9:44 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಕಾನೂನು ಕೈಗೆತ್ತಿಕೊಳ್ಳುವವರೇ ಎಚ್ಚರ: ಇನ್ನು ಮುಂದೆ ಜೈಲು ಗ್ಯಾರಂಟಿ !; ಎಫ್ಐಆರ್ ದಾಖಲಿಸುವುದು ಕಡ್ಡಾಯ

18/12/2021, 19:31

ರವಿ ಬಂಗೇರ ಮಂಗಳೂರು

info.reporterkarnataka@gmail.com

ಅಪರಾಧ ಮಾಡಿ ರಾಜಕಾರಣಿಗಳ ಪ್ರಭಾವ ಬೀರಿ ಇನ್ನು ಮುಂದೆ ಕಾನೂನು ಕೈಗಳಿಂದ ತಪ್ಪಿಸಿಕೊಳ್ಳುವುದು ಕಷ್ಟ ಸಾಧ್ಯ. ಪೊಲೀಸ್ ಠಾಣೆಗಳಲ್ಲಿ ರಾಜಕಾರಣಿಗಳ, ಜನಪ್ರತಿನಿಧಿಗಳ ಪ್ರಭಾವ 

ಇನ್ನು ನಡೆಯೋದಿಲ್ಲ. ಹಾಗಾಗಿ ಕಾನೂನು ಭಂಜಕರು ಎಚ್ಚರ ವಹಿಸುವುದು ಅಗತ್ಯ.

ರಾಜಕಾರಣಿಗಳು ಎಷ್ಟೇ ಒತ್ತಡ ಹಾಕಿದರೂ ಪೋಲಿಸರಿಗೆ ಕಾನೂನು ಪಾಲಿಸುವುದೊಂದೇ ಇನ್ನು ಉಳಿದ ದಾರಿ. ಯಾಕೆಂದರೆ ಇನ್ನು ಎಫ್ ಐಆರ್ ದಾಖಲಿಸುವುದು ಕಡ್ಡಾಯ. ಎಫ್ ಐಆರ್ ದಾಖಲಿಸದೆ ಕರ್ತವ್ಯಲೋಪ ಎಸಗುವ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಜನಸಾಮಾನ್ಯರಿಗೆ ನ್ಯಾಯ‌ ಒದಗಿಸುವ ಮತ್ತು ಪೊಲೀಸರ ಕಾರ್ಯವೈಖರಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಕ್ರಾಂತಿಕಾರಿ ತೀರ್ಪು ನೀಡಿದೆ. ವಿಚಾರಣೆಗೆ ಅರ್ಹ ದೂರು  ಎಂದು ಗೊತ್ತಾಗುವ ಸಂದರ್ಭಗಳಲ್ಲಿ ದೂರುದಾರರು ದೂರು ಕೊಟ್ಟಾಗ ತಕ್ಷಣ ಪ್ರಥಮ ಮಾಹಿತಿ ವರದಿ ಎಫ್ಐಆರ್ ದಾಖಲಿಸುವುದು ಕಡ್ಡಾಯವಾಗಿದೆ.

ಏನೇನು ಕಾರಣ ನೀಡಿ ಕರ್ತವ್ಯ ನೆರವೇರಿಸದಿದ್ದರೆ ಅಂತಹ ಪೊಲೀಸರ ವಿರುದ್ಧ ಸರಕಾರ, ಗೃಹ ಇಲ್ಲಾಖೆ, ಅಯಾ ಅಯಾ ಜಿಲ್ಲಾಡಳಿತ,   ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠ ಕಟ್ಟಾಜ್ಞೆ ಮಾಡಿದೆ.

ಎಫ್‌ಐಆರ್‌ ದಾಖಲಿಸದೆ ಪ್ರಾಥಮಿಕ ತನಿಖೆ ನಡೆಸುವಂತಿಲ್ಲ. ದೂರುದಾನ ನೀಡಿದ ದೂರು ಮೇಲ್ನೋಟಕ್ಕೆ ‘ ವಿಚಾರಣಾರ್ಹ ಅಪರಾಧ ‘ ಎಂದು ಕಂಡುಬರದಿದ್ದ ಪಕ್ಷದಲ್ಲಿ ಆಗ ತನಿಖಾಧಿಕಾರಿಯು ಈ ದೂರು ವಿಚಾರಣಾರ್ಹವೇ ಅಲ್ಲವೇ ಎಂದು ತಿಳಿಯಲು ಪ್ರಾಥಮಿಕ ತನಿಖೆಯನ್ನು 7 ದಿನದ ಒಳಗೆ ನಡೆಸಬೇಕಾಗುತ್ತದೆ ಎಂದು ಅದು ಹೇಳಿದೆ .   3 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವರ್ಷದ ಶಿಕ್ಷೆಗೆ ಗುರಿಯಾಗುವಂತಹ ಪ್ರಕರಣ ಮತ್ತು ವಾರಂಟ್ ಇಲ್ಲದೇ ಆರೋಪಿಯನ್ನು ಬಂಧಿಸಬಹುದಾದ ಪ್ರಕರಣಗಳು ವಿಚಾರಣಾರ್ಹ ಅಪರಾಧಗಳೆಂದು ಪರಿಗಣಿತವಾಗುತ್ತವೆ ಎಂದು ಮುಖ್ಯ ನ್ಯಾಯಮೂರ್ತಿ ಪಿ.ಸದಾಶಿವಂ , ನ್ಯಾಯಮೂರ್ತಿ ಗಳಾದ ಬಿ.ಎಸ್.ಚೌಹಾಣ್ , ರಂಜನಾ ಪ್ರಕಾಶ್ ದೇಸಾಯಿ , ರಂಜನ್ ಗೊಗೇಯಿ , ಎಸ್.ಎ.ಬೋಟ್ಟೆ ಅವರಿದ್ದ ಸಂವಿಧಾನ ಪೀಠ ವ್ಯಾಖ್ಯಾನಿಸಿದೆ.

ಇಂತಹ ಅಪರಾಧಗಳ ಕುರಿತು ಎಫ್‌ಐಆರ್ ದಾಖಲಿಸುವುದನ್ನು ಕಡ್ಡಾಯಗೊಳಿಸುವ ಉದ್ದೇಶಕ್ಕೆ ಕಾನೂನು ಮತ್ತು ಶಾಸಕಾಂಗದಲ್ಲಿ ಯಾವುದೇ ಸಂದಿಗ್ಧತೆ ಇಲ್ಲ. ಆದ್ದರಿಂದ ನೇರ ಪೋಲಿಸರಿಗೆ ದೂರು ದಾಖಲಿಸಲು ಅಧಿಕಾರ ಇದೆ ಎಂದು ಪೀಠವು ಸ್ಪಷ್ಟಪಡಿಸಿದೆ. 

ಉತ್ತರ ಪ್ರದೇಶದ ಹೆಣ್ಣು ಮಗಳಿಗೆ ಕಿರುಕುಳ ಜೊತೆಗೆ ಅಪಹರಣ ಮಾಡಿದ ಪ್ರಕರಣ ಸಂಬಂಧ 2012 ರ ಫೆಬ್ರವರಿಯಲ್ಲಿ ನ್ಯಾಯಮೂರ್ತಿ ದಲ್ಲರ್ ಭಂಡಾರಿ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ನೀಡಿದ್ದ ಆದೇಶವನ್ನು ಪರಾಮರ್ಶೆ ಮಾಡಲು ಸಂವಿಧಾನ ಪೀಠಕ್ಕೆ ಒಪ್ಪಿಸಲಾಗಿತ್ತು . 

ಈ ಪ್ರಕರಣದಲ್ಲಿ ಅಪಹರಣಕಾರರ ವಿರುದ್ಧ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ ಪೊಲೀಸರ ಕ್ರಮವನ್ನು ಪ್ರಶ್ನಿಸಿ ಬಾಲಕಿಯ ತಾಯಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈಗ ಈ ಅದೇಶ ದೇಶದ ಎಲ್ಲ ಪೋಲಿಸ್ ಠಾಣೆಗಳಿಗೂ ಅನ್ವಯ ಆಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು