3:24 AM Friday21 - August 2026
ಬ್ರೇಕಿಂಗ್ ನ್ಯೂಸ್
ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ… ಹನೂರು ಶೂಟೌಟ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​: ಅಚ್ಚರಿಯ ಮಾಹಿತಿ ಬಹಿರಂಗ ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್‌ಎಸ್‌ಎಸ್, ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್…

ಇತ್ತೀಚಿನ ಸುದ್ದಿ

ಜುಮಾಲಾಪುರ್: ಸಕಲ ಸರಕಾರಿ ಗೌರವಗಳೊಂದಿಗೆ ಯೋಧ ವೆಂಕಟೇಶ್ ರಾಠೋಡ ಅಂತ್ಯಕ್ರಿಯೆ

14/06/2025, 22:03

ಶಿವು ರಾಠೋಡ ಹುಣಸಗಿ ಬಾಗಲಕೋಟೆ

info.reporterkarnataka@gmail.com

ಬಾಗಲಕೋಟೆ ಕೇರೋಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಯೋಧ ವೆಂಕಟೇಶ್ ಎಂ. ರಾಠೋಡ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವಗ್ರಾಮ ಜುಮಾಲಾಪುರ್ ತಾಂಡದಲ್ಲಿ ನೆರವೇರಿತು.
ಬಾಗಲಕೋಟೆ ಕೇರೋಡಿ ಆಸ್ಪತ್ರೆಯಲ್ಲಿ ಬಿಳಿರಕ್ತ ಕಣಗಳು ಕಡಿಮೆ ಆಗಿರೋದರಿನ ಯೋಧ ಮೃತಪಟ್ಟಿದ್ದರು.


ಮೃತರ ಪಾರ್ಥಿವ ಶರೀರವು ಬಾಗಲಕೋಟ ಆಸ್ಪತ್ರೆಯಿಂದ ಗುರುವಾರ ಮಧ್ಯರಾತ್ರಿ ಬಾಗಲಕೋಟದಿಂದ ಬಂದು ಶುಕ್ರವಾರ ಬೆಳಿಗ್ಗೆ ಜುಮಾಲಾಪುರ್ ತಾಂಡಕ್ಕೆ ತರಲಾಯಿತು. ಅಲ್ಲಿಂದ ರಸ್ತೆ ಮೂಲಕ ಆಂಬುಲೆನ್ಸ್‌ ವಾಹನದ ಮೂಲಕ ತರಲಾಯಿತು. ನಾರಾಯಣಪುರದಿಂದ ಸುಮಾರ 15 ಕಿ.ಮೀ ದೂರವಿರುವ ಯೋಧನ ಸ್ವಗ್ರಾಮ ಜುಮಾಲಾಪುರ್ ತಾಂಡವರೆಗೆ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಯಿತು.
ಮೆರವಣಿಗೆ ಉದ್ದಕ್ಕೂ ವೆಂಕಟೇಶ ಅಮರ ರಹೇ, ಬೋಲೊ ಭಾರತ್ ಮಾತಾಕಿ ಜೈ’ ಘೋಷಣೆಗಳು ಮೊಳಗಿದವು. ಮೆರವಣಿಗೆಯಲ್ಲಿ ಮಾಜಿ ಸೈನಿಕರು, ಯುವಕರು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಮೃತ ಯೋಧನ ಪಾರ್ಥಿವ ಶರೀರ ಕಂಡು ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿತ್ತು. ಯೋಧನ ಅಗಲಿಕೆಗೆ ಗ್ರಾಮಸ್ಥರು ಕಂಬನಿ ಮಿಡಿದರು.
ಸ್ವಗ್ರಾಮದ ಹೊರವಲಯದಲ್ಲಿ ಸಾರ್ವಜನಿಕರಿಗೆ ಯೋಧನ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಹುಣಸಗಿ ತಶೀಲದಾರರು ಹುಸೇನಾ.ಎ. ಸರ್ಕಾವಾಸ್, ಕೊಡೇಕಲ್ ಉಪ ತಶೀಲದಾರರು ಕಾಲಪ್ಪ ಜಂಜಿಗಡ್ಡಿ. ಗ್ರಾಮ ಆಡಳಿತ ಅಧಿಕಾರಿ ಪರಶುರಾಮ, ಹುಣಸಗಿ ಪೊಲೀಸ್ ಸಿ.ಪಿ.ಐ ರವಿಕುಮಾರ್ , ಕೊಡೇಕಲ್ ಪಿ.ಎಸ್.ಐ ಅಯ್ಯಣ್ಣ ನವರು ಪೊಲೀಸ್ ಬಂದೋಬಸ್ತಾ ನೀಡಿದರು ಜೊತೆಯಲ್ಲಿ
ಮೃತ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು