9:30 AM Thursday12 - March 2026
ಬ್ರೇಕಿಂಗ್ ನ್ಯೂಸ್
ರಾಯಚೂರು | ಒಳ ಮೀಸಲಾತಿ ಹೋರಾಟ: ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆಗೆ ಯತ್ನ ಮಲೆಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಕ್ತರಲ್ಲಿ ಹೆಚ್ಚಿದ ಆತಂಕ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್‌: ಮೌಲ್ಯ 10 ಪಟ್ಟು ಹೆಚ್ಚು,… ಪೆಟಾ ಮೇಲ್ಮನವಿ ವಜಾ: ರಾಜ್ಯದೆಲ್ಲೆಡೆ ಕಂಬಳ ಆಯೋಜನೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನಿಗಮಗಳಿಗೆ ಅನುದಾನ ಕಡಿತ, ಆಸ್ಪತ್ರೆಗಳಲ್ಲಿ ಔಷಧಿ ಇಲ್ಲ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಟೀಕೆ ಚಿಕ್ಕಮಗಳೂರು: ಹಸುವನ್ನು ತುಳಿದು ಕೊಂದ ಕಾಡಾನೆ; ಮಾಣಿಮಕ್ಕಿ ಗ್ರಾಮಸ್ಥರಲ್ಲಿ ಆತಂಕ ತೀರ್ಥಹಳ್ಳಿ: ಕುವೆಂಪು ಜೈವಿಕ ಅರಣ್ಯದಲ್ಲಿ ಹತ್ತಿಕೊಂಡ ಬೆಂಕಿ; ಅರಣ್ಯಾಧಿಕಾರಿಗಳ ದೌಡು ಝೂ ಅಭಿ ಇನ್ನಿಲ್ಲ: ಕಾಲು ನೋವಿನಿಂದ ಬಳಲುತ್ತಿದ್ದ ಮತ್ತಿಗೋಡು ಶಿಬಿರದ ಸಾಕಾನೆ ವಿವಿಧ ಬೇಡಿಕೆ ಆಗ್ರಹಿಸಿ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಮಾ.11ರಂದು ಪ್ರತಿಭಟನೆ ಮೋದಿ ದೇಶದ ಮಾರ್ಯಾದೆ ಹಾಳು‌‌ ಮಾಡುತ್ತಿದ್ದಾರೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಟು‌…

ಇತ್ತೀಚಿನ ಸುದ್ದಿ

ಕಾಡು ತೊರೆಯುವತ್ತ ಕಾಫಿನಾಡಿನ ನಕ್ಸಲ್ ರವೀಂದ್ರ‌ ಚಿತ್ತ: ಇನ್ನೊಂದು ವಾರದೊಳಗೆ ಶರಣಾಗತಿ?

28/01/2025, 21:48

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ಕರುನಾಡಲ್ಲಿ ನಕ್ಸಲರ ಯುಗಾಂತ್ಯವಾಗುವ ಎಲ್ಲ ಲಕ್ಷಣ ಕಂಡು ಬರುತ್ತಿದೆ. ಜನವರಿ 8 ರಂದು 6 ಜನ ನಕ್ಸಲರು ಶರಣಾಗತಿಯಾಗಿದ್ದು, ಉಳಿದ ಏಕೈಕ ನಕ್ಸಲ ರವೀಂದ್ರ ಅವರು ಕೂಡ ಶರಣಾಗತಿ ಬಯಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೊಂದು ವಾರದೊಳಗೆ ನಕ್ಸಲ ರವೀಂದ್ರ ಶರಣಾಗಲಿದ್ದಾರೆ ಎನ್ನಲಾಗಿದೆ.
ನಕ್ಸಲ್ ರವೀಂದ್ರ ಶರಣಾದರೆ ಕಾಫಿನಾಡು ಸದ್ಯಕ್ಕೆ
ನಕ್ಸಲರಿಂದ ಫುಲ್ ಫ್ರೀ ಆಗಲಿದೆ. ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರನ್ನು ಅವರು ಸಂಪರ್ಕ ಮಾಡಿದ್ದಾರೆ ಎನ್ನಲಾಗಿದೆ. ರವೀಂದ್ರ ಅವರು ಶೃಂಗೇರಿ ತಾಲೂಕಿನ ಕಿಗ್ಗಾದವರು. ಕಾಡಿನಲ್ಲಿ ಉಳಿದುಕೊಂಡಿದ್ದರು ಎನ್ನಲಾಗುತ್ತಿದ್ದ ರವೀಂದ್ರ ಶರಣಾಗತಿಗೆ ಇದೀಗ ಮುಂದಾಗಿದ್ದಾರೆ.
ಶರಣಾದ ನಕ್ಸಲರು ಆಯುಧಗಳನ್ನು ರವೀಂದ್ರನ ಕೈಯಲ್ಲಿ ಕೊಟ್ಟಿ ಬಂದಿದ್ದರು ಎನ್ನುವ ವದಂತಿ ಇತ್ತು. ಆ ಬಂದೂಕುಗಳ ಸಮೇತ ರವೀಂದ್ರ ಅವರು ಕೇರಳ‌ ಅಥವಾ ತಮಿಳುನಾಡಿಗೆ ಪರಾರಿ ಆಗಿದ್ದರು ಎಂ ಮಾಹಿತಿ ಯೂ ಇತ್ತು. ರವಿಂದ್ರ ಶರಣಾದರೆ ರಾಜ್ಯದ ಯಾರೂ ನಕ್ಸಲರ ಪಟ್ಟಿಯಲ್ಲಿ ಇಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು