ಇತ್ತೀಚಿನ ಸುದ್ದಿ
ಕಡಲನಗರಿ ಕುಡ್ಲದಲ್ಲಿ 2 ದಿನಗಳ ‘ಹಲಸಿನ ಹಬ್ಬ’; ಜಾಕ್ ಫ್ರುಟ್ ಐಸ್ ಕ್ರೀಂ, ಹೋಳಿಗೆ ಘಮಘಮ!
03/06/2023, 22:55
ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಸಾವಯವ ಕೃಷಿಕ ಗ್ರಾಹಕ ಬಳಗದ ಆಶ್ರಯದಲ್ಲಿ ಎರಡು ದಿನಗಳ ಹಲಸಿನ ಹಬ್ಬ ನಗರದ ಶರವು ದೇಗುಲದ ಬಳಿಯ ಬಾಳಂ ಭಟ್ ಹಾಲ್ ನಲ್ಲಿ ಶನಿವಾರ ಆರಂಭವಾಯಿತು.
ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ಹಲಸಿನ ಹಬ್ಬ ಮೇಳೈಸಲಿದೆ. ಹಲಸಿನ ಹಬ್ಬದಲ್ಲಿ ಹಲವು ಬಗೆಯ ಹಲಸಿನ ಹಣ್ಣಿನ ಮಾರಾಟ ನಡೆಯಲಿದೆ. ಹಲಸಿನಿಂದ ತಯಾರಿಸಿ ಐಸ್ ಕ್ರೀಂ, ಹೋಳಿಗೆ ಸೇರಿದಂತೆ ವಿವಿಧ ಖಾದ್ಯ ಮಾರಾಟ ನಡೆಯಲಿದೆ. ವಿವಿಧ ತಳಿಯ ಹಲಸಿನ ಗಿಡಗಳ ಮಾರಾಟವನ್ನು ಕೂಡ ಆಯೋಜಿಸಲಾಗಿದೆ. ಗೆಣಸು, ತರಕಾರಿಯ ಬೀಜಗಳು ಕೂಡ ಲಭ್ಯವಿದೆ.