನಡೆಯಿತು. ರಸ್ತೆ ಮಧ್ಯದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ದವ ಠಾಕ್ರೆ ಪ್ರತಿಕೃತಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು.
ಮಹಾರಾಷ್ಟ್ರದ ಸಿಎಂ ಉದ್ದವ ಠಾಕ್ರೆ ಪ್ರತಿಮೆಗೆ ಚಪ್ಪಲಿಯಿಂದ ಹೊಡೆದು ಕರವೇ ಹಾಗೂ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಬೆಂಕಿ ಹಚ್ಚಿದರು.
ಕಾಗವಾಡ ಪಟ್ಟಣದಲ್ಲಿ ಮರಾಠಿ ಬೋರ್ಡ್ಗಳನ್ನು ಕಿತ್ತು ಹಾಕಿ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಮಹಾರಾಷ್ಟ್ರದ ಶಿವಸೇನೆಗೆ ಧಿಕ್ಕಾರ ಕೂಗಿ ಗಡಿಯಲ್ಲಿ ಕರವೇ ಇತರೆ ಕನ್ನಡ ಸಂಘಟನೆಯ ಕಾರ್ಯಕರ್ತರು ಆಕ್ರೋಶ ಹೊರಗೆಡಹಿದರು.
ಗಡಿಯಲ್ಲಿ ಬಿಗುವಿನ ವಾತಾವರಣ ನೆಲೆಸಿದೆ. ಕರ್ನಾಟಕದ ವಾಹನಗಳು ಮಹಾರಾಷ್ಟ್ರಕ್ಕೆ, ಮಹಾರಾಷ್ಟ್ರದ ವಾಹನಗಳನ್ನು ಕರ್ನಾಟಕಕ್ಕೆ ಸಂಚರಿಸಿದಂತೆ ಪೊಲೀಸರಿಂದ ನಿರ್ಭಂಧ ಹೇರಿದ್ದಾರೆ.