10:42 PM Saturday18 - October 2025
ಬ್ರೇಕಿಂಗ್ ನ್ಯೂಸ್
ಕಾರ್ಮಿಕ ಅಧಿಕಾರಿ ಸೋಗಿನಲ್ಲಿ ವಸೂಲಿಗೆ ಯತ್ನ: ಸಾರ್ವಜನಿಕರು ಎಚ್ಚರದಿಂದಿರಲು ಇಲಾಖಾ ಅಧಿಕಾರಿಗಳ ಮನವಿ Mysore | ಎಚ್. ಡಿ. ಕೋಟೆಯಲ್ಲಿ ಹುಲಿ ದಾಳಿ: ಎರಡೂ ಕಣ್ಣು ಕಳೆದುಕೊಂಡ… ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್: ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಸಹಿತ 5… Kodagu | ಪವಿತ್ರ ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ: ಸಾಕ್ಷಿಯಾಗಲಿರುವ ಡಿಸಿಎಂ, ಸಚಿವರು, ಶಾಸಕರು ವಿರಾಜಪೇಟೆಯ ಪೆರಂಬಾಡಿ ಬಳಿ ಉದ್ಯಮಿ ಮೇಲೆ ಹಲ್ಲೆ, ದರೋಡೆ: ಪೊಲೀಸರು ಹೈ ಅಲರ್ಟ್ ಹಾಡು ನಿಲ್ಲಿಸಿದ ಯಕ್ಷ ಕೋಗಿಲೆ: ತೆಂಕುತಿಟ್ಟಿನ ಖ್ಯಾತ ಭಾಗವತ ದಿನೇಶ್ ಅಮ್ಮಣ್ಣಾಯ ಇನ್ನಿಲ್ಲ ನರೇಗಾ ಯೋಜನೆಯಡಿ ಕಾರ್ಮಿಕ ಆಯವ್ಯಯ: ಗ್ರಾಮ ಪಂಚಾಯತಿಗಳಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ Kodagu | ತುಲಾ ಸಂಕ್ರಮಣ: ತಲಕಾವೇರಿಗೆ ಭಾಗಮಂಡಲದ ಭಗಂಡೇಶ್ವರ ದೇವಾಲಯದಿಂದ ಆಭರಣ ಕಾವೇರಿಮನೆ ಚಂದನ್ ಗೆ ಯುಎನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಪ್ರದಾನ ಇಡೀ ರಾಜ್ಯಕ್ಕೆ ಸುಭಿಕ್ಷೆ, ಶಾಂತಿ, ನೆಮ್ಮದಿ, ಮಳೆ- ಬೆಳೆ-ರೈತರ ಸಮೃದ್ಧಿಗಾಗಿ ಹಾಸನಾಂಬೆಗೆ ಪ್ರಾರ್ಥನೆ…

ಇತ್ತೀಚಿನ ಸುದ್ದಿ

ಕಾಲಜ್ಞಾನಿ ಕೊಡೇಕಲ್ ಬಸವಣ್ಣನವರ ಜೋಡು ಪಲ್ಲಕ್ಕಿಯ ಮಹೋತ್ಸವ: ಭಾರೀ ಜನಸಾಗರ

17/11/2024, 17:35

ಶಿವು ರಾಠೋಡ್ ಕೊಡೇಕಲ್ ಯಾದಗಿರಿ

info.reporterkarnataka@gmail.com

ಕಾಲಜ್ಞಾನಿ ಕೊಡೇಕಲ್ ಬಸವಣ್ಣನವರ ಜೋಡು ಪಲ್ಲಕ್ಕಿಯ ಮಹೋತ್ಸವವು ಭಾನುವಾರ ಭಕ್ತ ಸಾಗರ ಜಯಘೋಷಗಳೊಂದಿಗೆ ಭಕ್ತಿ-ಸಂಭ್ರಮದಿಂದ ಜರುಗಿತು.
ಸ್ಥಳೀಯ ಬಸವಪೀಠದ 15ನೇ ಪೀಠಾಧಿಪತಿ ಶ್ರೀ ವೃಷಭಂದ್ರನಾಥ ಅಪ್ಪನವರ ನೇತತ್ವದಲ್ಲಿ ಹುಣ್ಣಿಮೆ ದಿನ ಜೋಡು ಪಲ್ಲಕ್ಕಿಗಳಿಗೆ ಚಿನ್ನ ಹಾಗೂ ಬೆಳ್ಳಿಯ ಕಳಸಾರೋಹಣ, ಅಷ್ಟವಿಧಾರ್ಚನೆಯ ಕಾಲಜ್ಞಾನ ವಚನಗಳ ಮಾಲಿಕೆಯಲ್ಲಿ ಪೂಜಾಧಿ ಕೈಂಕರ್ಯಗಳು ಅಹೋರಾತ್ರಿ ನಡೆಯಿತು‌
ಭಾನುವಾರ ಬೆಳಗ್ಗೆ ಬಸವಣ್ಣನವರ ಐಕ್ಯ ಸ್ಥಳ (ಊರಾನ ಗುಡಿ)ಯ ರಾಜಗಟ್ಟೆಯ ಮೇಲೆ ಅಲಂಕಾರ ಭೂಷಣವಾಗಿ ಕೂರಿಸಿದ್ದ ಜೋಡು ಪಲ್ಲಕ್ಕಿಗಳಿಗೆ ಶ್ರೀ ವೃಷಭಂದ್ರನಾಥ ಅಪ್ಪನವರು ಹಾಗೂ ಅರಸು ಮನೆತನದ ರಾಜಾ ಜೀತೇಂದ್ರ ನಾಯಕ ಹಾಗೂ ರಾಜಾ ವೆಂಕಟಪ್ಪ ನಾಯಕ ಜಹಾಗೀರದಾರ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಿದರು.
ನೆರೆದಿದ್ದ ಭಕ್ತರು ಕೊಡೇಕಲ್ ಚೆನ್ನ ಬಸವಣ್ಣ ಮಹಾರಾಜಕೀ ಜೈ .. ಭಕ್ತಿಯ ಜಯ ಘೋಷಣೆಯೊಂದಿಗೆ ಜೋಡು ಪಲ್ಲಕ್ಕಿ ಉತ್ಸವ ಸಾಗುತ್ತಿದ್ದಂತೆ, ದಾರಿಯುದ್ದಕ್ಕೂ ಭಕ್ತರು ಹೂ, ಉತ್ತತ್ತಿ, ಬಾಳೆಹಣ್ಣು, ಪನಿವಾರ, ಬತ್ತಾಸು, ಕಲ್ಲು ಸಕ್ಕರೆ ಎಸೆದು ಭಕ್ತಿ ಸಮರ್ಪಿಸಿದರು.
ಬಸವಣ್ಣನವರು ಕಾಲಜ್ಞಾನ ವಚನ ಬರೆದ ಸ್ಥಳ(ಪ್ಯಾಟಿಗುಡಿ)ದವರೆಗೆ ಸಾಗಿ ಬೆಳಗ್ಗೆ 10: 30ಕ್ಕೆ ಗಂಟೆಗೆ ಬಾರಾ ಬರೂತಿ ಸಂಪ್ರದಾಯದಂತೆ ಪಟ್ಟಣದ ಹರಗುರು ಚರಮೂರ್ತಿಗಳ ಸನ್ನಿಧಾನದಲ್ಲಿ ಮುಸ್ಲಿಂ ಹಣಗಿ ಮನೆತನದ ವ್ಯಕ್ತಿಯೋರ್ವರು ಮೊಹಮದ್ ಪೈಗಂಬರ್‌ರ ವಾಣಿಯನ್ನು ದೀನ್ ಜಗಾಯಿಸಿದ ನಂತರ ದೂಳಗಾಯಿ ಒಡೆಯಲಾಯಿತು. ಗ್ರಾಮದ ಧಣಿ, ನಾಡಗೇರ, ಕುಲಕರ್ಣಿ, ಮಾಲಿಪಾಟೀಲ್, ಪೊಲೀಸ್‌ ಪಾಟೀಲ್, ನೇಕಾರ ಹೀಗೆ ಪ್ರಮುಖ ಮನೆತನಗಳ ಹಿರಿಯರು ಧೂಳಗಾಯಿ ಒಡೆಯುವ ಸಂದರ್ಭದಲ್ಲಿ ಉಪಸ್ಥಿತರಿದ್ದು ಜಾತ್ರಾ ಮಹೋತ್ಸವಕ್ಕೆ ಮೆರಗು ನೀಡಿದರು. ಪಲ್ಲಕ್ಕಿ ಉತ್ಸವದ ಮೆರವಣೆಗೆ ಸಾಗುವ ದಾರಿಯುದ್ದಕ್ಕೂ ಬಸವ ಗುರು ಪರಂಪರೆಯ ಗುರುಗಳು, ಕೈಯಲ್ಲಿ ಕಾಲಜ್ಞಾನ ವಚನ ಗ್ರಂಥ ಮಾಲಿಕೆ ಹಿಡಿದು ಪಠಿಸುತ್ತಾ ಹಿಮ್ಮುಖವಾಗಿ ನಡೆದು ಸಾಗುತ್ತಿದ್ದರು. ನಂತರ ಪ್ಯಾಟಿ ಗುಡಿಯಲ್ಲಿರುವ ಹಿರಿಯ ಒಡೆಯ (ಹಿರೋಡೆ ದೇವರು) ಮುಂದೆ ಪ್ರೇತವನ್ನು ನಿಗ್ರಹಿಸಿದ ಕಾರ್ಯದಲ್ಲಿ ಅರ್ಚಕರು ಪಾಲ್ಗೊಂಡರು.
ಪಟ್ಟಣ ಸೇರಿದಂತೆ ಯಾದಗೇರಿಯ ಸುತ್ತಮುತ್ತಲಿನ ಜಿಲ್ಲೆಯ ಹಾಗೂ ವಿವಿಧ ತಾಲೂಕು ಗ್ರಾಮಗಳಿಂದ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಸಮೀಪದ ನಾರಾಯಣಪುರ , ಜೋಕಾನಂದಭಾವಿ , ಮಾರನಾಳ ತಾಂಡಾ , ಹಗರಟಗಿ, ಎಣ್ಣಿವಡಗೇರಿ, ಬಸಾಪುರ, ಕೋಟೆಗುಡ್ಡ, ಅಮ್ಮಾಪುರ (ಎಸ್.ಕೆ) ಹುಣಸಗಿ ಮತ್ತಿತರ ಭಕ್ತರು ಕಾಲಜ್ಞಾನಿ ಬಸವೇಶ್ವರನ ದರ್ಶನಕ್ಕೆ ಆಗಮಿಸಿದ್ದರು.


