6:46 PM Tuesday22 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ಕಬಿನಿ ಹಿನ್ನೀರು ಪ್ರದೇಶದಲ್ಲಿ ಪ್ರವಾಸಿಗರ ಆಕರ್ಷಿಸುತ್ತಿದ್ದ ಶಕ್ತಿಮಾನ್‌ ಆನೆ ಇನ್ನಿಲ್ಲ

12/06/2022, 20:14

ಮೈಸೂರು(reporterkarnataka.com): ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ತನ್ನ ನೀಳ ದಂತದ ಮೂಲಕ ಕೋಟಿಗಟ್ಟಲೆ ವನ್ಯಜೀವಿ ಪ್ರಿಯರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ಕಬಿನಿ ಭೋಗೇಶ್ವರ ಹಿರಿಯಾನೆ ಸಾವನ್ನಪ್ಪಿದೆ.

ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಎಲ್ಲರ ಆಕರ್ಷಣೆಯಾಗಿತ್ತು. ಉದ್ದ ದಂತಗಳಿಂದಲೇ ಫೇಮಸ್‌ ಆಗಿದ್ದ ಭೋಗೇಶ್ವರ ನಾಗರಹೊಳೆ, ಬಂಡೀಪುರ ವ್ಯಾಪ್ತಿಯಲ್ಲಿ ಹೆಚ್ಚಾಗು ಕಾಣಸಿಗುತ್ತಿತ್ತು. ಸಫಾರಿಯಲ್ಲಿ ಆಗಾಗ ಪ್ರವಾಸಿಗರಿಗೆ ಕಣ್ಣಿಗೆ ಬೀಳುತ್ತಿತ್ತು. ಸಫಾರಿಗೆ ಹೋಗುವವರ ಹೆಚ್ಚಿನ ನಿರೀಕ್ಷೆ ಇದರ ಮೇಲೆಯ ಇರುತ್ತಿತ್ತು.

ಈ ಆನೆ ಬಂಡೀಪುರ ವ್ಯಾಪ್ತಿಯ ಗುಂಡ್ರೆ ವಲಯದ ಅರಣ್ಯದಲ್ಲಿ ಶನಿವಾರ ಮೃತಪಟ್ಟಿದ್ದು, ವಯೋಸಹಜವಾಗಿ ಆನೆ ಸಾವನ್ನಪ್ಪಿದೆ ಎಂದು ಅರಣ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 

ಈ ಆನೆಗೆ 50ರಿಂದ 60 ವರ್ಷ ವಯಸ್ಸಾಗಿರಬಹುದು ಎನ್ನಲಾಗಿದೆ.

ಕಬಿನಿ ಹಿನ್ನೀರಿನಲ್ಲಿ ಇದೇ ವಯಸ್ಸಿನ ಮೂರ್ನಾಲ್ಕು ಆನೆಗಳಿದ್ದು ಅವುಗಳಲ್ಲಿ ಭೋಗೇಶ್ವರ ಆನೆಗೆ ಹೆಚ್ಚಿನ ಪ್ರಾಶಸ್ತ್ಯ. ಅಲ್ಲಿನವರು ಕಾಡಿನಲ್ಲಿ ಪೂಜೆ ಮಾಡುವ ಭೋಗೇಶ್ವರ ಹೆಸರನ್ನೇ ಈ ಗಂಡಾನೆಗೆ ನಾಮಕರಣ ಮಾಡಿದ್ದರು. ವನ್ಯಜೀವಿ ಪ್ರಿಯರು ಮಾತ್ರ ಇದನ್ನು ಮಿಸ್ಟರ್‌ ಕಬಿನಿ ಎಂದು ಕರೆಯುತ್ತಿದ್ದರು. ಸುಮಾರು 7/8 ಅಡಿ ಉದ್ದವಿರುವ ತನ್ನ ನೀಳ ದಂತಗಳು ನೆಲಕ್ಕೆ ತಾಕುತ್ತಿದ್ದವು. ಒಂದರ ಮೇಲೊಂದು ಕೊಂಬು ಬೆಳೆದಿದೆ. ತನ್ನ ರಾಜ ಗಾಂಭೀರ್ಯದೆ ನಡಿಗೆಯಿಂದ ಎಲ್ಲರ ಗಮನ ಸೆಳೆದಿದ್ದ ಭೋಗೇಶ್ವರನ ಸಾವು ವನ್ಯಪ್ರಿಯರಿಗೆ ಆಘಾತವಾಗಿದೆ.

ಕಳೆದ ಒಂದು ವಾರದ ಹಿಂದೆ ಮತ್ತೊಂದು ಆನೆ ಜೊತೆ ಜಗಳಕ್ಕಿಳಿದಿತ್ತು ಆಗಲಿಂದಲೂ ಆನೆ ಆರೋಗ್ಯದಲ್ಲಿ ಸ್ವಲ್ಪ ಆರೋಗ್ಯದಲ್ಲಿ ಏರು-ಪೇರು ಉಂಟಾಗಿದೆ. ಆದರೆ ಆನೆ ದೇಹದಲ್ಲಿ ಯಾವುದೇ ಗಾಯಗಳೂ ಕಂಡು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆನೆ ದಂತಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಮೈಸೂರು ಡಿಪೋಗೆ ಕಳುಹಿಸಲಾಗಿದೆ.

ಇನ್ನೂ ಆನೆಯ ಕಳೇಬರವನ್ನು ಸಂಸ್ಕಾರ ಮಾಡದೆ ಕಾಡು ಪ್ರಾಣಿಗಳಿಗೆ ಆಹಾರವಾಗಿ ಅಲ್ಲಿಯೇ ಬಿಡಲಾಗಿದೆ. ಹಲವಾರು ವನ್ಯಜೀವಿ ಸಾಕ್ಷ್ಯಚಿತ್ರಗಳು ಹಾಗೂ ಸಿನಿಮಾಗಳಲ್ಲೂ ಭೋಗೇಶ್ವರ ಕಾಣಿಸಿಕೊಂಡಿತ್ತು. ಜಗತ್ಪ್ರಸಿದ್ಧ, ಜಗದ ಎಲ್ಲಾ ಚಾನಲ್‌ಗಳಲ್ಲಿ ಕಾಣಿಸಿಕೊಂಡ ಹೆಗ್ಗಳಿಕೆ ಭೋಗೇಶ್ವರ ಪಾತ್ರವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು