ಇತ್ತೀಚಿನ ಸುದ್ದಿ
ಜಾರ್ಜ್ ಫ್ಲಾಯ್ಡ್‌ನ ಹತ್ಯೆ ಪ್ರಕರಣ: ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಗೆ 22.6 ವರ್ಷ ಸುದೀರ್ಘ ಜೈಲು
26/06/2021, 18:47
ವಾಷಿಂಗ್‌ಟನ್: ವಿಶ್ವಾದ್ಯಂತ ಭಾರಿ ಪ್ರತಿಭಟನೆಗೆ ಕಾರಣವಾದ ಅಮೆರಿಕದ ಜಾರ್ಜ್ ಫ್ಲಾಯ್ಡ್‌ನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿನ್ನಿಯಾದ ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್‌ಗೆ ಅಲ್ಲಿನ ನ್ಯಾಯಾಲಯ 22 ವರ್ಷ 6 ತಿಂಗಳು ಜೈಲು ಶಿಕ್ಷೆ ವಿಧಿಸಿದೆ.
ಡೆರಿಕ್ ತನ್ನ ಮೊಣಕಾಲನ್ನು ಜಾರ್ಜ್ ಫ್ಲಾಯ್ಡ್ ಅವರ ಕುತ್ತಿಗೆ ಇಟ್ಟು ಹಿಂಸೆ ನೀಡಿ ಕೊಂದಿದ್ದು ವಿಡಿಯೊದಲ್ಲಿ ದಾಖಲಾಗಿತ್ತು. ಈ ಜನಾಂಗೀಯ ಹಿಂಸಾಚಾರದ ವಿರುದ್ದ ವಿಶ್ವದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಪ್ರಸ್ತುತ ಘೋಷಿಸಲ್ಪಟ್ಟ ಶಿಕ್ಷೆಯು, ಕಪ್ಪು ಜನಾಂಗದ ವ್ಯಕ್ತಿಯನ್ನು ಹತ್ಯೆ ಮಾಡಿದ ಪೊಲೀಸ್ ಅಧಿಕಾರಿಯೊಬ್ಬನಿಗೆ ವಿಧಿಸಲಾದ ಅತ್ಯಂತ ಸುದೀರ್ಘ ಜೈಲು ಶಿಕ್ಷೆಯಾಗಿದೆ. ಡೆರೆಕ್ ಇತ್ತೀಚೆಗಷ್ಟೆ ತನ್ನ ವರ್ಷಗಳ ಮೌನವನ್ನು ಮುರಿದು, ಸಂತ್ರಸ್ತ ಕುಟುಂಬಕ್ಕೆ ಸಂತಾಪ ಸೂಚಿಸಿದ್ದನು.