ಮಾಜಿ ಸಚಿವ ನರಸಿಂಹ ನಾಯಕ, ಹಣಮಂತ ನಾಯಕ (ಬಬಲುಗೌಡ), ಸಂಗಪ್ಪ ರಾಮನಗೌಡರ, ತಶೀಲ್ದಾರ್ ಬಸಲಿಂಗಪ್ಪ ನಾಯ್ಕೋಡಿ , ಉಪ ತಹಸೀಲ್ದಾರ್ ಕಲ್ಲಪ್ಪಗೌಡ ಜಂಜಿಗಡ್ಡಿ, ವಿ.ಎಸ್.ಹಾವೇರಿ. ಶಾಮಸುಂದರ ಜೋಶಿ,ವಿ.ವಿ.ಮಹಲಿನಮಠ, ರಂಗನಾಥ ದೊರೆ, ಹುಣಸಗಿ ತಾಲ್ಲೂಕಿನ ಎಲ್ಲಾ ಕಂದಾಯ ನಿರೀಕ್ಷಕ ಸರ್ವ ಧರ್ಮದ ಜನರು ಪಾಲ್ಗೊಂಡಿದ್ದರು.
ಪೊಲೀಸ್ ಸಿಬ್ಬಂದಿ ವರ್ಗದಿಂದ 5 ಸೆಕ್ಟರ್ ಮೂಲಕ ಬಂದೋಬಸ್ ಅನ್ನು ನೇರವೇರಿಸಿದರು. ಉಸ್ತುವಾರಿಯನ್ನು ನಾರಾಯಣಪುರ ಠಾಣೆಯ ಪಿಎಸ್‌ಐ ರಾಜಶೇಖರ್ ರಾಠೋಡ ವಹಿಸಿಕೊಂಡಿದ್ದರು. ಕೆಂಬಾವಿ ಪೊಲೀಸ್ ಠಾಣೆ, ಶಾಹಪುರ್ ಪೊಲೀಸ್ ಠಾಣೆಯ ಸಿಬ್ಬಂದಿ ಇದ್ದರು. ಕೊಡೆಕಲ್ ಗ್ರಾಮದ ಬಸವೇಶ್ವರ ದೇವಸ್ಥಾನದ ಜಾತ್ರಾ ಬಂದೋಬಸ್ತ್ ಸಂಪೂರ್ಣ ಜವಾಬ್ದಾರಿಯನ್ನು ಸಿಪಿಐ ಸಚಿನ್ ಚಲವಾದಿ ನೇತತ್ವದಲ್ಲಿ ನಡೆಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು